ಸೋಫಾದ ಮೇಲೆ ಗೇಮ್ ಆಡುತ್ತಿತ್ತು ಮಗು; ಅಷ್ಟರಲ್ಲೇ ಬಳಿ ಬಂತು ಹೆಬ್ಬಾವು…ನೋಡಿ ಈ ವೈರಲ್ ವಿಡಿಯೋ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವೀಡಿಯೋಗಳ ಮೇಲೆ ಸಹಜವಾಗಿ ವಿಶ್ವಾಸ ವಿಡುವದು ತುಂಬಾ ಕಠಿಣವಾಗಿ ಬಿಡುತ್ತದೆ. ಕೆಲವೊಂದಂತೂ ಮೇಲಿಂದ ಮೇಲೆ ತುಂಬಾ ಸೂಕ್ಷ್ಮವಾಗಿ ನೋಡಬೇಕಾಗುತ್ತದೆ. ಆಗ ಮಾತ್ರ ವಿಶ್ವಾಸವಿಡಲು ಸಾಧ್ಯವಾಗುತ್ತದೆ.

ಈಗ ಇಂಥದ್ದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಚಿಕ್ಕ ಮಗು ಸೋಫಾದ ಮೇಲೆ ಮಲಗಿ ತನ್ನ ಮೊಬೈಲ್ ನಲ್ಲಿ ಗೇಮ್ ಆಡುತ್ತಿದೆ. ಅದರ ಮಗ್ಗುಲಲ್ಲಿಯೇ ಮಹಾಕಾಯವಾದ ಹೆಬ್ಬಾವು ಒಂದು ಬಂದಿದೆ. ಈ ದೃಶ್ಯ ನೋಡಿದಾಗ ಯಾರಿಗೆ ಆಗಲಿ ಆಶ್ಚರ್ಯವಾಗದೆ ಇರದು.

ಕೆಲವೇ ಕ್ಷಣಗಳ ಈ ವಿಡಿಯೋ ನೋಧರಿಗೆ ತುಂಬಾ ಗಾಬರಿಯನ್ನು ಸಹ ಉಂಟು ಮಾಡುತ್ತದೆ. ಸುಮಾರು 20 ಅಡಿ ಉದ್ದದ ಹೆಬ್ಬಾವು ಮನೆಯಲ್ಲಿ ಸುತ್ತಾಡುತ್ತಿರುವದು ಕಂಡು ಬರುತ್ತದೆ. ಇದು ಕೆಳಗೆ ನೆಲದಿಂದ ಸೋಫಾದವರೆಗೆ ಪಸರಿಸಿದೆ. ಇಬ್ಬರದೂ ತುಂಬಾ ಗಾಢ ಮೈತ್ರಿ ಇದ್ದಂತೆ ಮಗುವಿನ ಬಾಡಿ ಲಾಂಗ್ವೇಜ್ ನೋಡಿದಾಗ ಕಂಡು ಬರುತ್ತದೆ. ಯಾಕೆಂದರೆ ಹೆಬ್ಬಾವು ಮಗುವಿನ ತುಂಬಾ ಹತ್ತಿರವೇ ಇದೆ. ಈ ದೃಶ್ಯ ನೋಡಿದಾಗ ನಮಗೆ ತುಂಬಾ ಗಾಬರಿಯಾಗುತ್ತದೆ ಎಂಬುದು ನಿಜ. ಈ ಹೆಬ್ಬಾವಿನಿಂದ ಮಗುವಿನ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂಬಂತೆ ಕಂಡು ಬರುತ್ತದೆ.

ವಿಡಿಯೋ ನೋಡಿ

ಈ ವಿಡಿಯೋ ನೋಡಿದ ಅನೇಕ ನೇಟಿಜನ್ಸ್ ಗಳು ತಮ್ಮ ವಿವಿಧ ಪ್ರತಿಕ್ರಿಯೆಗಳನ್ನು ವ್ಯಕ್ತ ಮಾಡುತ್ತಿದ್ದಾರೆ. ಈ ವೀಡಿಯೋವನ್ನು royal_pythons ಹೆಸರಿನಿಂದ ಇನ್ಸ್ಟಾ ಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.