ಸ್ವಂತ ಮಕ್ಕಳನ್ನೇ ಮದುವೆಯಾಗಬೇಕೆಂದು ಕಾನೂನಿನ ಮೊರೆ ಹೋದ ದಂಪತಿ: ಕಾರಣ ಕೇಳಿದರೆ ತಲೆ ತಿರುಗುವುದು ಗ್ಯಾರಂಟಿ!

ಸಾಮಾನ್ಯವಾಗಿ ನಾವು ಗಂಡು-ಹೆಣ್ಣು ಮದುವೆಯಾಗುವುದನ್ನು ಹಾಗೂ ಇತ್ತೀಚಿನ ವರ್ಷಗಳಲ್ಲಿ ಕೆಲವು ದೇಶಗಳಲ್ಲಿನ ವಿಶೇಷ ಕಾನೂನುಗಳ ಪರಿಣಾಮವಾಗಿ ಗಂಡು- ಗಂಡನ್ನು ಹಾಗೂ ಹೆಣ್ಣು- ಹೆಣ್ಣನ್ನು ಮದುವೆ ಆಗುವಂತಹ ವಿಚಿತ್ರ ಘಟನೆಗಳನ್ನು ಸಹಾನೋಡುತ್ತಿದ್ದೇವೆ. ಆದರೆ ಈಗ ಇವೆಲ್ಲಕ್ಕಿಂತ ವಿಭಿನ್ನವಾಗಿ ತಂದೆ-ತಾಯಿ ತಮ್ಮ ಸ್ವಂತ ಮಕ್ಕಳನ್ನೇ ಮದುವೆಯಾಗಲು ಬಯಸುತ್ತಾರೆ ಎನ್ನುವ ವಿಚಾರವನ್ನು ಎಲ್ಲಾದರೂ ಕೇಳಿರುವಿರಾ? ಬಹುಶಃ ಈ ಮಾತನ್ನು ಕೇಳಿದಾಗ ಆಶ್ಚರ್ಯ ಉಂಟಾಗಬಹುದು ಹಾಗೂ ಇದೊಂದು ಸುಳ್ಳು ಮಾಹಿತಿಯೂ ಇರಬಹುದು ಎಂದು ನೀವು ಅಂದುಕೊಳ್ಳಬಹುದು. ಆದರೆ ಈ ವಿಷಯ ವಾಸ್ತವವಾಗಿದ್ದು, ಅಮೆರಿಕದಲ್ಲಿ ದಂಪತಿಯೊಂದು ಕಾನೂನಿನ ಮುಂದೆ ಇಂತಹದೊಂದು ಮನವಿಯನ್ನು ಇಟ್ಟಿರುವ ವಿಚಿತ್ರವಾದ ಘಟನೆಯು ನಡೆದು ಎಲ್ಲರ ಗಮನವನ್ನು ಸೆಳೆದಿದೆ.

ನ್ಯೂಯಾರ್ಕ್ ನಲ್ಲಿ ವಾಸಿಸುತ್ತಿರುವ ದಂಪತಿಯೊಂದು ಕಾನೂನಿನ ಮುಂದೆ ಇಂತಹದೊಂದು ಮನವಿಯನ್ನು ಮಾಡಿಕೊಂಡಿದ್ದು, ತಮ್ಮ ಮನವಿಯಲ್ಲಿ ಅವರು ತಾವು ತಮ್ಮ ಮಕ್ಕಳನ್ನೇ ಮದುವೆಯಾಗಲು ಬಯಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅವರು ತಮ್ಮ ಮನವಿಯಲ್ಲಿ ಕೌಟುಂಬಿಕ ಸಂಬಂಧಗಳ ಕುರಿತಾಗಿ ಇರುವ ಕಾನೂನುಗಳನ್ನು ಕೊನೆಗಾಣಿಸಲು ಬಯಸುವುದಾಗಿ ಹೇಳಿದ್ದು, ಮದುವೆಯಾಗಲು ಬಯಸುವ ನಿರ್ಧಾರ ಯಾವುದೇ ಒಬ್ಬ ವ್ಯಕ್ತಿಯ ವೈಯಕ್ತಿಕ ನಿರ್ಧಾರ ಎಂದು ಅವರು ಹೇಳಿದ್ದಾರೆ. ಈ ವಿಷಯದಲ್ಲಿ ಅವರು ಮ್ಯಾನ್ ಹಟ್ಟನ್ ಫೆಡರಲ್ ಕೋರ್ಟ್ ನಲ್ಲಿ ಕಾನೂನಾತ್ಮಕ ದಾಖಲೆಗಳನ್ನು ಸಹಾ ಕೋರ್ಟ್ ನ ಮುಂದೆ ಇಟ್ಟಿದ್ದಾರೆ.

ನ್ಯೂಯಾರ್ಕ್‌ ನ ಬಂದು ಸ್ಥಳೀಯ ಪತ್ರಿಕೆಯ ಪ್ರಕಾರ ತಂದೆ-ತಾಯಿ ಕೋರ್ಟ್‌ ಮುಂದೆ ಇಂತಹದೊಂದು ಅಪೀಲನ್ನು ಮಾಡಿದ್ದಾರಾದರೂ, ಅವರು ತಮ್ಮ ಗುರುತನ್ನು ಸಾರ್ವಜನಿಕ ಗೊಳಿಸಬಾರದು ಎನ್ನುವ ಮನವಿಯೊಂದನ್ನೂ ಈ ವೇಳೆ ಮಾಡಿದ್ದಾರೆ ಎನ್ನಲಾಗಿದೆ. ಹೀಗೆ ತಮ್ಮ ಪರಿಚಯವನ್ನು ಬಚ್ಚಿಡಲು ಪ್ರಮುಖವಾದ ಕಾರಣ ಸಮಾಜದಲ್ಲಿ ಇಂದಿಗೂ ಇಂತಹ ಸಂಬಂಧಗಳನ್ನು ಜನರು ಒಪ್ಪುವುದಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ. ಕೋರ್ಟ್ ಮುಂದೆ ಸಲ್ಲಿಸಿರುವ ಮನವಿಯಲ್ಲಿ ತಂದೆ-ತಾಯಿ ಹಾಗೂ ಅವರ ಮಕ್ಕಳು ಎಲ್ಲರೂ ಸಹಾ ವಯಸ್ಕರಾಗಿರುವ ಬಗ್ಗೆ ಸ್ಪಷ್ಟವಾಗಿ ನಮೂದು ಮಾಡಿ ದಾಖಲೆಗಳನ್ನು ನೀಡಿದ್ದಾರೆ. ಅಲ್ಲದೇ ತಾವು ಮದುವೆಯಾಗ ಬಯಸಿರುವ ಮಕ್ಕಳು ತಮ್ಮ ಸ್ವಂತ ಮಕ್ಕಳ ಎನ್ನುವುದನ್ನು ಕೂಡ ತಿಳಿಸಿ ದಾಖಲೆಗಳನ್ನು ನೀಡಿದ್ದಾರೆ.

ಅಪೀಲಿ ನಲ್ಲಿ ತಂದೆ-ತಾಯಿ ಹಾಗೂ ಅವರ ಅವರ ಮಕ್ಕಳ ಸಂಪೂರ್ಣ ವಿಳಾಸವನ್ನು ನಮೂದು ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಅವರು ತಮ್ಮ ಅಪೀಲಿನಲ್ಲಿ ತಾವು ತಮ್ಮ ಮಕ್ಕಳಿಗೆ ಪ್ರೇಮ ನಿವೇದನೆಯನ್ನು ( ಪ್ರಪೋಜ್ ) ಮಾಡಬೇಕು ಎಂದು ಬಯಸಿದ್ದೆವು ಆದರೆ ಸಮಾಜದ ಮಾತುಗಳಿಗೆ ಹೆದರಿ ಅದನ್ನು ಕೂಡ ಮಾಡಲಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ತಾವೇನಾದರೂ ತಮ್ಮ ಮಕ್ಕಳನ್ನು ಮದುವೆಯಾದರೆ ಸಮಾಜವು ನಮ್ಮನ್ನು ಬ ಹಿ ಷ್ಕಾ ರ ಹಾಕುತ್ತದೆ ಎಂದು ತಿಳಿಸಿದ್ದಾರೆ. ಅಲ್ಲದೆ ತಾವು ತಮ್ಮ ಮಕ್ಕಳಿಗೆ ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ಯಾವುದೇ ತೊಂದರೆಯನ್ನು ಕೊಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ನ್ಯಾಯಾಲಯಕ್ಕೆ ಮದುವೆಯ ವಿಚಾರ ಮಾಡಿ ಮೇಲ್ಮನವಿ ಸಲ್ಲಿಸಿರುವ ದಂಪತಿ ಮದುವೆ ಎನ್ನುವುದು ಇಬ್ಬರು ವ್ಯಕ್ತಿಗಳ ನಡುವಿನ ವಿಶೇಷವಾದ ಸಂಬಂಧವಾಗಿರುತ್ತದೆ. ಇದನ್ನು ಪರಸ್ಪರ ಆಧ್ಯಾತ್ಮಿಕ ಅಭಿವ್ಯಕ್ತಿಯಾಗಿ ನೋಡಬೇಕು ಎಂದು ಹೇಳಿದ್ದಾರೆ. ನ್ಯೂಯಾರ್ಕ್‌ ನ ಕಾನೂನಿನ ಪ್ರಕಾರ ತಮ್ಮದೇ ಸ್ವಂತ ಕುಟುಂಬದವರನ್ನು ಮದುವೆಯಾದರೆ ನಾಲ್ಕು ವರ್ಷಗಳ ಕಾಲ ಜೈ ಲು ಶಿ ಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದಲೇ ಈ ದಂಪತಿಯು ಮಕ್ಕಳನ್ನು ವಿವಾಹವಾಗಲು ಕೋರ್ಟ್‌ ಮೊರೆ ಹೋಗಿದ್ದಾರೆ ಹಾಗೂ ಕೋರ್ಟ್ ಅನುಮತಿಗಾಗಿ ಕಾಯುತ್ತಿದ್ದಾರೆ.