ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆದಾರರಿಗೆ ಇಲ್ಲಿದೆ ಸಿಹಿ ಸುದ್ದಿ!
ಪ್ರಸ್ತುತ ಕರೋನಾ ವಾತಾವರಣದಿಂದಾಗಿ, ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಎಲ್ಲರ ಮನಸ್ಥಿತಿ ನಕಾರಾತ್ಮಕವಾಗಿದೆ. ಈ ಪರಸ್ಥಿತಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಖಾತೆದಾರರಿಗೊಂದು ಒಳ್ಳೆಯ ಸುದ್ದಿ ತಂದಿದೆ. ಬ್ಯಾಂಕ್ ತನ್ನ ಗ್ರಾಹಕರ ಅನುಕೂಲಕ್ಕಾಗಿ ‘ವಿಡಿಯೋ KYC’ ಯನ್ನು ಪ್ರಾರಂಭಿಸಿದೆ. ಈ ಸೇವೆಗೆ ‘ವಿಕೆವೈಸಿ’ ಎಂದು ಹೆಸರಿಸಲಾಗಿದೆ.
ಇದರ ಮುಖಾಂತರ ಮನೆಯಲ್ಲಿಯೇ ಕುಳಿತುಕೊಂಡು ಡಿಜಿಟಲ್ ಪದ್ಧತಿಯಲ್ಲಿ ಕೆವೈಸಿ ಪ್ರಕ್ರಿಯೆಯನ್ನು ಮಾಡಲಾಗುತ್ತದೆ. ಇದಕ್ಕಾಗಿ ನೀವು ಬ್ಯಾಂಕಿಗೆ ಹೋಗಬೇಕಾಗಿಲ್ಲ. ‘ಎಸ್ಬಿಐ ಕಾರ್ಡ್’ ಈ ಸೇವೆಯನ್ನು ಪ್ರಾರಂಭಿಸಿದೆ. ಎಸ್ಬಿಐ ಕಾರ್ಡ್ ಇದು ಕ್ರೆಡಿಟ್ ಕಾರ್ಡ್ ಜಾರಿಗೆ ತರುವ ದೇಶದಲ್ಲಿಯ ದೊಡ್ಡ ಕಂಪನಿಗಳಲ್ಲಿ ಒಂದಾಗಿದೆ. ಸ್ಟೇಟ್ ಬ್ಯಾಂಕ್ಆಫ್ ಇಂಡಿಯಾ ದ ಸಹಾಯಕ ಕಂಪನಿಯ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ.

VKYC ಯಿಂದ ವಂಚನೆಯನ್ನು ತಡೆಗಟ್ಟುವಲ್ಲಿ ತುಂಬಾ ಸಹಾಯಕ ವಾಗುತ್ತದೆ, ಜೊತೆಗೆ ಕೆವೈಸಿ ಪ್ರಕ್ರಿಯೆಗೆ ಬೇಕಾದ ಸಮಯಕ್ಕಿಂತ ಅರ್ಧದಷ್ಟು ಸಮಯ ಉಳಿತಾಯವಾಗುವದೆಂದು ಕಂಪನಿ ತಿಳಿಸಿದೆ. ಯಾವುದೇ ವ್ಯಕ್ತಿಯನ್ನು ವೈಯಕ್ತಿಕವಾಗಿ ಭೇಟಿಯಾಗದೆ ಕೆವೈಸಿ ಪ್ರಕ್ರಿಯೆಯನ್ನು ಡಿಜಿಟಲ್ ರೂಪದಲ್ಲಿ ಪೂರ್ಣಗೊಳಿಸಲು ಇದು ಅನುವು ಮಾಡಿಕೊಡುತ್ತದೆ. ವೀಡಿಯೊ ಕೆವೈಸಿಗಾಗಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗಸೂಚಿಗಳ ಪ್ರಕಾರ ಜಿಯೋ ಟ್ಯಾಗಿಂಗ್, ರೆಕಗ್ನಿಷನ್, ಡೈನಾಮಿಕ್ ವೆರಿಫಿಕೇಶನ್ ಕೋಡ್, ಲೈವ್ ಫೋಟೋ ಕ್ಯಾಪ್ಚರ್ , ಫೇಸ್ ರೇಕಗ್ನಾಯಜರ್ ಮುಂತಾದ ತಂತ್ರಜ್ಞಾನವನ್ನು ಬಳಸಲಾಗಿದೆ. ಗ್ರಾಹಕರಿಗೆ ಯಾವುದೇ ತೊಂದರೆಯಿಲ್ಲದೆ ಶೂನ್ಯ ಸಂಪರ್ಕದೊಂದಿಗೆ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತಿದೆ ಎಂದು ಕಂಪನಿ ಹೇಳಿದೆ.