ಸೋಕ್ಕೆರಿದ ಗೂಳಿಗಳ ಕಿರಾಣಿ ಅಂಗಡಿಯಲ್ಲಿಯೇ ಕದನ; ಸಾಮಾನುಗಳು ಪುಡಿ ಪುಡಿ! ಹತಾಶನಾದ ಅಂಗಡಿ ಮಾಲೀಕ…

ಬೀದಿಯಲ್ಲಿ ಸುತ್ತಾಡುವ ಪ್ರಾಣಿಗಳು ಮೈಯಲ್ಲಿ ಒಮ್ಮೊಮ್ಮೆ ಭೂತ ಸಂಚಾರವಾದಂತೆ ಮಾಡುತ್ತವೆ. ಆ ಸಮಯದಲ್ಲಿ ಯಾವಾಗ ಎಲ್ಲಿ ಏನು ಮಾಡುತ್ತವೆ ಎಂಬುದು ಹೇಳಲು ಸಾಧ್ಯವಿಲ್ಲ. ಎಷ್ಟೋ ಸಲ ಈ ಪ್ರಾಣಿಗಳಿಂದ ರಸ್ತೆಯ ಮೇಲೆ ವಾಹನಗಳ ಅಪಘಾತಗಳಾಗುವದನ್ನು ನೋಡುತ್ತೇವೆ, ಅಷ್ಟೇ ಅಲ್ಲ ಜನರ ಜೀವಕ್ಕೂ ಸಹ ಅಪಾಯ ಸಂಭವಿಸುತ್ತದೆ.

ಈಗ ಸೋಶಿಯಲ್ ಮೀಡಿಯಾದಲ್ಲಿ ಇದೇ ರೀತಿಯ ಒಂದು ವಿಡಿಯೋ ಹರಿದಾಡುತ್ತಿವೆ. ಈ ವಿಡಿಯೋ ಕಿರಾಣಿ ಅಂಗಡಿಯಲ್ಲಿಯದಿದೆ. ಈ ವಿಡಿಯೋದಲ್ಲಿ ಎರಡು ಮದವೇರಿದ ಗೂಳಿಗಳು ಕಿರಾಣಿ ಅಂಗಡಿಯೊಂದರಲ್ಲಿ ನುಗ್ಗಿ ಕಾಳಗ ನಡೆಸಿವೆ. ಲಕ್ಷ್ಮಿ ಟ್ರೇಡರ್ಸ್ ಹೆಸರಿನ ಈ ಅಂಗಡಿ ಇದ್ದು ಇದರ ಒಳಗೆ ಗೂಳಿಗಳು ಸೊಕ್ಕಿನಿಂದ ತಮ್ಮ ಶಕ್ತಿಯನ್ನು ಪ್ರದರ್ಶಿಸುತ್ತಿವೆ. ಅಂಗಡಿ ಮಾಲೀಕ ಕೌಂಟರ್ ಮೇಲಿಂದ ಹೆದರಿ ಒಳಗೆ ಓಡಿ ಹೋಗಿ ಅಲ್ಲಿಂದಲೇ ಎರಡೂ ಗೂಳಿಗಳನ್ನು ಹೊಡೆದೋಡಿಸುವ ವಿಫಲ ಪ್ರಯತ್ನ ಮಾಡುತ್ತಿದ್ದಾನೆ. ಅಂಗಡಿ ಮಾಲೀಕನ ಪ್ರಯತ್ನಕ್ಕೆ ಕ್ಯಾರೆ ಎನ್ನದ ಎರಡು ಗೂಳಿಗಳು ತುಂಬಾ ಶಕ್ತಿಯಿಂದ ಹೋರಾಡುತ್ತ ಕಾಳಗವನ್ನು ಮುಂದುವರಿಸಿವೆ. ಈ ಸಮಯದಲ್ಲಿ ಅಂಗಡಿಯಲ್ಲಿ ವಸ್ತುಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿವೆ.

ವಿಡಿಯೋ ನೋಡಿ

ಈ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ವಿಡಿಯೋ ನೋಡಿದ ಅನೇಕರು ಅನೇಕ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಮತ್ತು ಸಾವಿರಾರು ಜನರು ಲೈಕ್ ಮಾಡಿದ್ದಾರೆ.