ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಅಜ್ಜ 66ನೇ ವಯಸ್ಸಿಗೆ ಮದುವೆ ಆಗಿದ್ದು ಏಕೆ? ಹುಡುಗಿ ಹೇಗೆ ಸಿಕ್ಕಳು? ಇದರ ಹಿಂದಿನ ಕಥೆನೇ ಬೇರೆ!

ಮದುವೆ ಎಂದರೆ ಯಾವುದೇ ವ್ಯಕ್ತಿಯ ಜೀವನದಲ್ಲಿಯ ಒಂದು ಸುಂದರ ಪರ್ವ. ಇದನ್ನು ವ್ಯಕ್ತಿಯು ಲಕ್ಷಾವಧಿ ರೂಪಾಯಿಗಳನ್ನು ಖರ್ಚು ಮಾಡುತ್ತಾನೆ. ಇದರ ಹಿಂದೆ ಆತನ, ಆಕೆಯ ಸುಂದರ ಭವಿಷ್ಯದ ಕಲ್ಪನೆ, ಕನಸು ಇರುತ್ತದೆ.

66 ವರ್ಷದ ಅಜ್ಜನೊಬ್ಬನು ಮದುವೆಯಾದ ಸುದ್ದಿಯು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತು. ನಮ್ಮ ಭಾರತೀಯರ ಮಾನಸಿಕತೆಯ ವಿಚಾರ ಮಾಡಲಾಗಿ ಈ ಮದುವೆಯ ಬಗ್ಗೆ ಋಣಾತ್ಮಕ ಚರ್ಚೆಗಳೇ ತುಂಬಾ ಆದವು. ಈ ಅಜ್ಜ ಜೀವನವಿಡೀ ಬ್ರಹ್ಮಚರ್ಯ ವಿರುವದಾಗಿ ಘೋಷಿಸಿದ್ದರು. ಇಲ್ಲಿಯವರೆಗೆ ಇವರ ಮನೆಯವರು ಮದುವೆಗಾಗಿ ಒಂದೇ ಸಮನೆ ತಾಪತ್ರಯವನ್ನು ಕೊಟ್ಟರೂ ಜಗ್ಗದ ವ್ಯಕ್ತಿ ಈಗ ಒಮ್ಮೆಲೆ 66 ನೇ ವರ್ಷಕ್ಕೆ ಮದುವೆಯಾದರು. ಇದಕ್ಕೆ ಕೊರೋನಾ ಕಾರಣವಾಯಿತು ಹೇಗೆ ಅಂತ ನೋಡಿ…..

ಈ ಅಜ್ಜನ ಹೆಸರು ಮಾಧವ ಪಾಟೀಲ್. ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಉರನ್ ತಾಲೂಕಿನವರು. ಕಳೆದ 36 ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ರಾಯಗಢ ಜಿಲ್ಲೆಯಲ್ಲಿ ಜ್ಯೇಷ್ಠ ಪತ್ರಕರ್ತರೆಂದು ಎಲ್ಲ ಕಡೆಗೆ ಗುರುತಿಸಿಕೊಂಡಿದ್ದಾರೆ. ಈಗ ಇವರು 66 ನೇ ಇಳಿವಯಸ್ಸಿನಲ್ಲಿ ಮಾಡಿಕೊಂಡ ಮದುವೆಯಿಂದ ಮತ್ತಷ್ಟು ಪ್ರಸಿದ್ಧಿಯನ್ನು ಪಡೆದಿದ್ದಾರೆ.

ಹಾಗೆ ನೋಡಲಾಗಿ 30 ನೇ ವಯಸ್ಸಿನಲ್ಲಿ ಇವರ ಎಂಗೇಜ್ ಮೇಂಟ್ ನಡೆದಿತ್ತು. ಯಾವುದೋ ಕೆಟ್ಟ ಗಳಿಗೆಯಿಂದಾಗಿ ಮದುವೆ ನಿಂತು ಹೋಯಿತು. ಇನ್ನೇನು ಮದುವೆಯಾಗಬೇಕೆಂದು ದಾರಿ ಕಾಯುವಾಗ ಮದುವೆಯೇ ನಿಂತಾಗ ಮದುವೆಯ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನೇ ಕಳೆದುಕೊಂಡರು. ಹೀಗಾಗಿ ಜೀವನವಿಡಿ ಮದುವೆಯಾಗದೆ ಬ್ರಹ್ಮಚರ್ಯನಾಗಿಯೇ ಇರುತ್ತನೆಂದು ನಿರ್ಧರಿಸಿದರು. ಆಗ ಮಾಧವ ರಾವ್ ಮದುವೆಯಾಗಬೇಕು ಎಂದು ಸಂಬಂಧಿಕರು ಪರಿಪರಿಯಾಗಿ ಬೇಡಿಕೊಂಡರು ಅದಕ್ಕೆ ಇವರು ಒಪ್ಪಲಿಲ್ಲ.

ಈಗ ಕೊರೋನಾ ಮಾತ್ರ ಅವರ ಕಣ್ಣು ತೆರೆಯಿಸಿತು. ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲಿಯೇ ಕುಳಿತುಕೊಂಡಾಗ ಏಕಾಂಗಿತನ ಕಾಡತೊಡಗಿತು. ಯಾರಾದರೂ ತಮ್ಮ ಜೊತೆಗೆ ಇರಬೇಕು ಎಂಬ ಭಾವನೆ ಮೂಡ ತೊಡಗಿತು. ಮಾಧವ್ ಪಾಟೀಲ್ ರ ವಯಸ್ಸು 66 ತಾಯಿಯ ವಯಸ್ಸು 88 ಇದೆ. ಇಂಥ ಸಂದರ್ಭದಲ್ಲಿ ಮನೆಯ ಜವಾಬ್ದಾರಿಯನ್ನು ಹೊರಲು ಯಾರಾದರೂ ಬೇಕು ಎಂಬ ಭಾವನೆ ಮನದಲ್ಲಿ ಹುಟ್ಟಿತು.

ಹೀಗಾಗಿ ಹುಡುಗಿಯ ಶೋಧ ನಡೆದಾಗ ಸಂಜನಾ ಹೆಸರಿನ ಮಹಿಳೆಯ ಜೊತೆ ಸಿಕ್ಕಿತು. ಸಂಜನಾಳ ವಯಸ್ಸು 45 ಇದ್ದು ಆಕೆಗೆ ಇದು ಎರಡನೆಯ ಮದುವೆಯಾಗಿದೆ. ಮೊದಲ ಮದುವೆ ಗಂಡನನ್ನು ಯಾವುದೋ ಕಾರಣದಿಂದ ವಿ ಚ್ಛೇ ದ ನೆ ಯನ್ನು ನೀಡಿದ್ದಾಳೆ. ಈಗ ಅಣ್ಣನ ಮನೆಯಲ್ಲಿ ಇರುತ್ತಿದ್ದಳು. ದುರದೃಷ್ಟವೆಂದರೆ ಆಕೆಯ ಅಣ್ಣ ಕೊರೋನಾ ಕಾರಣದಿಂದಾಗಿ ಮೃತಪಟ್ಟನು. ಹೀಗಾಗಿ ಸಂಜನಾಳು ಸಹ ಯಾರ ಆಧಾರವಿಲ್ಲದೆ ಒಬ್ಬಂಟಿಗಳಾದಳು. ಈ ಎಲ್ಲ ಕಾರಣಗಳಿಂದಾಗಿ ಸಂಜನಾ ತನಗಿಂತಲೂ 20 ವರ್ಷ ದೊಡ್ಡವರಾದ ಮಾಧವ್ ಅವರ ಜೊತೆಗೆ ಮದುವೆಗೆ ಒಪ್ಪಿದರು.

ಅಜ್ಜ ಮದುವೆಯಾದ, ಮುದುಕ ಮದುವೆಯಾದ ಎಂಬ ಕುಚೇಷ್ಟೆಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮಾಡಿದ್ದನ್ನು ಸಾಕಷ್ಟು ನೋಡಿದೆವು. ಆದರೆ ಅದರ ನಿಜಾಂಶ ಮಾತ್ರ ಯಾರಿಗೂ ಗೊತ್ತಿಲ್ಲ. ವಿಷಯ ತಿಳಿಯದೆ ಟ್ರೊಲ್ ಮಾಡುವದು ಸರಿಯಲ್ಲ. ಯಾರ ಯಾರ ಜೀವನದಲ್ಲಿ ಎಂಥ ಘಟನೆಗಳು ನಡೆದು ಹೋಗಿರುತ್ತವೆ ಯಾರಿಗೆ ಗೊತ್ತು? ಬರೀ ಕಣ್ಣಿಗೆ ಕಾಣುವದನ್ನಷ್ಟೆ ನೋಡಿ ತೀರ್ಮಾನಕ್ಕೆ ಬರುವದು ಎಷ್ಟು ಸರಿ?

ಇರಲಿ ಸದ್ಯ ಮದುವೆಯಾದ ನವ ದಂಪತಿಗಳಿಗೆ ಹರಸೋಣ, ಅವರ ವೈವಾಹಿಕ ಬಾಳಿನಲ್ಲಿ ಸದಾ ಆನಂದ, ಸಂತೋಷ ತುಂಬಿ ತುಳುಕಲಿ ಎಂದು ಆಶಿಸೋಣ.