ಸ್ಟೇಷನ್ ಪ್ಲಾಟ್ ಫಾರ್ಮ್ ಮೇಲೆ ಹುಡುಗಿ ಮಾಡಿದ ಜಬರ್ದಸ್ತ್ ಡ್ಯಾನ್ಸ್ ನೋಡುತ್ತ ನಿಂತ ಪ್ರವಾಸಿಗರು! ವೈರಲ್ ಆಯ್ತು ವಿಡಿಯೋ.
ನೃತ್ಯವು ಹೆಚ್ಚು ಕಡಿಮೆ ಎಲ್ಲರನ್ನೂ ತನ್ನೆಡೆಗೆ ಸೆಳೆಯುತ್ತದೆ. ಅದರಲ್ಲೂ ಮುದ್ದು ಮಕ್ಕಳು ಡ್ಯಾನ್ಸ್ ಮಾಡಿದರಂತೂ ವೈರಲ್ ಆಗಲು ಸಮಯವೇ ಬೇಕಾಗುವದಿಲ್ಲ. ಈ ಪುಟ್ಟ ಮಕ್ಕಳ ಡ್ಯಾನ್ಸ್ ನೋಡು ನೋಡುತ್ತಲೇ ಇಂಟರ್ನೆಟ್ನಲ್ಲಿ ವೈರಲ್ ಆಗಿಬಿಡುತ್ತವೆ. ಸದ್ಯ ಪುಟ್ಟ ಹಾಗೂ ಅಷ್ಟೇ ಮುದ್ದು ಹುಡುಗಿಯು ಸ್ಟೇಷನ್ ನ ಪ್ಲಾಟ್ಫಾರ್ಮ್ ಮೇಲೆ ಮಾಡಿದ ಡಾನ್ಸ್ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಕತ್ತಾಗಿ ವೈರಲ್ ಆಗುತ್ತಿದೆ. ಇದೇ ಡ್ಯಾನ್ಸನ್ನು ನಿಮಗಾಗಿ ಲೇಖನದಲ್ಲಿ ತಂದಿದ್ದೇವೆ.
ಈ ಮುದ್ದು ಹುಡುಗಿಯು 90ರ ದಶಕದ ಸೂಪರ್ ಹಿಟ್ ಬಾಲಿವುಡ್ ಹಾಡಿಗೆ ಸ್ಟೇಷನ್ ಒಂದರ ಪ್ಲಾಟ್ ಫಾರ್ಮ್ ಮೇಲೆಯೇ ತುಂಬಾ ಸಖತ್ತಾಗಿ ಹೆಜ್ಜೆ ಹಾಕಿದ್ದಾಳೆ. ಈ ಹಾಡಿನಲ್ಲಿ ಹುಡುಗಿಯ ಡಾನ್ಸ್ ಮತ್ತು ಎಕ್ಸ್ಪ್ರೆಶನ್ ತುಂಬಾ ಮೆಚ್ಚುವಂತಿದೆ. ಸ್ಟೇಷನಲ್ಲಿ ನಿಂತು ಹುಡುಗಿಯ ಡಾನ್ಸ್ ನೋಡಿದವರು ಸಹ ಬಾಯಿ ತುಂಬಾ ಹೊಗಳುತ್ತಿದ್ದಾರೆ.
ವಿಡಿಯೋ ನೋಡಿ
View this post on Instagram
ಈ ಡಾನ್ಸ್ ನ್ನು instagram ನ ಮುಖಾಂತರ ಇಂಟರ್ನೆಟ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿವರೆಗೆ ಆರು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಮತ್ತು ಸುಮಾರು 60 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗನೊಬ್ಬ ಈ ಹುಡುಗಿಯಂತೂ ನನ್ನ ಮನಸ್ಸನ್ನು ಕದ್ದು ಬಿಟ್ಟಿದೆ ಎಂದಿದ್ದಾನೆ. ಈ ಹುಡುಗಿಯ ಮುಖದ ಮೇಲಿನ ಎಕ್ಸಪ್ರೆಶನ್ ಗಳು ಮಾಧುರಿ ದೀಕ್ಷಿತ್ ಗಿಂತಲೂ ತುಂಬಾ ಚೆನ್ನಾಗಿವೆ ಎಂದು ಇನ್ನೊಬ್ಬ ನೆಟ್ಟಿಗ ಪ್ರತಿಕ್ರಿಯೆ ನೀಡಿದ್ದಾನೆ.