ಹಣ ವಿಡ್ರಾ ಮಾಡಿಕೊಳ್ಳುವಾಗ ATM ನಲ್ಲಿ ಹುಡುಗಿ ಮಾಡಿದ ಸಖತ್ ಡ್ಯಾನ್ಸ್ ಆಯಿತು ವೈರಲ್! ಇನ್ಮೇಲೆ ಕುಣಿದ ಮೇಲೆಯೇ ಹಣ ಎಂದರು ನೆಟ್ಟಿಗರು…

ಪ್ರತಿಯೊಬ್ಬರೂ ತಮ್ಮ ಖುಷಿಯನ್ನು ವ್ಯಕ್ತಪಡಿಸುವ ವಿಧಾನ ತುಂಬಾ ಬೇರೆ ಬೇರೆಯಾಗಿರುತ್ತದೆ. ಅದರಲ್ಲೂ ಹುಡುಗಿಯರು ಸಂತೋಷ ಹೆಚ್ಚಾದಾಗ ಅದನ್ನು ಎಂಜಾಯ್ ಮಾಡುವುದು ಡಾನ್ಸ್ ನಿಂದಲೇ ಹೆಚ್ಚು. ಇದೇ ರೀತಿ ತನ್ನ ಮೊದಲ ಸ್ಯಾಲರಿ ಪಡೆದುಕೊಳ್ಳುವ ಖುಷಿಯನ್ನು ವ್ಯಕ್ತಪಡಿಸುವ ಹುಡುಗಿಯ ಡ್ಯಾನ್ಸ್ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ವಿಡಿಯೋ ಎಟಿಎಂನಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗೆಳತಿಯರಿಬ್ಬರು ಕೂಡಿಕೊಂಡು ಎಟಿಎಂನಿಂದ ಹಣ ವಿಡ್ರಾ ಮಾಡಿಕೊಳ್ಳಲು ಬಂದಿದ್ದಾರೆ. ಈ ಸಂದರ್ಭದಲ್ಲಿ ಹಣ ತೆಗೆದುಕೊಳ್ಳುವಾಗ ಒಬ್ಬಳು ಹುಡುಗಿಯು ಹಣ ತೆಗೆಯುವ ಮುನ್ನ ಆಪರೇಟ್ ಮಾಡುವ ಪ್ರತಿಯೊಂದು ಹಂತಕ್ಕೆ ಒಂದೊಂದು ಬೇರೆ ಸ್ಟೆಪ್ ಹಾಕಿ ಡಾನ್ಸ್ ಮಾಡುತ್ತಿದ್ದಾಳೆ. ಹುಡುಗಿಯ ಈ ಡ್ಯಾನ್ಸ್ ನೋಡಲು ತುಂಬಾ ತಮಾಷೆಯಾಗಿದೆ. ಈ ತಮಾಷೆಯ ಡ್ಯಾನ್ಸ್ ನೇಟಿಜನ್ಸ್ ಗಳಿಗೆ ತುಂಬಾ ತುಂಬಾ ಇಷ್ಟವಾಗಿದೆ.

ವಿಡಿಯೋ ನೋಡಿ

ಈ ಹುಡುಗಿಯ ಸುಂದರ ಕುಣಿತದ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ನೋಡಿದ ನೇಟಿಜನ್ಸ್ ಗಳು ಹುಡುಗಿಯ ಪ್ರಶಂಸೆಯನ್ನು ಮಾಡಿದ್ದಾರೆ. ಜೊತೆಗೆ ಆಕೆ ಸಂತೋಷ ವ್ಯಕ್ತಪಡಿಸಿದ ರೀತಿ ತುಂಬಾ ಮನಮುಟ್ಟುವಂತಹದ್ದಾಗಿದೆ ಎಂದಿದ್ದಾರೆ.