ಸ್ವತಂತ್ರ ರಾಷ್ಟ್ರವೆಂದರೆ ಇದು; ಇಮ್ರಾನ್ ಖಾನ್ ವಿದೇಶ ಸಚಿವರಾದ S. ಜಯಶಂಕರ್ ಅವರನ್ನು ಹೊಗಳಿದ ವಿಡಿಯೋ ವೈರಲ್!
ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿಯಾದ ಇಮ್ರಾನ್ ಖಾನ್ ಅವರು ಮತ್ತೊಮ್ಮೆ ಭಾರತದ ವಿದೇಶ ನೀತಿಯ ಬಗ್ಗೆ ಪ್ರಚಂಡ ಜನ ಸಮುದಾಯದ ಮುಂದೆ ಹಾಡಿ ಹೋಗಳಿದ್ದಾರೆ. ಇವರು ಲಾಹೋರ್ನಲ್ಲಿ ಆಯೋಜಿಸಲಾದ ಒಂದು ರ್ಯಾಲಿಯಲ್ಲಿ ಭಾರತದ ವಿದೇಶ ಸಚಿವರಾದ S ಜಯಶಂಕರ್ ಅವರ ಒಂದು ವಿಡಿಯೋವನ್ನು ಪ್ಲೇ ಮಾಡಿದ್ದಾರೆ. ಅಷ್ಟೇ ಅಲ್ಲ ನಮ್ಮ ದೇಶವನ್ನು ಹೊಗಳಲು ಹಿಂದೆ ಮುಂದೆ ನೋಡಿಲ್ಲ. ರಷ್ಯಾದಿಂದ ಅಗ್ಗದ ಇಂಧನವನ್ನು ಭಾರತವು ಖರೀದಿಸದಂತೆ ಅಮೆರಿಕ ಒತ್ತಡ ಹಾಕುತ್ತಿತ್ತು. ಆದರೂ ಭಾರತ ಅಮೆರಿಕದ ಒತ್ತಡಕ್ಕೆ ಸ್ವಲ್ಪವೂ ಮಣಿಯದಿದ್ದದನ್ನು ಇಮ್ರಾನ್ ಖಾನ್ ಮುಖ್ಯವಾಗಿ ನಮೂದಿಸಿ ಭಾರತದ ಪ್ರಶಂಸೆ ಮಾಡಿದ್ದಾರೆ.
ಲಾಹೋರ್ ನಲ್ಲಿ ರ್ಯಾಲಿಗೆ ಸಂಭೋಧಿಸಿ ಮಾತನಾಡುವಾಗ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್, ಭಾರತ ತನ್ನ ದೇಶದ ಜನತೆಯ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ರಷ್ಯಾದಿಂದ ತೈಲ ಖರೀದಿಯನ್ನು ಸ್ಥಗಿತಗೊಳಿಸದೆ ಹಾಗೆಯೇ ಮುಂದುವರಿಸಿತು ಎಂದು ಹೇಳಿದ್ದಾರೆ.
ಸ್ವತಂತ್ರ ರಾಷ್ಟ್ರವೆಂದರೆ ಇದು…
ಈ ಸಂದರ್ಭದಲ್ಲಿ ಇಮ್ರಾನ್ ಖಾನ್ ಅವರು ಭಾರತದ ವಿದೇಶ ಸಚಿವರಾದ S ಜಯಶಂಕರ್ ಅವರ ವಿಡಿಯೋ ಕ್ಲಿಪ್ ಜನ ಸಮುದಾಯದ ಮುಂದೆ ಪ್ಲೇ ಮಾಡಿದ್ದಾರೆ. ಜೊತೆಗೆ ಭಾರತದ ವಿದೇಶಾಂಗ ನೀತಿಯನ್ನು ಹೊಗಳಲೇಬೇಕು ಎಂದು ಉಚ್ಚರಿಸಿದ್ದಾರೆ. ಭಾರತ ರಷ್ಯಾದಿಂದ ಇಂಧನವನ್ನು ಖರೀದಿಸಬಾರದೆಂಬ ಒತ್ತಡವನ್ನು ಅಮೆರಿಕ ಮೇಲಿಂದ ಮೇಲೆ ಹಾಕುತ್ತಿತ್ತು. ಆದರೆ ಅಲ್ಲಿಯ ವಿದೇಶಾಂಗ ಸಚಿವರಾದ S ಜಯಶಂಕರ್ ಅವರು ಅಮೆರಿಕಕ್ಕೆ ಸರಿಯಾದ ಉತ್ತರವನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ S ಜಯಶಂಕರ್ ಅವರು, ಯುರೋಪ್ ರಾಷ್ಟ್ರಗಳು ರಷ್ಯಾದಿಂದ ಪೆಟ್ರೋಲಿಯಂ ಪದಾರ್ಥಗಳನ್ನು ಖರೀದಿಸುತ್ತಿರುವಾಗ ನಮಗೆ ಗೈಡ್ ಮಾಡಲು ನೀವು ಯಾರು? ಮತ್ತು ನಾವು ನಮ್ಮ ಅವಶ್ಯಕತೆಗೆ ತಕ್ಕಂತೆ ರಶಿಯಾದಿಂದ ತೈಲವನ್ನು ಖರೀದಿಸುವ ಕೆಲಸವನ್ನು ಮುಂದುವರಿಸುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ, ಇಮ್ರಾನ್ ಖಾನ್ ಅವರು ಜಯಶಂಕರ್ ಅವರ ಪ್ರಶಂಸೆ ಮಾಡುತ್ತಾ ‘ಸ್ವತಂತ್ರ ರಾಷ್ಟ್ರವೆಂದರೆ ಇದು’ ಎಂದು ಹೇಳುತ್ತಾರೆ.
ವಿಡಿಯೋ ನೋಡಿ
जब पाकिस्तान का एक पूर्व प्रधानमंत्री अपनी रैली में भारत के विदेश मंत्री का वीडियो चलाए और सामने मौजूद भीड़ से कहे.. इसे कहते हैं आज़ाद मुल्क।..तो मुस्कुराइए और फख्र से कहिए जय हिंद! pic.twitter.com/VTWnAYjlBZ
— Pranay Upadhyaya (@JournoPranay) August 14, 2022
ಭಾರತ ಮತ್ತು ಪಾಕಿಸ್ತಾನ ಎರಡು ದೇಶಗಳ ತುಲನೆಯನ್ನು ಮಾಡುತ್ತಾ PTI ಪ್ರಮುಖರಾದ ಇಮ್ರಾನ್ ಖಾನ್ ಪಾಕಿಸ್ತಾನದಲ್ಲಿಯ ಸದ್ಯದ ಸರ್ಕಾರಕ್ಕೆ ಅಮೆರಿಕದ ಮುಂದೆ ಬಾಗುತ್ತಿರುವ ಕಾರಣದಿಂದಾಗಿ ಟೀಕೆ ಮಾಡುತ್ತಿದ್ದಾರೆ. ಸತ್ತೆಯಿಂದ ಇಳಿದ ನಂತರ ಇಮ್ರಾನ್ ಖಾನ್ ಅವರು ತಮ್ಮ ಭಾಷಣದಲ್ಲಿ ಮೇಲಿಂದ ಮೇಲೆ ಭಾರತದ ಪ್ರಶಂಸೆಯನ್ನು ಮಾಡುತ್ತಿದ್ದಾರೆ.