ಸ್ಯಾಂಡಲ್ ಹಾಕಿಕೊಂಡು ವಾಟರ್ ಫಾಲ್ಸ್ ನಲ್ಲಿ ಮಜಾ ಮಾಡಲು ಹೋದ ಯುವತಿ, ಮಜಾ ವಾಯಿತು ಸಜಾ!!!

ಬೇಸಿಗೆ ಅಂದರೆ ಮಾರ್ಚ್ ಏಪ್ರಿಲ್ ತಿಂಗಳು ಬಂದರೆ ಸಾಕು ರಜೆಯ ದಿನಗಳು ನಮಗೆ ನೆನಪಿಗೆ ಬರುತ್ತವೆ. ನಾವು ಚಿಕ್ಕವರಿರುವಾಗ ಮಾರ್ಚ್ ತಿಂಗಳು ಬಂದರೆ ಶಾಲೆಯಲ್ಲಿಯ ಪರೀಕ್ಷೆ ಮುಗಿದ ತಕ್ಷಣ ನಮ್ಮ ಅಜ್ಜಿಯ ಊರಿಗೆ ಅಥವಾ ಮಾಮಾನ ಊರಿಗೆ ಹೋಗಿ ಸುಟ್ಟಿಯ ದಿನಗಳು ಎಂಜಾಯ್ ಮಾಡುತ್ತಿದ್ದೆವು. ಅಲ್ಲದೆ ಕೆಲಸ ಮಾಡುವ ಅದೆಷ್ಟೋ ಜನರು ರಜೆಯನ್ನು ತಗೆದುಕೊಂಡು ಈ ತಿಂಗಳುಗಲ್ಲಿ ಹೆಚ್ಚಾಗಿ ಪ್ರವಾಸ ಮಾಡಿ ತಮಗೆ ಇಷ್ಟವಾದ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಏಕೆಂದರೆ ಈ ದಿನಗಳಲ್ಲಿ ಹೆಚ್ಚಾಗಿ ಎಲ್ಲ ಸ್ಥಳಗಳು ಎಲ್ಲರಿಗಾಗಿ ಓಪನ್ ಆಗಿರುತ್ತವೆ.

ಈಗಿನ ದಿನಗಳಲ್ಲಿ ಉತ್ತರ ಭಾರತದ ಅನೇಕ ಭಾಗಗಳಲ್ಲಿ ಮಳೆ ಬರುತ್ತದೆ. ಹೀಗಾಗಿ ಎಲ್ಲೆಡೆಗೂ ನೀರಿನ ಅಬ್ಬರಗಳು ಬರುತ್ತವೆ. ಇಂದು ಬೇಸಿಗೆಯ ಕಾಲದಲ್ಲಿ ಎಲ್ಲೆಡೆಗೂ ನೀರಿನ ಸ್ಥಳಗಳು ಅಂದರೆ ವಾಟರ್ ಫಾಲ್ಸ್ ನೋಡಲು ಸಿಗುವದಿಲ್ಲ ಏಕೆಂದರೆ ನೀರು ಹರಿಯುವದು ಕಡಿಮೆಯಾಗಿರುತ್ತದೆ. ಆದರೆ ಇಂದು ಎಲ್ಲರೂ ಸಹ ವಾಟರ್ ಫಾಲ್ಸ್, ವಾಟರ್ ಪಾರ್ಕ್ ಗೆ ಹೋಗಲು ತುಂಬಾ ಇಷ್ಟ ಪಡುತ್ತಾರೆ. ಬಿಸಿಲಿನಲ್ಲಿ ನೀರು ಅಡುವದು ಎಂದರೆ ಯಾರಿಗೆ ಇಷ್ಟವಿಲ್ಲ? ನೀವೇ ಹೇಳಿ. ಚಿಕ್ಕ ಮಕ್ಕಳಿಂದ ವಯೋಮಾನದ ವ್ಯಕ್ತಿಗಳ ವರೆಗೆ ಪ್ರತಿಯೊಬ್ಬರು ಬೇಸಿಗೆಯ ಬಿಸಿಲಿನಲ್ಲಿ ತಂಪು ಪಡೆದುಕೊಳ್ಳುವ ಸಲುವಾಗಿ ವಾಟರ್ ಪಾರ್ಕ್ ಗೆ ಹೋಗುತ್ತಾರೆ. ಆದರೆ ಕೆಲವೊಂದು ಸ್ಥಳಗಳಲ್ಲಿ ಇಂದಿಗೂ ಸಹ ನೈಸರ್ಗಿಕವಾದ ವಾಟರ್ ಫಾಲ್ಸ್ ಗಳು ನೋಡಲು ದೊರೆಯುತ್ತವೆ. ಹೀಗಾಗಿ ಎಷ್ಟೋ ಜನರು ವಾಟರ್ ಫಾಲ್ಸ್ ಗೆ ಹೋಗಿ ಆನಂದ ಪಡುತ್ತಾರೆ. ಆದರೆ ಕೆಲವೊಮ್ಮೆ ವಾಟರ್ ಫಾಲ್ಸ್ ನಲ್ಲಿ ಅವರು ಮಾಡುವ ಕೃತಿ ಮಾತ್ರ ಅವರಿಗೆ ಹಾನಿಯುಂಟು ಮಾಡುತ್ತದೆ.

ಪ್ರಸ್ತುತ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಒಬ್ಬ ಯುವತಿ ವಾಟರ್ ಫಾಲ್ಸ್ ಗೆ ಎಂಜಾಯ್ ಮಾಡಲು ಹೋಗಿರುತ್ತಾಳೆ. ವಾಟರ್ ಫಾಲ್ಸ್ ನಲ್ಲಿ ಕೆಲವು ದಪ್ಪವಾದ ಮತ್ತು ದೊಡ್ಡದಾದ ಬಂಡೆಗಲ್ಲು ಸಹ ಇರುತ್ತವೆ. ಈ ಯುವತಿ ಆ ವಾಟರ್ ಫಾಲ್ಸ್ ಮೇಲೆ ಹೋಗಬೇಕೆಂದು ಡಿಸೈಡ್ ಮಾಡುತ್ತಾಳೆ. ಹೋಗುವಾಗ ಕಾಲಲ್ಲಿ ಸ್ಯಾಂಡೆಲ್ ಹಾಕಿಕೊಂಡು ಹಾಗೆ ಹೋಗುತ್ತಾಳೆ ಆದರೆ ಬಂಡೆಗಲ್ಲು ಹತ್ತುವಾಗ ಯಾವುದೇ ಸಮಸ್ಯೆಇಲ್ಲದೆ ಹತ್ತುತ್ತಾಳೆ. ಕೆಲವು ಸಮಯದ ವರೆಗೆ ವಾಟರ್ ಫಾಲ್ಸ್ ಎಂಜಾಯ್ ಮಾಡಿ ಕೆಳಗೆ ಬರಲು ಪ್ರಯತ್ನಿಸುತ್ತಾಳೆ. ಸಾವಕಾಶವಾಗಿ ಕೆಳಗಡೆ ಬರುವಾಗ ದೊಡ್ಡ ಬಂಡೆ ಗಲ್ಲಿನ ಮೇಲೆ ಕಾಲಿಡುತ್ತಾಳೆ ಇನ್ನೇನು ಬಂಡೆಗಲ್ಲಿನ ಮೂಲಕ ಕೆಳಗೆ ಬರಬೇಕು ಅನ್ನೋವಷ್ಟರಲ್ಲಿ ಆಕೆಯ ಕಾಲು ಜಾರಿ ಕೆಳಗೆ ಬಿಳುತ್ತಾಳೆ. ಏಕೆಂದರೆ ಆ ಯುವತಿಯ ಕಾಲಲ್ಲಿ ಸ್ಯಾಂಡಲ್ ಇದ್ದವು. ಬಂಡೆಗಲ್ಲು ನೀರಿನಿಂದ ಹಸಿಯಾಗಿ ಇದ್ದುದರಿಂದ ಆ ಸ್ಯಾಂಡಲ್ ಜಾರಿ ಆಯತಪ್ಪಿ ಕೆಳಗೆ ಬಿಳುತ್ತಾಳೆ. ಪಾಪ ಅವಳಿಗೆ ಏನಾಗಿದೆ ಎಂಬುದು ಈ ವೀಡಿಯೋದಲ್ಲಿ ಮಾತ್ರ ತೋರಿಸಿಲ್ಲ.

ವೀಡಿಯೋ ನೋಡಿ.

 

View this post on Instagram

 

A post shared by Jack Jack (@_true_love_jack)

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ _true_love_jack ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋಗೆ ಹತ್ತು ಮಿಲಿಯನ್ ಗಿಂತಲೂ ಹೆಚ್ಚು ವಿವ್ಸ್ ಬಂದಿವೆ. ಅಲ್ಲದೆ ಸುಮಾರು ಐದು ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ.