ಸೌರ ಶಕ್ತಿ ಉತ್ಪಾದನಾ ಕ್ಷೇತ್ರಕ್ಕೆ ಮುಖೇಶ್ ಅಂಬಾನಿ ಪ್ರವೇಶ: ಇನ್ನು ಚೀನಾದ ಮೇಲೆ ಅವಲಂಬಿತವಾಗುವ ಅಗತ್ಯವಿಲ್ಲ
ದೇಶದ ಅತ್ಯುನ್ನತ ಕಂಪನಿಗಳಲ್ಲಿ ಒಂದಾಗಿರುವ ರಿಲೆಯನ್ಸ್ ಇಂಡಸ್ಟ್ರೀಸ್ ಇದೀಗ ಸೌರಶಕ್ತಿ ಕ್ಷೇತ್ರದಲ್ಲೊಂದು ದೊಡ್ಡ ಸವಾಲನ್ನು ಎದುರಿಸಲು ಸಜ್ಜಾಗುತ್ತಿದೆ. ಮೂಲಗಳ ಪ್ರಕಾರ ರಿಲಯನ್ಸ್ ಇಂಡಸ್ಟ್ರೀಸ್ ಸೋಲಾರ್ ಪ್ಯಾನೆಲ್ ಗಳನ್ನು ತಯಾರಿಸುವ ಯೂರೋಪಿನ ಅತಿ ದೊಡ್ಡ ಕಂಪನಿ REC ಗ್ರೂಪ್ ಅನ್ನು ಖರೀದಿ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದು, ಶೀಘ್ರದಲ್ಲೇ ಇದು ನಡೆಯಬಹುದು ಎನ್ನಲಾಗಿದೆ. ಇದಕ್ಕಾಗಿ ರಿಲಯನ್ಸ್ ಚೀನಾ ನ್ಯಾಷನಲ್ ಕೆಮಿಕಲ್ ಕಾರ್ಪ್ ನೊಂದಿಗೆ ಮಾತುಕತೆಯನ್ನು ನಡೆಸುತ್ತಿದ್ದು, ಈ ಒಪ್ಪಂದವನ್ನು 1 ರಿಂದ 1.2 ಬಿಲಿಯನ್ ಡಾಲರ್ ಗಳಿಗೆ ಮಾಡಿಕೊಳ್ಳಬಹುದು ಎನ್ನಲಾಗಿದೆ. ಈ ಮೂಲಕ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಜಾಗತಿಕ ಉತ್ಪಾದನಾ ಸಾಮರ್ಥ್ಯಗಳಿಗೆ ಪ್ರವೇಶವನ್ನು ನೀಡುತ್ತಿದೆ.
ಕಂಪನಿ ಕೆಲವೇ ದಿನಗಳ ಹಿಂದೆ ಗ್ರೀನ್ ಎನೆರ್ಜಿ ಸೆಕ್ಟರ್ ಗೆ ತನ್ನ ಪ್ರವೇಶದ ಘೋಷಣೆಯನ್ನು ಮಾಡಿದೆ. ಮೂಲಗಳ ಪ್ರಕಾರ ಈ ಒಪ್ಪಂದಕ್ಕಾಗಿ
$ 500 ಗಳಿಂದ 600 ಮಿಲಿಯನ್ ಗಳವರೆಗಿನ ಹಣವನ್ನು ಜಾಗತಿಕ ಬ್ಯಾಂಕುಗಳಿಂದ ಸಂಗ್ರಹಿಸಲು ಮಾತುಕತೆಯನ್ನು ನಡೆಸುತ್ತಿದೆ. ಉಳಿದ ಹಣವನ್ನು ಈಕ್ವಿಟಿ ಮೂಲಕ ಸಂಗ್ರಹಿಸಲಾಗುವುದು ಎನ್ನಲಾಗಿದೆ. ಇನ್ನು REC ಗ್ರೂಪ್ ನ ಕೇಂದ್ರ ಕಛೇರಿ ನಾರ್ವೆಯಲ್ಲಿದ್ದು, ಈ ಕಂಪನಿಯ ರಿಜಿಸ್ಟ್ರೇಷನ್ ಸಿಂಗಪೂರ್ ನಲ್ಲಿ ಆಗಿದೆ. REC ಗ್ರೂಪ್ ಚೀನಾದ ಸರ್ಕಾರಿ ಕೆಮಿಕಲ್ ಕಂಪನಿ ಚೆಮ್ ಚೀನಾ ದ ಅಂತರರಾಷ್ಟ್ರೀಯ ಸದಸ್ಯನಾಗಿದೆ. ಚೆಮ್ಚಿನಾ ಪಿರೆಲ್ಲಿ ಟೈರ್ ಮತ್ತು ಸಿಂಜೆಂಟಾದಲ್ಲಿ ಅತಿ ದೊಡ್ಡ ಪಾಲನ್ನು ಹೊಂದಿದೆ.

REC ಫೋಟೋ ವೋಲ್ಟಾಯಿಕ್ ಅಪ್ಲಿಕೇಷನ್ಸ್ ಮತ್ತು ಮಲ್ಟಿ ಕ್ರಿಸ್ಟಲೈನ್ ವೇಫರ್ಸ್ ಗಾಗಿ ಸಿಲಿಕಾನ್ ಮೆಟೀರಿಯಲ್ಸ್ ಅನ್ನು ಉತ್ಪಾದನೆ ಮಾಡುತ್ತದೆ. ಇದರ ಜೊತೆಗೆ ಕಂಪನಿಯು ರೂಫ್ ಟಾಪ್ ಇನ್ಸ್ಟಾಲೇಶನ್, ಇಂಡಸ್ಟ್ರಿಯಲ್ ಮತ್ತು ಸೋಲಾರ್ ಪಾರ್ಕ್ ಗಳಿಗಾಗಿ ಸೋಲಾರ್ ಸೆಲ್ ಮತ್ತು ಮಾಡ್ಯೂಲ್ ಗಳನ್ನು ಸಿದ್ದಪಡಿಸುತ್ತದೆ. ಸೋಲಾರ್ ಇಂಡಸ್ಟ್ರಿ ಚೀನಾದ ಮೇಲೆ ಅವಲಂಬಿತವಾಗಿರುವುದು ವಿಶ್ವದ ಹಲವು ರಾಷ್ಟ್ರಗಳು ತೊಂದರೆಗೀಡಾಗಿದೆ. ಇದೇ ಕಾರಣದಿಂದಾಗಿಯೇ ಭಾರತ ಮತ್ತು ಅಮೆರಿಕಾ ದಂತಹ ದೊಡ್ಡ ಗ್ರಾಹಕ ರಾಷ್ಟ್ರಗಳು ಸ್ಥಳೀಯ ಕಂಪನಿಗಳಿಗೆ ಉತ್ತೇಜನ ನೀಡುತ್ತಿವೆ.
2019 ರಲ್ಲಿ ಸೋಲಾರ್ ಪ್ಯಾನೆಲ್ ಉತ್ಪಾದನೆ ಮಾಡಲು ಅಗತ್ಯವಿದ್ದ ಪಾಲಿಸಿಲಿಕಾನ್ ನ ಮೂರನೇ ಒಂದು ಭಾಗವು ಚೀನಾದ ಕ್ಸಿನ್ ಜಿಯಾಂಗ್ ಪ್ರಾಂತ್ಯದಿಂದ ಪೂರೈಕೆಯಾಗಿತ್ತು. ಆದರೆ ಈಗ ರಿನ್ಯೂ ಪಾವರ್, ಅದಾನಿ ಗ್ರೂಪ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಗಳು ದೊಡ್ಡ ಉತ್ಪಾದನಾ ಯೋಜನೆಗಳನ್ನು ಘೋಷಣೆ ಮಾಡಿವೆ. ಪ್ರಸ್ತುತ ದೇಶದ ಸೋಲಾರ್ ಸೆಲ್ ಉತ್ಪಾದನಾ ಸಾಮರ್ಥ್ಯವು ಸುಮಾರು 3 ಗಿಗಾವ್ಯಾಟ್ ಗಳಷ್ಟಿದೆ. ಆದರೆ ಇದು 280 GW ನ ಸೌರ ಶಕ್ತಿಯ ಗುರಿಯನ್ನು ಪೂರೈಸಲು ಸಾಧ್ಯವಿಲ್ಲ. ಮೂಲಗಳ ಪ್ರಕಾರ, ರಿಲಯನ್ಸ್ ಮತ್ತು REC ನಡುವಿನ ಒಪ್ಪಂದದ ಕುರಿತು ಔಪಚಾರಿಕ ಘೋಷಣೆಯನ್ನು ಇನ್ನು ಕೆಲವೇ ವಾರಗಳಲ್ಲಿ ಮಾಡಬಹುದಾಗಿದೆ ಎನ್ನುವ ನಿರೀಕ್ಷೆ ಇದೆ.
ಈ ಬಗ್ಗೆ ಈಗಲೇ ಯಾವುದೇ ಒಂದು ಪ್ರತಿಕ್ರಿಯೆಯನ್ನು ನೀಡಲು ರಿಲಯನ್ಸ್ ನಿರಾಕರಿಸಿದೆ. REC ಗ್ರೂಪ್ ತನಗೆ ಕಳುಹಿಸಿದ ಪ್ರಶ್ನೆಗಳಿಗೂ ಸಹಾ ಪ್ರತಿಕ್ರಿಯಿಸಿಲ್ಲ ಎನ್ನಲಾಗಿದೆ. REC ಯ ವಾರ್ಷಿಕ ಸಾಮರ್ಥ್ಯ 1.5 GW ಆಗಿದ್ದು, ಕಂಪನಿಯು 4 ಕೋಟಿಗೂ ಹೆಚ್ಚು ಸೋಲಾರ್ ಪ್ಯಾನಲ್ಗಳನ್ನು ಉತ್ಪಾದನೆ ಮಾಡಿದೆ. REC ಗ್ರೂಪ್ ಅನ್ನು 1996 ರಲ್ಲಿ ಸ್ಥಾಪನೆ ಮಾಡಲಾಯಿತು. 2000 ದಶಕದ ಆರಂಭದಲ್ಲಿ ಐಪಿಓ ಹೊರ ತಂದಿತು. ಆದರೆ ಬೇಡಿಕೆ ಅಷ್ಟಾಗಿ ಇರದ ಕಾರಣ ಕಂಪನಿಯು ತನ್ನ ಸ್ಥಾವರಗಳು ಮತ್ತು ಉತ್ಪಾದನೆಯನ್ನು 2011-12 ರಲ್ಲಿ ಸ್ಥಗಿತಗೊಳಿಸಿತ್ತು.

2013 ರಲ್ಲಿ REC ಕಡೆಯಿಂದ ನವೀಕರಿಸಬಹುದಾದ ಮತ್ತೊಂದು ಕಂಪನಿ ASA ಪ್ರಾರಂಭ ಮಾಡಲಾಯಿತು. 2014 ರಲ್ಲಿ, ಚೀನಾ ನ್ಯಾಷನಲ್ ಬ್ಲೂಸ್ಟಾರ್ REC ಸೋಲಾರ್ ಅನ್ನು $ 640 ದಶಲಕ್ಷಕ್ಕೆ ಖರೀದಿಸಿತು. ಇದನ್ನು ಎಲ್ಕೆಮ್ ನ ಜೊತೆ ಸೇರಿಸಲಾಗಿತ್ತು. 2011 ರಲ್ಲಿ, ಬ್ಲೂಸ್ಟಾರ್ ಎಲ್ಕೆಮ್ ಅನ್ನು $ 2 ಬಿಲಿಯನ್ ಗೆ ಖರೀದಿಸಿತು. ಇದು ಯುರೋಪಿನಲ್ಲಿ ಚೀನಾದ ಅತಿ ದೊಡ್ಡ ಪ್ರಮಾಣದ ಸ್ವಾಧೀನಗಳಲ್ಲಿ ಒಂದಾಗಿದೆ ಎನ್ನುವುದು ವಿಶೇಷವಾಗಿದೆ.