ಸ್ಟೋಕ್ಸ್ ಹೆಂಡತಿಯ ಬಗ್ಗೆ ಕೆಟ್ಟದಾಗಿ ಮಾತಾಡಿದ ಸ್ಯಾಮ್ಯುಎಲ್ಸ್ ಗೆ ತರಾಟೆಗೆ ತೆಗೆದುಕೊಂಡ ಶೇನ್ ವಾರ್ನ್ ಮತ್ತು ಮೈಕೆಲ್ ವಾ! ಈ ಟ್ವೀಟ್ಸ್ ನೋಡಿ

ಕ್ರಿಕೆಟ್ ಆಟದಲ್ಲಿ ಎಷ್ಟೋ ಬಾರಿ ಪ್ರತಿಸ್ಪರ್ಧಿ ಆಟಗಾರರಲ್ಲಿ ಜಗಳ, ಟೀಕೆ-ಟಿಪ್ಪಣಿಗಳನ್ನು ಆಗುವುದನ್ನು ನೋಡುತ್ತೇವೆ. ಇವೆಲ್ಲ ಆಟದ ಒಂದು ಭಾಗವೆಂದು ತಿಳಿದುಕೊಂಡು ಸುಮ್ಮನಾಗುತ್ತಾರೆ. ಆದರೆ ಕೆಲವೊಂದು ಸಲ ಈ ಘಟನೆಗಳು ತುಂಬಾ ಅತಿರೇಕಕ್ಕೆ ಹೋಗಿ ಆಟದ ಮಜವನ್ನು ಹಾಳು ಮಾಡಿಬಿಡುತ್ತದೆ.

ಇದೇ ರೀತಿ ಇಂಗ್ಲೆಂಡ್ ನ ಆಟಗಾರ ಬೆನ್ ಸ್ಟೋಕ್ಸ್ ಮತ್ತು ವೆಸ್ಟ್ ಇಂಡೀಸ್ ಆಟಗಾರ ಮರ್ಲಾನ್ ಸ್ಯಾಮ್ಯುಲ್ ಇವರಿಬ್ಬರ ನಡುವೆ ಅನೇಕ ಬಾರಿ ಮೈದಾನದಲ್ಲಿ ಪಂದ್ಯದ ಸಂದರ್ಭದಲ್ಲಿ ವಾದವಿವಾದಗಳು ನಡೆದಿವೆ.

ಆದರೆ ಸದ್ಯ ಇವರಿಬ್ಬರ ಜಗಳ ಸೋಶಿಯಲ್ ಮೀಡಿಯಾ ದವರೆಗೆ ಬಂದಿದೆ. ಸ್ಯಾಮ್ಯುಲ್ ಅವರು ಬೆನ್ ಸ್ಟೋಕ್ಸ್ ಅವರ ಪತ್ನಿಯ ಮೇಲೆ ಟೀಕೆಯನ್ನು ಮಾಡಿದ್ದಾರೆ, ಅದು ತುಂಬಾ ಅಸಭ್ಯವಾಗಿ. ಈ ಟೀಕೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್ ವಾರ್ನ್ ಮತ್ತು ಮೈಕಲ್ ವಾನ್ ಇವರಿಬ್ಬರಿಗೂ ಸರಿಎನಿಸಿಲ್ಲ. ಆದ್ದರಿಂದ ಇವರಿಬ್ಬರು ಸ್ಯಾಮ್ಯುಯೆಲ್ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಟೀಕೆಯೂ ವರ್ಣಭೇದಕ್ಕೆ ಸಂಬಂಧವಾಗಿತ್ತು.

ಜಗಳ ಶುರುವಾಗಲು ಕಾರಣ…

ಐಪಿಎಲ್ ನ 13ನೇ ಸೀಸನ್ UAE ಯಲ್ಲಿ ಪ್ರಾರಂಭವಾಗುವ ಮುನ್ನ ಆಟಗಾರರಿಗೆ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಇದು ಬೆನ್ ಸ್ಟೋಕ್ಸ್ ಅವರಿಗೆ ತುಂಬಾ ಕಠಿಣವಾದ ಸಮಯವಾಗಿತ್ತು. ಒಂದು ಸಂದರ್ಶನದಲ್ಲಿ ಬೇನ್ ಅವರು ಈ ಕ್ವಾರಂಟೈನ್ ಬಗ್ಗೆ ಕೇಳಿದ ಪ್ರಶ್ನೆಗೆ, ಈ ರೀತಿಯ ಕ್ವಾರಂಟೈನ್ ನಲ್ಲಿ ನನ್ನ ಶತ್ರುವಿಗೂ ಸಹಿತ ಇಡಬಾರದು ಎಂದು ತನ್ನ ಸಹೋದರನಿಗೆ ಹೇಳಿದ್ದರು. ಆಗ ಬೆನ್ ಅವರ ಸಹೋದರ ಬೇನ್ ಅವರಿಗೆ ಹಾಸ್ಯದಲ್ಲಿ ಮರುಪ್ರಶ್ನೆ ಹೀಗೆ ಹಾಕಿದ್ದರು, ಅಂದರೆ ಮರ್ಲೋನ್ ಸ್ಯಾಮ್ಯುಯೆಲ್ ಅವರಿಗೆ ಇಡಲು ಇಷ್ಟವಾಗುತ್ತಾ ಎಂದು ಕೇಳಿದಾಗ ಬೆನ್ ಅವರು ‘ಇಲ್ಲ’ ಎಂದು ಸ್ಪಷ್ಟವಾಗಿ ಉತ್ತರಿಸಿದ್ದರು.

ಬೆನ್ ಅವರು ಹೇಳಿದ ಈ ಸಂಭಾಷಣೆ ಸ್ಯಾಮ್ಯುಯೆಲ್ ಅವರಿಗೆ ಇಷ್ಟವಾಗಿಲ್ಲ. ಆದ್ದರಿಂದ ಅವರು ನೇರ ಅವರ ಪತ್ನಿಯ ಮೇಲೆ ಅಸಭ್ಯವಾಗಿ ಟೀಕೆ ಮಾಡಿದ್ದಾರೆ.

ಅವರು ಮಾಡಿದ ಈ ಟೀಕೆ ಶೇನ್ ವಾರ್ನ್ ಮತ್ತು ಮೈಕಲ್ ವಾನ್ ಅವರಿಗೆ ಸರಿಯೆನಿಸದ ಕಾರಣ ಸೋಶಿಯಲ್ ಮೀಡಿಯಾದಲ್ಲಿ ಮರ್ಲಾನ್ ಅವರನ್ನು ಇವರಿಬ್ಬರೂ ತರಾಟೆಗೆ ತೆಗೆದುಕೊಂಡಿದ್ದಾರೆ.

ತಮ್ಮ ಟ್ವೀಟ್ ನಲ್ಲಿ ಮೈಕಲ್ ವಾನ್ ಅವರು ಹೀಗೆ ಹೇಳಿದ್ದಾರೆ, ಸ್ಯಾಮ್ಯುಯೆಲ್ ಅವರು ಬೆನ್ ಪತ್ನಿಯ ಬಗ್ಗೆ ಮಾಡಿದ ಟೀಕೆಯು ತುಂಬಾ ದುರ್ಭಾಗ್ಯ ಪೂರ್ಣವಾಗಿದೆ. ಒಂದು ಕಡೆ ನಮಗೆ ಕ್ರಿಕೆಟ್ ನಲ್ಲಿಂದ ವರ್ಣದ್ವೇಷವನ್ನು ಕಿತ್ತೆಸೆಯಬೇಕಾಗಿದೆ, ಇನ್ನೊಂದು ಕಡೆ ಸ್ಯಾಮ್ಯುಯಲ್ ಅವರು ಮಾಡಿದ ಈ ವಿಧಾನ ತುಂಬಾ ದುಃಖ ದಾಯಕವಾಗಿದೆ. ಸ್ಟೋಕ್ಸ್ ಅವರು ಮಾಡಿದ ವಿಧಾನಕ್ಕೆ ಇಷ್ಟೊಂದು ಮಹತ್ವ ಕೊಡಬಾರದಾಗಿತ್ತು.

ಸ್ಯಾಮ್ಯುಯೆಲ್ ಅವರ ಬಗ್ಗೆ ಶೇನ್ ವಾರ್ನ್ ಹೀಗೆ ಹೇಳುತ್ತಾರೆ, ಈ ಪರಿಸ್ಥಿತಿಯು ತುಂಬಾ ಬಿಕ್ಕಟ್ಟಿನದಾಗಿದೆ. ಈ ಸಂದರ್ಭದಲ್ಲಿ ಸ್ಯಾಮ್ಯುಯೆಲ್ ಅವರಿಗೆ ಸಹಾಯದ ಅವಶ್ಯಕತೆ ಇದೆ. ಯಾಕೆಂದರೆ ಅವರಿಗೆ ಯಾರೂ ಮಿತ್ರರಿಲ್ಲ ಮತ್ತು ಅವರ ಜೊತೆಗೆ ಇರುವ ಸಹಆಟಗಾರರು ಸಹಿತ ಅವರನ್ನು ಮೆಚ್ಚುವುದಿಲ್ಲ. ನೀನೊಬ್ಬ ಸಾಧಾರಣ ಕ್ರಿಕೆಟ್ ಆಟಗಾರ ಇದ್ದು ಮತ್ತಷ್ಟು ಸಾಧಾರಣ ವಾಗುವ ಅವಶ್ಯಕತೆಯಿಲ್ಲ.

ಸ್ಯಾಮ್ಯುಯೆಲ್ ಅವರು ಬೆನ್ ಸ್ಟೋಕ್ಸ್ ಅವರ ಶತ್ರು?

ಹಾಗೆ ನೋಡಲಾಗಿ ಇವರಿಬ್ಬರ ನಡುವೆ 2015 ರಿಂದ ವಾದ-ವಿವಾದಗಳು ಆಗುತ್ತಲೇ ಬಂದಿವೆ. ವೆಸ್ಟ್ ಇಂಡೀಸ್ ಗ್ರಾನೆಡಾ ದಲ್ಲಿ ಸ್ಯಾಮ್ಯುಯಲ್ ಅವರು ಬೆನ್ ಸ್ಟೋಕ್ಸ್ ಅವರನ್ನು ಔಟ್ ಮಾಡಿದ ನಂತರ ಮಾಕ್ ಸೆಲ್ಯೂಟ್ ಕೊಟ್ಟಿದ್ದರು. ಅದಾದ ನಂತರ 2016 ರಲ್ಲಿ ಟಿ 20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ಕೊನೆಯ ಓವರ್’ನಲ್ಲಿ ಸ್ಟೋಕ್ಸ್ ಅವರ ಬಾಲಿಗೆ ಬ್ರೇತವೆಟ್ ಅವರು 4 ಸರಣಿ ಸಿಕ್ಸ್ ಗಳನ್ನು ಬಾರಿಸಿ ಗೆಲವು ಸಾಧಿಸಿದ್ದರು. ಆ ಸಮಯದಲ್ಲಿ ನಾನ್ ಸ್ಟ್ರೈಕರ್ ಎಂಡ್ ನಲ್ಲಿ ಸ್ಯಾಮ್ಯುಯೆಲ್ ಇದ್ದರು.