ಸೌಂದರ್ಯ ಮತ್ತು ಸರಳತೆಗೆ ಹೆಸರುವಾಸಿಯಾಗಿದ್ದಾರೆ ಈ ಭಾರತೀಯ ಕ್ರಿಕೆಟಿಗನ ಪತ್ನಿ! ಫೋಟೋ ನೋಡಿ!

ಒಂದು ಕಾಲದಲ್ಲಿ ಭಾರತೀಯ ಕ್ರಿಕೇಟ್ ತಂಡದ ಪ್ರಸಿದ್ಧ ಆಟಗಾರರಾದ ವೀರೇಂದ್ರ ಸೆಹ್ವಾಗ್ ಅವರು ತಮ್ಮ ಕ್ರಿಕೇಟ್ ವೃತ್ತಿಯಲ್ಲಿ ಹಲವಾರು ಪಂದ್ಯಗಳಲ್ಲಿ ಉತ್ಕೃಷ್ಟ ಪ್ರದರ್ಶನವನ್ನು ನೀಡಿದ್ದಾರೆ. ವೀರೇಂದ್ರ ಸೆಹ್ವಾಗ್ ಇವರು ಭಾರತದ ಕ್ರಿಕೇಟ್ ಟೀಮಿನಲ್ಲಿ ಸಹಭಾಗಿಯಾಗುವದು ತುಂಬಾ ಕಷ್ಟಕರವಾಗಿತ್ತು. ಏಕೆಂದರೆ ಯಾವ ವೇಳೆಗೆ ಇವರು ಭಾರತದ ಟೀಮ್ ನಲ್ಲಿ ಸೇರಲು ಹೆಣಗಾಡುತ್ತಿದ್ದರು ಅದೇ ವೇಳೆಯಲ್ಲಿ ಅವರಿಗಿಂತ ಎಷ್ಟೋ ಆಟಗಾರರು ಮೊದಲಿನಿಂದಲೂ ಅವಕಾಶಕ್ಕಾಗಿ ಕಾಯುತ್ತಿದ್ದರು. ಆದುದರಿಂದ ಅಷ್ಟೊಂದು ಪ್ರತಿಸ್ಪರ್ಧಿಗಳು ಇದ್ದರೂ ಕೂಡಾ ಅವರಿಗಿಂತ ಮುಂಚೆ ಟೀಮ್ ನಲ್ಲಿ ಅವಕಾಶ ಪಡೆಯುವದು ಇವರಿಗೆ ಒಂದು ಪ್ರಕಾರದ ಸವಾಲು ಆಗಿತ್ತು.

ವೀರೇಂದ್ರ ಸೆಹ್ವಾಗ್ ಅವರು ಕೇವಲ ಆಟದ ಮೈದಾನದಲ್ಲಷ್ಟೇ ಅಲ್ಲ, ವೈಯಕ್ತಿಕ ಜೀವನದಲ್ಲಿಯೂ ಸಹ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಇದರಲ್ಲಿ ಮುಖ್ಯವಾದ ಸವಾಲು ಎಂದರೆ ತಮ್ಮ ಗರ್ಲ್ ಫ್ರೆಂಡ್’ಳನ್ನು ಪತ್ನಿಯನ್ನಾಗಿ ಮಾಡಿಕೊಳ್ಳುವದು. ವೀರೇಂದ್ರ ಸೆಹ್ವಾಗ್ ಅವರು ಆರತಿ ಅಹಲಾವತ್ ರೊಂದಿಗೆ ವಿವಾಹವಾದರು. ಆರತಿ ಮದುವೆಗಿಂತ ಮುಂಚೆ ಸುಮಾರು ವರ್ಷಗಳವರೆಗೆ ವೀರೇಂದ್ರ ಸೆಹ್ವಾಗ್ ಅವರ ಗರ್ಲ್ ಫ್ರೆಂಡ್ ಆಗಿದ್ದರು. ಅರತಿಯವರು ನೋಟದಲ್ಲಿ ತುಂಬಾ ಸುಂದರವಾಗಿದ್ದಾರೆ. ಇಬ್ಬರು ಬಹಳಷ್ಟು ಕಾಲದವರೆಗೆ ಉತ್ತಮ ಸ್ನೇಹಿತರಾಗಿದ್ದರು. ಇಬ್ಬರ ಅನೇಕ ವರ್ಷದ ಸ್ನೇಹವು ಪ್ರೀತಿಯಲ್ಲಿ ರೂಪಾಂತರವಾಗಲು 14 ವರ್ಷಗಳು ಬೇಕಾದವು.

ಆರತಿ ಮತ್ತು ವೀರೇಂದ್ರ ಸೆಹ್ವಾಗ್ ಒಬ್ಬರಿಗೊಬ್ಬರು ಪರಿಚಯವಾದ ಸಮಯದಲ್ಲಿ ಆರತಿ ಕೇವಲ 17 ವರ್ಷದವರಾಗಿದ್ದರು. ಸದ್ಯಕ್ಕೆ ಆರತಿಯವರನ್ನು ಅವರ ಸೌಂದರ್ಯ ಹಾಗೂ ಸರಳತೆಯಿಂದಲೂ ಸಹ ಗುರುತಿಸಲಾಗುತ್ತದೆ. ಸಾಧಾರಣವಾದ ಉಡುಪು ಧರಿಸಿದರು ಸಹ ಇವರು ತುಂಬಾ ಸ್ಟಾಯಲಿಶ್ ಡ್ರೆಸ್ ಪರಿದಾನ ಮಾಡಿದವರ ಹಾಗೆ ಸುಂದರ ಕಾಣುತ್ತಾರೆ.

ವೀರೇಂದ್ರ ಹಾಗೂ ಆರತಿಯ ಮದುವೆಯ ಸಲುವಾಗಿ ಮೊದಲು ಇಬ್ಬರ ಮನೆಯವರ ಒಪ್ಪಿಗೆ ಇರಲಿಲ್ಲ. ಏಕೆಂದರೆ ಸಂಬಂಧದಲ್ಲಿ ಇಬ್ಬರು ಒಬ್ಬರಿಗೊಬ್ಬರು ಅಣ್ಣ-ತಂಗಿ ಆಗುತ್ತಾರೆ. ಇಂತಹದ್ದುರಲ್ಲಿ ಅವರಿಬ್ಬರ ಮದುವೆ ಮಾಡುವದು ಯೋಗ್ಯವಲ್ಲ ಎಂಬುದು ಎರಡು ಪರಿವಾರದವರ ಅಭಿಪ್ರಾಯವಾಗಿತ್ತು. ಇಂತಹ ಪರಸ್ಥಿತಿಯನ್ನು ಎದುರಿಸುವದು ಹೇಗೆ ಎಂದು ಸೆಹ್ವಾಗ್ ಅವರಿಗೆ ಚೆನ್ನಾಗಿ ಗೊತ್ತಿತ್ತು. ಬಹಳಷ್ಟು ಪ್ರಯತ್ನದ ನಂತರ ಇವರಿಬ್ಬರ ಕುಟುಂಬದವರು ಮದುವೆಗೆ ಒಪ್ಪಿಕೊಂಡರು. ತದನಂತರ ಇವರಿಬ್ಬರ ಮದುವೆ ಸಹ ಮಾಡಿದರು. ವೀರೇಂದ್ರ ಹಾಗೂ ಆರತಿ ಇವರ ಮದುವೆ 22 ಏಪ್ರಿಲ್ 2004 ರಲ್ಲಿ ಜರುಗಿತು. ಸದ್ಯದಲ್ಲಿ ಇವರಿಗೆ ಇಬ್ಬರು ಮಕ್ಕಳಿದ್ದಾರೆ.

ಸೆಹ್ವಾಗ್ ಮತ್ತು ಆರತಿ ಇಬ್ಬರು ತಮ್ಮ ಸುಂದರವಾದ ಫೋಟೋಗಳನ್ನು ಸೋಶಿಯಲ್ ಮೀಡಿಯಾ ಅಕೌಂಟ್ ನಲ್ಲಿ ಶೇರ್ ಮಾಡುತ್ತಿರುತ್ತಾರೆ. ಇಬ್ಬರ ಫೋಟೋಗಳಿಗೆ ಅವರ ಫ್ಯಾನ್ಸ್ ಗಳು ತುಂಬಾ ಲೈಕ್ಸ್ ಕೂಡಾ ಮಾಡುತ್ತಾರೆ. ನಿಮಗೂ ಕೂಡಾ ಸೆಹ್ವಾಗ್ ಹಾಗೂ ಆರತಿಯವರ ಜೋಡಿ ಹೇಗೆ ಅನಿಸಿತು ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.