ಮಗಧೀರ ನಟಿ ಕಾಜಲ್ ಅಗರವಾಲ್ ಶೇರ್ ಮಾಡಿರುವ ಈ ಫೋಟೋಗಳನ್ನು ನೋಡಿ ಸಿಕ್ಕಾಪಟ್ಟೆ ಬೈಯುತ್ತಿದ್ದಾರೆ ಜನ!
ಸೌಥ್ ಇಂಡಿಯನ್ ಸುಪ್ರಸಿದ್ಧ ನಟಿ ಕಾಜಲ್ ಅಗ್ರವಾಲ್ ರನ್ನು ಬಾಲಿವುಡ್ ಫಿಲ್ಮ್ ‘ಸಿಂಘಮ’ ನಲ್ಲಿ ಅಜಯ ದೇವಗನ್ ರೊಂದಿಗೆ ನೋಡಿದ್ದೇವೆ.
ಹೈದ್ರಾಬಾದ್:- ದಕ್ಷಿಣ ಭಾರತದ ಚಿತ್ರರಂಗದಲ್ಲಿ ತನ್ನ ಅದ್ಭುತ ನಟನೆ ಮತ್ತು ಮುಗ್ಧತೆಯಿಂದ ಧೂಳೆಬ್ಬಿಸಿದ ನಟಿ ಕಾಜಲ್ ಅಗ್ರವಾಲ್ ಅವರ ಇನ್ಸ್ಟಾಗ್ರಾಮ್ ನಲ್ಲಿಯ ಕೆಲವು ಫೋಟೋಗಳ ಬಗ್ಗೆ ಜನರು ತುಂಬಾ ಅಸಭ್ಯವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಈ ಫೊಟೋಗಳಲ್ಲಿ ಕಾಜಲ್ ಅಗ್ರವಾಲ್ ಅವರು ಸ್ವಿಮಿಂಗ್ ಪೂಲ್ ಹಾಗೂ ಸಮುದ್ರದ ದಂಡೆಯಲ್ಲಿ ಸ್ನಾನ ಮಾಡುವದನ್ನು ಕಾಣಬಹುದು. ಈ ಫೋಟೋಗಳು ಹಳೆಯದಾಗಿವೆ. ಈ ಫೋಟೊಗಳಿಗೆ ಐದು ಲಕ್ಷಕ್ಕಿಂತ ಹೆಚ್ಚು ಲೈಕ್ಸ್ ಕೂಡಾ ಬಂದಿವೆ. ಈ ಚಿತ್ರಗಳನ್ನು ನೋಡಿ ಬಹಳಷ್ಟು ಜನರು ಕಾಜಲ್ ಅವರನ್ನು ಹೋಗಳುತ್ತಿದ್ದರೆ, ಕೆಲವು ಟ್ರೋಲರ್ಸ್ ಗಳು ಇವರನ್ನು ಮತ್ತು ಇವರು ಧರಿಸಿರುವ ಬಟ್ಟೆಯ ಕುರಿತು ತುಂಬಾ ಟ್ರೋಲ್ ಮಾಡುತ್ತಿದ್ದಾರೆ.
ಸೋಶಿಯಲ್ ಮೀಡಿಯಾದ ಬಹಳಷ್ಟು ಯೂಜರ್ಸ್ ಈ ಫೋಟೋಗಳ ಮೇಲೆ ಸುಂದರ ಮತ್ತು ಅತೀ ಸುಂದರ, ಅದರ ಜೊತೆಗೆ ತಮ್ಮ ಪ್ರೀತಿಯನ್ನು ಕೂಡಾ ತೋರಿದ್ದಾರೆ. ಕೆಲವು ಯೂಜರ್ಸ್ ಈ ಫೋಟೋ ನೋಡಿ ಹಲವಾರು ಕಾಮೆಂಟ್ ಬರೆದಿದ್ದಾರೆ. ಅದರಲ್ಲಿ ಒಬ್ಬರು, ‘ ನಿಮ್ಮನ್ನು ಈ ರೂಪದಲ್ಲಿ ನೋಡಿ ನನ್ನ ಜೀವನವೇ ಬದಲಾಯಿತು’. ಇನ್ನೊಬ್ಬರು ,’ ನೀವು ಬಹಳಷ್ಟು ಸುಂದರವಾಗಿದ್ದೀರಿ. ನಿಮ್ಮೊಂದಿಗೆ ನನಗೆ ಪ್ರೀತಿ ಆಗಿದೆ’. ಆದರೆ ಕೆಲವು ಜನರು ತುಂಬಾ ಅಸಹ್ಯವಾಗಿ ಕಾಮೆಂಟ್ ಮಾಡುತ್ತಿದ್ದಾರೆ.
ನೋಡಿ ಬೀಚ್ ನಲ್ಲಿ ಎಂಜಾಯ್ ಮಾಡುತ್ತಿರುವ ಕಾಜಲ್ ಅಗ್ರವಾಲ್ ಅವರ ಫೋಟೋಗಳು.
ಗಮನಾರ್ಹ ವಿಷಯ ಏನೆಂದರೆ ಕಾಜಲ್ ಅಗ್ರವಾಲ್ ಯಾವಾಗ ಬಾಲಿವುಡ್ ನಲ್ಲಿ ಪಾದಾರ್ಪಣೆ ಮಾಡಿದರೋ ಆಗ ಬಾಲಿವುಡ್ ನಲ್ಲಿ ಸಹ ಧೂಳೆಬ್ಬಿಸಿದ್ದಾರೆ. ಅವರು ರೋಹಿತ್ ಶೆಟ್ಟಿ ಕಾಪ್-ಯೂನಿವರ್ಸ ಸೀರಿಜಿನ ಮೊದಲನೆಯ ಚಿತ್ರ ‘ಸಿಂಘಮ’ ನಲ್ಲಿ ಅಜಯ ದೇವಗನ್ ಅವರೊಂದಿಗೆ ಪ್ರಮುಖ ಪಾತ್ರ ವಹಿಸಿದ್ದರು. ಅಷ್ಟೇ ಅಲ್ಲ ಟೇಲಿವಿಜನ್ ನಲ್ಲಿ ಯಾವಾಗ ಸೌಥ್ ಇಂಡಿಯನ್ ಚಿತ್ರಗಳು ಕಾಣಿಸಿಕೊಳ್ಳಲು ಪ್ರಾರಂಭ ವಾದವೋ , ಆಗ ಉತ್ತರ ಭಾರತದಲ್ಲಿ ಎಲ್ಲಕ್ಕಿಂತ ಮುಂಚೆ ಕಾಜಲ್ ಅವರ ಕುರಿತು ಜನರ ಮನಸ್ಸಲ್ಲಿ ತುಂಬಾ ಪ್ರೀತಿ ಮೂಡಿತು. ಕಾಜಲ್ ಜನರಿಗೆ ತುಂಬಾ ಮೆಚ್ಚುಗೆ ಆದರು. ‘ಮಗಧೀರಾ’ ಇದು ಕಾಜಲ್ ಅವರ ಎಲ್ಲಕ್ಕಿಂತ ದೊಡ್ಡ ಫಿಲ್ಮ್ ಎಂದು ಪರಿಗಣಿಸಲಾಗುತ್ತದೆ. ಇದು ಬಾಹುಬಲಿ ಡೈರೆಕ್ಟರ್ ಎಸ್ ಎಸ್ ರಾಜಮೌಳಿಯವರು ಬಾಹುಬಲಿ ತರಹವೆ ಈ ಫಿಲ್ಮ್ ಮಾಡಿದ್ದರು. ಇದುಕೂಡಾ ಒಂದು ದುಬಾರಿ ವೆಚ್ಚದ ಫಿಲಂ ಆಗಿತ್ತು.
ಕಾಜಲ್ ಅವರು ಮೂಲತಃ ಉತ್ತರ ಭಾರತದದವರಾಗಿದ್ದಾರೆ. ಇವರು ಮೂಲತಃ ಪಂಜಾಬ ಕುಟುಂಬದವರು. ಇವರ ತಂದೆ ಬಿಜನೆಸ್’ದ ಕಾರ್ಯಕ್ಕಾಗಿ ಮುಂಬಯಿಗೆ ಹೋದರು ಮತ್ತು ಅಲ್ಲಿಯೇ ನೆಲೆಯೂರಿದರು. ನಂತರ ಕಾಜಲ್ ಅವರು 2004 ರಲ್ಲಿ ಬಾಲಿವುಡ್ ಫಿಲ್ಮ್ ‘ಕ್ಯೋಂ! ಹೊ ಗಯಾ ನಾ’ ಮುಖಾಂತರ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿದರು. ಆದರೆ ಬಾಲಿವುಡ್ ನಲ್ಲಿ ತಮಗೆ ಬೇಕಾದಷ್ಟು ಕೆಲಸ ಸಿಗದ ಕಾರಣ ಅವರು 2007 ರಲ್ಲಿ ಟಾಲಿವುಡ್ ಇಂಡಸ್ಟ್ರಿಯ ಕಡೆಗೆ ತೆರಳಿದರು. ಅದರ ನಂತರ ಇವರು ತಮಿಳ್-ತೆಲಗು ಭಾಷೆಯ ಫಿಲ್ಮ್ ನಲ್ಲಿ ಕೂಡಾ ಯಶಸ್ಸು ಕಂಡುಕೊಂಡರು. ತದನಂತರ 2011 ರಲ್ಲಿ ‘ಸಿಂಘಮ’ ಮತ್ತು 2013 ರಲ್ಲಿ ‘ಸ್ಪೆಷಲ್-26’ ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಂಡರು.
ಈ ವರ್ಷ ಕಾಜಲ್ ಅಗ್ರವಾಲ್ ಹಿಂದಿ ಫಿಲ್ಮ್ ‘ಮುಂಬಯಿ ಸಾಗಾ’ ನಲ್ಲಿ ಕಾಣಿಸಿಕೊಳ್ಳಬಹುದು. ಅಲ್ಲದೆ ದಕ್ಷಿಣದ ಎಲ್ಲಕ್ಕಿಂತ ಹೆಚ್ಚು ಪ್ರಸಿದ್ಧ ನಿರ್ದೇಶಕ ಹಾಗೂ ಆಕ್ಟರ್ ಜೋಡಿಯಾದ ಶಂಕರ-ಕಮಲ್ ಹಾಸನ್ ರೊಂದಿಗೆ ‘ಇಂಡಿಯನ್-2’ ನಲ್ಲಿ ಸಹ ಕಾಣಿಸಿಕೊಳ್ಳಬಹುದು.