ಹಗ್ಗವೆಂದು ತಿಳಿದು ನಾಗರ ಹಾವಿನ ಮೇಲೆ ಕಾಲಿಟ್ಟ 6 ವರ್ಷದ ಪುಟ್ಟ ಮಗು: ವಿಲಿ ವಿಲಿ ಒದ್ದಾಡಿ ಪ್ರಾಣ ಬಿಟ್ಟಿತು
ಮನೆಯ ಅಂಗಳದಲ್ಲಿ ಆಡುವ ಚಿಕ್ಕ ಮಗು ಹಗ್ಗ ತಿಳಿದು ನಾಗರ ಹಾವಿನ ಮೇಲೆ ಕಾಲಿಟ್ಟಿತು. ಸಿಟ್ಟಿಗೆದ್ದ ಹಾವು ಮಗುವಿಗೆ ಕಚ್ಚಿದ ನಂತರ ಆ ಪುಟ್ಟ ಮಗು ಸಾವಿಗೆ ಶರಣಾಯಿತು.
ಅಂಗಳದಲ್ಲಿ ಆಟ ಆಡುತ್ತಿರುವ ಆರು ವರ್ಷದ ಪುಟ್ಟಮಗು ನಾಗರಹಾವನ್ನು ನೋಡಿ ಅದು ಹಗ್ಗವೇ ಇರಬಹುದೆಂದು ತಿಳಿದು ಅದರ ಮೇಲೆ ಕಾಲಿಟ್ಟಿದೆ. ಸಿಟ್ಟಿಗೆದ್ದ ನಾಗ ರೋಷದಲ್ಲಿ ಮಗುವಿಗೆ ಜೋರಾಗಿ ಕಚ್ಚಿಬಿಟ್ಟಿತು. ಹಾವು ಕಚ್ಚಿದ ನಂತರ ಮಗು ಜೋರಾಗಿ ಚೀತ್ಕರಿಸಿ ನೆಲದ ಮೇಲೆ ಕುಸಿದು ಬಿದ್ದಿದೆ. ತಕ್ಷಣ ತಾಯಿಯ ಗಮನ ಮಗುವಿನ ಕಡೆಗೆ ಹರಿದಿದೆ. ತಾಯಿ ತಕ್ಷಣ ಸಂಬಂಧಿಕರನ್ನು ಕರೆದು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾಳೆ.
ನ್ಯೂಸ್ ರಿಪೋರ್ಟ್ ಪ್ರಕಾರ ರಾಜಸ್ಥಾನದ ಭಿತರವಾರ್ ನಲ್ಲಿ ಸಂದೀಪ್ ಸಿಂಗ್ ರಾವತ್ ಅವರ ಕುಟುಂಬ ವಾಸ್ತವ್ಯ ಮಾಡುತ್ತದೆ. ಅವರಿಗೆ ಆರು ವರ್ಷದ ನೀಲ್ ಹೆಸರಿನ ಒಂದೇ ಒಂದು ಮಗುವಿದೆ. ಇದೇ ಮಗು ಅಂಗಳದಲ್ಲಿ ಆಡುತ್ತಿತ್ತು. ಎದುರಿಗೆ ತಾಯಿ ಅಡುಗೆಮನೆಯಲ್ಲಿ ಅಡುಗೆಯನ್ನು ಮಾಡುತ್ತಿದ್ದಳು. ಅಡುಗೆಮನೆ ಮತ್ತು ಅಂಗಳ ಇವೆರಡರ ಮಧ್ಯದಲ್ಲಿ ಒಂದು ಗ್ಯಾಲರಿ ಇದೆ. ತನ್ನ ಮಗುವಿಗೆ ನಾಗರ ಹಾವು ಕಚ್ಚಿದೆ ಎಂದು ತಿಳಿದ ತಕ್ಷಣ ತಾಯಿ ಸುತ್ತಮುತ್ತಲಿನವರ ಹಾಗೂ ಸಂಬಂಧಿಕರ ಸಹಾಯದಿಂದ ಮಗು ನೀಲ್ ನಿಗೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾಳೆ. ಮಗುವಿನ ದುರ್ಭಾಗ್ಯವೇನೆಂದರೆ ಯಾವುದೇ ಆಸ್ಪತ್ರೆಯಲ್ಲಿ ಮಗುವಿಗೆ ಉಪಚಾರ ಸಿಗಲಿಲ್ಲ. ಹಾವಿನ ವಿಷ ಬಾಧೆಯಿಂದಾಗಿ ಮಗು ನಿಧಾನವಾಗಿ ನಿಸ್ತೇಜವಾಗತೊಡಗಿತು. ಪಟ್ಟಣದಲ್ಲಿರುವ ಹೆಚ್ಚುಕಡಿಮೆ ಎಲ್ಲಾ ಆಸ್ಪತ್ರೆಗಳಿಗೂ ತಂದೆ ತಾಯಿ ಮಗುವನ್ನು ಕರೆದುಕೊಂಡು ಹೋದರು. ಆದರೆ ಎಲ್ಲಿಯೂ ಮಗುವಿಗೆ ಸರಿಯಾದ ಉಪಚಾರ ಸಿಗಲಿಲ್ಲ. ಹೀಗಾಗಿ ಮಗುವನ್ನು ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ.
ಅನೇಕ ವರ್ಷಗಳ ನಂತರ ಸಂದೀಪ್ ಸಿಂಗ್ ಕುಟುಂಬಕ್ಕೆ ಈ ಮಗು ಹುಟ್ಟಿತ್ತು. ಆದರೆ ಈಗ ಮಗುವಿನ ಆಕಸ್ಮಿಕ ಮೃತ್ಯುವಿನಿಂದಾಗಿ ಕುಟುಂಬದ ಮೇಲೆ ದುಃಖದ ಆಕಾಶವೇ ಕಳಚಿ ಬಿದ್ದಂತಾಗಿದೆ. ತಾಯಿಯ ಕಣ್ಣೀರು ನಿರಂತರವಾಗಿ ಹರಿಯುತ್ತಿದೆ. ಊರಿನ ಪ್ರತಿಯೊಂದು ವ್ಯಕ್ತಿಯೂ ಮಗುವಿನ ಸಾವಿನಿಂದಾಗಿ ಕಳವಳ ವ್ಯಕ್ತ ಮಾಡುತ್ತಿದ್ದಾನೆ.