ಸ್ವತಃ ಪ್ರಯೋಗ ಮಾಡಿ ಕಪ್ಪು ಗೋದಿ ಬೆಳೆದ ರೈತ, ಈಗ ಕೋಟಿಗಟ್ಟಲೆ ಸಂಪಾದಿಸುತ್ತಿದ್ದಾನೆ. ಇವರು ಬೆಳೆದ ಗೋದಿಗೆ ಇಡೀ ದೇಶದಿಂದ ಡಿಮ್ಯಾಂಡ್ ಬರುತ್ತಿದೆ!
ಯಾವುದೇ ಒಂದು ಆವಿಷ್ಕಾರ, ಶೋಧದ ಹಿಂದೆ ಎಷ್ಟು ಅವಶ್ಯಕತೆ ಇರುತ್ತೇ, ಅಷ್ಟೇ ಪ್ರಯೋಗವು ಸಹಿತ. ಯಾವುದೇ ಕಾರ್ಯ ಅಥವಾ ಆವಿಷ್ಕಾರ ಒಂದೇ ಸಮಯಕ್ಕೆ ಯಶಸ್ಸು ಕೊಡುವದಿಲ್ಲ, ಹೊರತಾಗಿ ಸತತವಾಗಿ ಪ್ರಯೋಗ ಅಥವಾ ಪ್ರಯತ್ನ ಮಾಡುತ್ತಿದ್ದರೆ ಒಂದಲ್ಲ ಒಂದು ದಿನ ಯಶಸ್ಸು ಅನ್ನೋದು ನಿಮ್ಮ ಬೆನ್ನ ಹಿಂದೆ ಬಂದೆ ಬರುತ್ತದೆ. ನೀವು ಹೊಸ ಹೊಸ ಪ್ರಯೋಗ ಮಾಡುತ್ತಿದಂತೆ ನಿಮಗೆ ಕೆಲವು ಉತ್ಕೃಷ್ಟ ಸಂಗತಿಗಳ ಪರಿಚಯ ವಾಗುತ್ತೆ. ಇಂಥ ಉದಾಹರಣೆಗೆ ಮಧ್ಯಪ್ರದೇಶದ ಧಾರ ಊರಿನ ಒಬ್ಬ ರೈತ ವಿನೋದ ಚೌಹಾಣ್. ಇವರು ತಮ್ಮ ಹೊಲದಲ್ಲಿ ಕಪ್ಪು ಗೋಧಿ ಬೆಳೆಯುವ ಪ್ರಯೋಗ ಮಾಡಿ ಅದರಲ್ಲಿ ಇಂದು ಅವರು ಯಶಸ್ಸನ್ನು ಕಂಡಿದ್ದಾರೆ.
ವಿನೋದ ಅವರ ಕಪ್ಪು ಗೋಧಿಗೆ ಮಾರುಕಟ್ಟೆಯಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ. ಅವರು ಈ ಬಾರಿ ತಮ್ಮ 20 ಹೆಕ್ಟೇರ್ ಜಮೀನಿನಲ್ಲಿ ಕಪ್ಪು ಗೋಧಿಯನ್ನು ಬೆಳೆದಿದ್ದಾರೆ. ಇದರಿಂದ ಸುಮಾರು 200 ಕ್ವಿಂಟಲ್ ಗಳಷ್ಟು ಕಪ್ಪು ಗೋಧಿ ಉತ್ಪಾದನೆಯಾಗಿದೆ. ಈಗ ಅವರ ಗಳಿಕೆ ತುಂಬಾ ವೇಗದಿಂದ ಬೆಳೆಯುತ್ತಿದೆ. ಯಾವ ಹೊಲದಲ್ಲಿ ಸಾಧಾರಣವಾಗಿ ಬೆಳೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ, ಅಂಥ ಹೊಲದಲ್ಲಿ ಇಂದು ಕಪ್ಪು ಗೋಧಿ ಬೆಳೆದು ಇಡೀ ದೇಶದ ರೈತರಿಗೆ ಮಾದರಿಯಾಗಿದ್ದಾರೆ.

ಈ ಒಂದು ಶೋಧದ ಹಿಂದಿನ ಪ್ರೇರಣೆ ಪಂಜಾಬ್‌ನ ಸಂಶೋಧನಾ ಕೇಂದ್ರದ ರಾಷ್ಟ್ರೀಯ ಕೃಷಿ ಆಹಾರ ಜೈವಿಕ ತಂತ್ರಜ್ಞಾನ ಮೊಹಾಲಿಯ ಕೃಷಿ ವಿಜ್ಞಾನಿ ಡಾ. ಮೋನಿಕಾ ಗಾರ್ಗ್ ಆಗಿದ್ದಾರೆ. ಕಪ್ಪು ಗೋಧಿಯಲ್ಲಿ ಸಾಮಾನ್ಯ ಗೋಧಿಗಿಂತ ಮಿಲಿಯನ್‌ಗೆ 149 ರಷ್ಟು ಹೆಚ್ಚು ಆಂಥೋಸಯಾನಿನ್‌ಗಳನ್ನು ಹೊಂದಿರುತ್ತದೆ.
ಕಪ್ಪುಗೋಧಿಯಲ್ಲಿ ಸತುವು (ಜಿಂಕ್) ಪ್ರಮಾಣವು ಅಧಿಕ ಪ್ರಮಾಣದಲ್ಲಿರುವದು. ಏಥೋಸಾಯಿನನ ಕಾರಣದಿಂದ ಇದು ಶುಗರ್ ಫ್ರೀ ಸಹ ಆಗಿರುತ್ತದೆ. ಇದರಲ್ಲಿ ಪಿಸ್ಟ್ ದ ಪ್ರಮಾಣ ಕಡಿಮೆ ಇರುವದು. ಆದುದರಿಂದ ಇದು ಸಕ್ಕರೆ ಖಾಯಿಲೆ ಹೊಂದಿರುವ ವ್ಯಕ್ತಿಗಳಿಗೆ ತುಂಬಾ ಲಾಭದಾಯಕವಾಗಿದೆ. ಇದರಿಂದ ಅನ್ನದ ಪಚನ ಕ್ರಿಯೆ ಸಹ ಹೆಚ್ಚಾಗುವದು.
ವಿನೋದ್ ಚೌಹಾಣ್ ಅವರು ಈ ಬೆಳೆಯ ಕುರಿತು ಯೂಟ್ಯೂಬ್ ಮುಖಾಂತರ ಮಾಹಿತಿಯನ್ನು ಪಡೆದುಕೊಂಡಿದ್ದರು. ಅವರಿಗೆ ಶೂಲಜಾಪುರ್ ನ ರೈತನಿಂದ ಪ್ರೇರಣೆ ಸಿಕ್ಕಿತು, ಅವರು ವಿನೋದ್ ಚೌಹಾಣ್ ಗೆ ಗೋಧಿಯ ಬೀಜವನ್ನು 200 ರೂಪಾಯಿ ಪ್ರತೀ ಕಿಲೋ ನಂತೆ ಕೊಟ್ಟಿದ್ದರು. ಈಗ ವಿನೋದ್ ಅವರ ಹೊಲದಲ್ಲಿ ಫಸಲು ಬಂದಿದೆ ಅದಕ್ಕೆ ರಾಜಸ್ಥಾನ, ಯೂಪಿ , ಕರ್ನಾಟಕ ಮತ್ತು ಉತ್ತರಾಖಂಡ್ ನಿಂದ ಮೇಲಿಂದಮೇಲೆ ಆರ್ಡರ್ ಗಳು ಸಿಗುತ್ತಿವೆ.
ಕಪ್ಪು ಗೋಧಿಯ ಲಾಭಗಳು:-

ಕಪ್ಪು ಗೋಧಿಯ ಕುರಿತು ಸಂಶೋಧನೆ ಇನ್ನೂ ನಡೆಯುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣ ಅಧಿಕವಾಗಿರುತ್ತವೆ. ಇದು ಕ್ಯಾನ್ಸರ್ ರೋಗಿಗೆ ತುಂಬಾ ಲಾಭದಾಯಕವಾಗಿದೆ. ಕ್ಯಾನ್ಸರ್ ತಡೆಗಟ್ಟುವಲ್ಲಿ ಇದು ಸಹ ಪ್ರಯೋಜನಕಾರಿಯಾಗಿದೆ. ಇದು ಕಡಿಮೆ ಕೊಬ್ಬಿನಂಶವನ್ನು ಹೊಂದಿರುತ್ತದೆ, ಇದು ಬೊಜ್ಜು ಹೆಚ್ಚಿಸುವುದಿಲ್ಲ.