ಸ್ಯಾಂಡಲ್ ವುಡ್ ನ ನಟ, ನಟಿಯರು ಮತ್ತು ಅವರ ನಿಜವಾದ ಹೆಸರುಗಳು!!
ಇಂದು ಕೆಜಿಎಫ್ ಚಿತ್ರದ ಮುಖಾಂತರ ಇಡೀ ದೇಶಕ್ಕೆ ಕನ್ನಡ ಚಿತ್ರರಂಗದ ಕುರಿತು ಪರಿಚಯವಾಗಿದೆ. ಮೊದಲಿಗೆ ಕೆಲವು ಜನರಿಗೆ ಮಾತ್ರವಷ್ಟೇ ಕನ್ನಡ ಚಿತ್ರರಂಗದ ಕುರಿತು ಪರಿಚಯ ಇತ್ತು ಆದರೆ ಇಂದು ಅನೇಕ ಚಿತ್ರಗಳ ಮೂಲಕ ನಮ್ಮ ಸ್ಯಾಂಡಲ್ ವುಡ್ ಹಾಗೂ ಹೀರೋಗಳ ಹೆಸರು ಸಹ ಇಂದು ಜನಮನದಲ್ಲಿ ಮೆರೆಯುತ್ತಿದೆ. ಪ್ರಸ್ತುತವಾಗಿ ನಮ್ಮ ಸ್ಯಾಂಡಲ್ ವುಡ್ ನ ನಟರು ಮತ್ತು ಅವರ ನಿಜವಾದ ಹೆಸರುಗಳು ಏನಿದ್ದವು ಎಂಬುದು ನಾವು ನಿಮಗೆ ತಿಳಿಸಿ ಕೊಡಲಿದ್ದೇವೆ. ಸಾಕಷ್ಟು ನಟರು ತಮ್ಮ ರಿಯಲ್ ಹೆಸರನ್ನು ಬದಲಾಯಿಸಿ ಮತ್ತೊಂದು ಹೆಸರನ್ನು ಸ್ವೀಕರಿಸಿದ್ದಾರೆ.ಹಾಗಿದ್ದರೆ ಬನ್ನಿ ನೋಡೋಣ ಕನ್ನಡದ ನಟರು ಮತ್ತು ಅವರ ನಿಜವಾದ ಹೆಸರುಗಳು ಏನಂತ.
1 . ಡಾ. ರಾಜಕುಮಾರ್

ಡಾ. ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಶ್ರೇಷ್ಠ ನಟರು ಹಾಗೂ ಸ್ಯಾಂಡಲ್ ವುಡ್ ಕಟ್ಟುವಲ್ಲಿ ಉನ್ನತ ಪಾತ್ರ ಇವರದ್ದು. ಇವರ ನಿಜವಾದ ಹೆಸರು ‘ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್‘ ಎಂದಿದೆ. ಇವರೊಬ್ಬ ಉತ್ತಮ ನಟ ಹಾಗೂ ಹಾಡುಗಾರರು ಸಹ ಆಗಿದ್ದರು.
2 . ವಿಷ್ಣುವರ್ಧನ್

ವಿಷ್ಣುವರ್ಧನ್ ಅವರ ನಿಜವಾದ ಹೆಸರು ‘ಸಂಪತ್ ಕುಮಾರ್’. ಇವರೊಬ್ಬ ಉನ್ನತ ನಟ, ಹಾಡುಗಾರ ಮತ್ತು ನಿರ್ಮಾಪಕರು ಸಹ ಆಗಿದ್ದರು. ಇವರು ಡಬಲ್ ರೋಲ್ ಪಾತ್ರ ಮಾಡುವ ಮುಖಾಂತರ ಎಲ್ಲಕ್ಕೂ ಹೆಚ್ಚು ಚಿತ್ರಗಳಲ್ಲಿ ಡಬಲ್ ರೋಲ್ ಮಾಡಿದ ಏಕೈಕ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
3 . ಅಂಬರೀಶ್

ಅಂಬರೀಶ್ ಅವರು ಸಹ ಚಂದನವನ ಬೆಳೆಸಲು ತುಂಬಾ ಶ್ರಮ ಪಟ್ಟಿದ್ದಾರೆ. ಇವರ ಅನೇಕ ಚಿತ್ರಗಳು ತುಂಬಾ ಹಿಟ್ ಆಗಿವೆ. ಇವರ ನಿಜವಾದ ಹೆಸರು ‘ ಮಲವಳ್ಳಿ ಹುಚ್ಚೆ ಗೌಡಾ ಅಮರನಾಥ’.
4 . ಜಗ್ಗೇಶ್

ಜಗ್ಗೇಶ ಇವರೊಬ್ಬ ಹಾಸ್ಯ ನಟ ಎಂದು ಗುರುತಿಸಲಾಗಿದೆ. ಇವರ ನಿಜವಾದ ಹೆಸರು ‘ ಈಶ್ವರ ಗೌಡಾ’. ಇವರ ಹಲವಾರು ಚಿತ್ರಗಳು ಹಿಟ್ ಆಗಿವೆ. ಇವರನ್ನು ಹಾಸ್ಯ ಸಾಮ್ರಾಟ್ ಎಂದರೆ ತಪ್ಪಾಗಲ್ಲ.
5 . ದರ್ಶನ್

ದರ್ಶನ್ ಇವರೊಬ್ಬ ತುಂಬಾ ಫ್ಯಾನ್ಸ್ ಹೊಂದಿದ ನಟ. ಇವರ ನಿಜವಾದ ಹೆಸರು ‘ಹೇಮಂತ್ ಕುಮಾರ್’. ಇವರು ಇದುವರೆಗೆ ಸುಮಾರು ಐವತ್ತಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರಿವೆ ಡಿ ಬಾಸ್ ಅಂತಲೂ ಕರೆಯುತ್ತಾರೆ.
6 . ಪುನೀತ್

ಪುನೀತ್ ಎಂದರೆ ಸದ್ಯಕ್ಕೆ ಎಲ್ಲರ ಕಣ್ಣಲ್ಲಿ ನೀರು ಬರುತ್ತೆ. ರಾಜಕುಮಾರ್ ಎಂದೇ ಪ್ರಸಿದ್ಧಿ ಪಡೆದಿರುವ ಪುನೀತ್ ಅವರ ನಿಜವಾದ ಹೆಸರು ‘ ಲೋಹಿತ್. ಇವರ ಸಾಮಾಜಿಕ ಕಾರ್ಯವನ್ನು ನಿಮಗೆಲ್ಲ ಗೊತ್ತೇ ಇದೆ ಹೇಳುವ ಅವಶ್ಯಕತೆ ಏನಿಲ್ಲ. ನಮ್ಮನ್ನು ಆಗಲಿ ಎಷ್ಟೋ ದಿನಗಳಾದರೂ ಸಹ ಇಂದಿಗೂ ಅವರ ನೆನಪು ಮಾತ್ರ ಜನಮಾನಸದಲ್ಲಿ ಇದೆ.
7 . ಯಶ್

ಯಶ್ ಇವರ ಹೆಸರು ಇಂದು ಜಗತ್ತಿನಾದ್ಯಂತ ಮೆರೆಯುತ್ತಿದೆ. ಏಕೆಂದರೆ ಕೆಲವು ದಿವಸಗಳ ಹಿಂದೆ ಬಿಡುಗಡೆಯಾದ ಕೆಜಿಎಫ್ 2 ಈ ಚಿತ್ರ ಸದ್ಯಕ್ಕೆ ಚಿತ್ರಮಂದಿರದಲ್ಲಿ ಧೂಳ್ ಎಬ್ಬಿಸುತ್ತಿದೆ. ಕನ್ನಡ ಚಿತ್ರರಂಗದ ಹೆಸರು ಇಡೀ ಜಗತ್ತಿಗೆ ಪರಿಚಯಿಸಿದ ಏಕೈಕ ನಟ ಎಂದರೆ ಅದು ಯಶ್. ಯಶ್ ಅವರ ನಿಜವಾದ ಹೆಸರು ‘ ನವೀನ್ ಕುಮಾರ್ ಗೌಡಾ’.
8 . ರಮ್ಯಾ

ರಮ್ಯಾ ಇವರ ನಿಜವಾದ ಹೆಸರು ‘ ದಿವ್ಯಾ ಸ್ಪಂದನಾ’ ಇದೆ.
9 . ರಕ್ಷಿತಾ

ರಕ್ಷಿತಾ ಅವರ ನಿಜವಾದ ಹೆಸರು ಶ್ವೇತಾ ಇದೆ.
10 . ಶೃತಿ

ಶೃತಿ ಅವರ ನಿಜವಾದ ಹೆಸರು ‘ಗಿರಿಜಾ‘ ಇದೆ.
11 . ಮಾಲಾಶ್ರೀ

ಮಾಲಾಶ್ರೀ ಯವರ ನಿಜವಾದ ಹೆಸರು ‘ಶ್ರೀ ದುರ್ಗಾ’