ಹಣ ಕೌಂಟ್ ಮಾಡುತ್ತಾ ಮಾಡುತ್ತಾ ಮಷೀನ್ ಸಹ ದಣಿದು ಹೋಯಿತು; ಖಜಾನೆಯಲ್ಲಿ ಸಿಕ್ಕ 25 ಕೋಟಿ ₹ ಗಳ ಮಾಲೀಕಳಾದ ಪೂಜಾ ಯಾರು?

IAS ಅಧಿಕಾರಿ ಪೂಜಾ ಸಿಂಗಲ್ ಇವರ ಮೇಲೆ ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ED ದೊಡ್ಡ ಕಾರ್ಯಾಚರಣೆಯನ್ನು ಮಾಡಿದೆ. ED ಏಕಕಾಲಕ್ಕೆ 20 ಸ್ಥಳಗಳಲ್ಲಿ ರೇಡ್ ಹಾಕಿ ಇಲ್ಲಿಯವರೆಗೆ ಪೂಜಾಗೆ ಸಂಬಂಧಿಸಿದ 25 ಕೋಟಿ ರೂಪಾಯಿಗಳ ನಗದು ವಶಪಡಿಸಿಕೊಂಡಿದೆ.

IAS ಅಧಿಕಾರಿಯಾದ ಪೂಜಾ ಸಿಂಗಲ್ ಯಾರು?

ಪೂಜಾ ಅವರ ಜನ್ಮ ಡೆಹರಾಡೂನ್ ನಲ್ಲಿ ಆಗಿದೆ. ಡೆಹ್ರಾಡೂನ್ ನಲ್ಲಿಯ ಗಡವಾಲ್ ವಿಶ್ವವಿದ್ಯಾಲಯದಲ್ಲಿ ಪದವಿ ಪೂರ್ಣಗೊಳಿಸಿದರು. ತಮ್ಮ ಮೊದಲ ಪ್ರಯತ್ನದಲ್ಲಿಯೇ ಐಎಎಸ್ ಪರೀಕ್ಷೆಯನ್ನು ಪಾಸಾಗುವ ದಾಖಲೆ ಮಾಡಿದರು. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ವಿಶ್ವವಿದ್ಯಾಲಯದವರೆಗೆ ಶಿಕ್ಷಣದಲ್ಲಿ ಪೂಜಾ ಅವರ ಹೆಸರು ಯಾವತ್ತೂ ಟಾಪರ್ ಲಿಸ್ಟ್ ನಲ್ಲಿ ಇರುತ್ತಿತ್ತು. ಐಎಎಸ್ ಮುಗಿಸಿದನಂತರ ಇವರು ಅನೇಕ ಹಗರಣಗಳನ್ನು ಬೆಳಕಿಗೆ ತಂದರು. ಹೀಗಾಗಿ ಇವರು ಯಾವತ್ತೂ ಚರ್ಚೆಯಲ್ಲಿ ಇರುತ್ತಿದ್ದರು.

ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಪೂಜಾ ಅವರ ಹೆಸರು

ವಯಸ್ಸಿನ 21ನೆಯ ವರ್ಷಕ್ಕೆ ಪೂಜಾ ಸಿಂಗಲ್ ಅವರು ಐಎಎಸ್ ಕ್ಯಾಡರ್ ನಲ್ಲಿ ಪ್ರವೇಶ ಪಡೆದರು. 2000 ಇಸ್ವಿಯಲ್ಲಿ ಪೂಜಾ ಐಎಎಸ್ ಪರೀಕ್ಷೆಯನ್ನು ಪಾಸಾದರು. ಕಡಿಮೆ ವಯಸ್ಸಿನವರಾಗಿದ್ದರಿಂದ ಪೂಜಾ ಅವರ ಹೆಸರು ಲಿಮ್ಕಾ ಬುಕ್ ಅಫ್ ರೆಕಾರ್ಡ್ಸ್ ನಲ್ಲಿ ದಾಖಲಾಯಿತು.

ಐಎಎಸ್ ಅಧಿಕಾರಿ ಪೂಜಾ ಅವರ ವೈವಾಹಿಕ ಜೀವನ…

ಐಎಎಸ್ ಅಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಪೂಜಾ ಅವರು ಮೊದಲ ಬಾರಿ ಐಎಎಸ್ ಅಧಿಕಾರಿಯಾದ ರಾಹುಲ್ ಪೂರವಾರ್ ಅವರೊಂದಿಗೆ ಮದುವೆಯಾದರು. ಆದರೆ ಮದುವೆಯ ನಂತರ ವೈಯಕ್ತಿಕ ಕಾರಣಗಳಿಂದಾಗಿ ಇಬ್ಬರಲ್ಲೂ ವಾದ ವಿವಾದಗಳು ಶುರುವಾದವು. ಸತತವಾಗಿ ನಡೆಯುತ್ತಿರುವ ಜಗಳಗಳಿಂದ ಬೇಸತ್ತು ಪೂಜಾ, ರಾಹುಲ್ ರಿಂದ ವಿಚ್ಛೇದನ ಪಡೆದರು. ತದನಂತರ ಪೂಜಾ ಎರಡನೇ ಮದುವೆಯನ್ನು ಮಾಡಿಕೊಂಡರು.

ಪೂಜಾ ಸಿಂಗಲ್ ಅವರ ಎರಡನೇ ಪತಿ ಯಾರು?

ಪೂಜಾ ಅವರ ಎರಡನೇ ಪತಿ ಅಭಿಷೇಕ್ ಝಾ ಇದ್ದು ಇವರು ಬಿಹಾರದ ಮುಜಫರ್ಪೂರ್ ನವರು. ಇವರು ಮಲ್ಟಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಸಂಚಾಲಕರಾಗಿದ್ದಾರೆ.

ಪೂಜಾ ಸಿಂಗಲ್ ಅವರ ಮೇಲೆ ED ಕಾರ್ಯಾಚರಣೆ –

ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಪೂಜಾ ಅವರಿಗೆ ಸಂಬಂಧಿಸಿದ ವಿವಿಧ ಸ್ಥಳಗಳ ಮೇಲೆ ED ಯ ಬೇರೆ ಬೇರೆ ತಂಡಗಳು ಕಳೆದ ಶುಕ್ರವಾರ ಮುಂಜಾನೆ 6 ಗಂಟೆಯಿಂದ ರೆಡ್ ಹಾಕಲು ಶುರು ಮಾಡಿತು. ನವದೆಹಲಿ, ಮುಂಬೈ, ಜೈಪುರ್, ಫರಿದಾಬಾದ್, ಗುರುಗ್ರಾಮ್, ಮುಜಫರ್ಪೂರ್, ರಾಂಚಿ ಹೀಗೆ ಅನೇಕ ಪಟ್ಟಣಗಳಲ್ಲಿ ರೇಡ್ ಹಾಕಿದ್ದಾರೆ. ಪತಿ ಅಭಿಷೇಕ್ ಅವರು ನಡೆಸುತ್ತಿರುವ ಮಲ್ಟಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ನ 7 ಸ್ಥಳಗಳಲ್ಲಿಯೂ ರೇಡ್ ಹಾಕಿ ತನಿಖೆ ನಡೆಸಲಾಯಿತು.

25 ಕೋಟಿ ರೂಪಾಯಿಗಳು ನಗದು ವಶ –

ED ಪೂಜಾ ಸಿಂಗಲ್ ಅವರ ಚಾರ್ಟರ್ಡ್ ಅಕೌಂಟೆಂಟ್ ನ ರಾಂಚಿಯ ಆಫೀಸಿನಿಂದ 25 ಕೋಟಿ ರೂಪಾಯಿಗಳನ್ನು ನಗದು ಸ್ವರೂಪದಲ್ಲಿ ವಶಪಡಿಸಿಕೊಂಡಿದೆ. ಜೂನಿಯರ್ ಇಂಜಿನಿಯರ್ ರಾಮ್ ವಿನೋದ್ ಪ್ರಸಾದ್ ಸಿಂಹ ಅವರ ತನಿಖೆಯ ನಂತರ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ರಾಮ ವಿನೋದ್ ಪ್ರಸಾದ್ ಅವರು ಸದ್ಯ ಆಂಟಿ ಕರಪ್ಷನ್ ವಿಭಾಗದ ವಶದಲ್ಲಿದ್ದಾರೆ. ಪೂಜಾ ಸಿಂಗಲ್ ಅವರು ವೆಲ್ಫೇರ್ ಪಾಯಿಂಟ್ ಮತ್ತು ಪ್ರೇರಣಾ ನಿಕೇತನ್ ಈ 2 NGO ಗಳ ಕಡೆಯಿಂದ 6 ಕೋಟಿ ರೂಪಾಯಿಗಳ ನಿಧಿ ವಸೂಲಿಗಾಗಿ ಒತ್ತಡವನ್ನು ಹೇರಿದ್ದರು ಎಂಬ ಆರೋಪ ಪೂಜಾ ಅವರ ಮೇಲಿದೆ. ಇದರ ಹೊರತಾಗಿ ಡೆಪ್ಯೂಟಿ ಕಮಿಷನರ್ ಇದ್ದಾಗ ಮನರೇಗಾದಲ್ಲಿಯೂ ಅನಿಯಮಿತತೆಯ ಆರೋಪವನ್ನು ಎದುರಿಸುತ್ತಿದ್ದಾರೆ.

ಪೂಜಾ ಯಾಕೆ ಮಾಡುತ್ತಿದ್ದರು ಈ ರೀತಿಯ ಹಗರಣಗಳನ್ನು?

ಪೂಜಾ ತುಂಬಾ ಮಹತ್ವಕಾಂಕ್ಷಿಯಾಗಿದ್ದು ಪತಿ ಮತ್ತು ಆತನ ಮನೆಯವರ ಹಾಗೂ ಸಂಬಂಧಿಕರಿಗೆ ವ್ಯವಸಾಯದಲ್ಲಿ ಲಾಭ ಮಾಡಿಕೊಡುವ ಸಲುವಾಗಿ ತನ್ನ ಅಧಿಕಾರದ ದುರ್ಬಳಕೆಯನ್ನು ಮಾಡಿದ್ದಾರೆಂಬ ಆರೋಪ ಸದ್ಯ ಕೇಳಿಬರುತ್ತಿವೆ.

ಒಂದು ಸಮಯದಲ್ಲಿ ಜ್ಞಾನದ ಬಲದಿಂದ ತನ್ನ ಹೆಸರನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಿಸಿದ ಪೂಜಾ ಇಂದು ತನ್ನ ಪತಿಯ ವ್ಯವಸಾಯದಲ್ಲಿ ಸಹಾಯವಾಗಲಿ ಮತ್ತು ಜೊತೆಗೆ ಲಾಭವಾಗಲಿ ಎಂಬುದು ಉದ್ದೇಶದಿಂದ ತನ್ನ ಅಧಿಕಾರದ ದುರ್ಬಳಕೆ ಮಾಡಿದ ಕಾರಣಕ್ಕಾಗಿ ಇಂದು ಇಡಿಯ ಜಾಲದಲ್ಲಿ ಸಿಕ್ಕಿಬಿದ್ದಿದ್ದಾಳೆ.