ಹತ್ತಿರದಲ್ಲಿರುವ ಮೊಸಗಾರರನ್ನು ಹುಡುಕಲು ಕಿಮ್ ಜೊಂಗ್ ಬೇಕೆಂತಲೇ ತನ್ನ ಸಾವಿನ ವದಂತಿ ಹಬ್ಬಿಸಿದನಾ?

ಪೊಂಗ್ ಯೊಂಗ್:- ಸುಮಾರು 20 ದಿವಸಗಳ ವರೆಗೆ ಮರೆಮಾಚಿದ ನಂತರ ಉತ್ತರ ಕೊರಿಯಾದ ತಾನಶಾಹ್ ಕಿಮ್ ಜೊಂಗ ಉನ್ ಅವರು ರಹಸ್ಯಮಯದಿಂದ ಮರಳಿ ಬಂದಿದ್ದಾರೆ. ಈ ಕಳೆದ 20 ದಿನಗಳಲ್ಲಿ ಅವರ ಕುರಿತು, ಬ್ರೇನ್ ಡೆಡ್, ಹಾರ್ಟ್ ಸರ್ಜರಿ ಯಶಸ್ವಿಯಾಗದ ಕಾರಣ ಅವರು ನಿಧಾನ ರಾದರು ಹೀಗೆ ಅವರ ಕುರಿತು ವದಂತಿ ಹಬ್ಬಿತ್ತು. ಆದರೆ ಅವರು ಸ್ವತಃ ತಾವಾಗಿಯೇ ತಮ್ಮ ನಿಧನದ ಸುದ್ಧಿಯನ್ನು ಹರಿಡಿಸಲು ಹೇಳಿದ್ದರಂತೆ ಏಕೆಂದರೆ ಅದರ ಹಿಂದೆ ಒಂದು ದೊಡ್ಡ ಉದ್ದೇಶವೇ ಇತ್ತಂತೆ ಅದೇನು ಎಂಬುದು ತಿಳಿದುಕೊಳ್ಳೋಣ ಬನ್ನಿ.

ಕಿಮ್ ಜೊಂಗ ಉನ್ ಅವರಿಗೆ ಕೆಲವು ದಿವಸಗಳ ಹಿಂದೆ ಅವರ ಸಾಮ್ರಾಜ್ಯದ ಕುರಿತು ಅನೇಕ ವದಂತಿಗಳು ಹಬ್ಬಿಸಿ ಅವರನ್ನು ಹೆದರಿಕೆ ಮೂಡಿಸಲು ಹಾಗೂ ದೇಶದ ಜನತೆಯಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಲು ಕೆಲವು ಶತ್ರುಗಳು ಷಡ್ಯಂತ್ರ ನಡೆಸುತ್ತಿದ್ದರು ಅವರನ್ನು ಹುಡುಕುವ ಸಲುವಾಗಿ ಈ ಪ್ರಕಾರದ ಒಂದು ನಾಟಕ ರಚಿಸಿದ್ದರು.

ದ ಸನ್ ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದ ಮಾಹಿತಿಯ ಪ್ರಕಾರ, ಕಿಮ್ ಜೊಂಗ್ ಅವರು ಸಂಪೂರ್ಣವಾಗಿ ಆರೋಗ್ಯ ಹದಗೆಟ್ಟಿದೆ, ಅಲ್ಲದೆ ಅವರಿಗೆ ನಡೆಯಲು ಬಾರದೆ, ತಮ್ಮಿಂದ ತಾವೇ ಎದ್ದು ನಿಲ್ಲಲು ಸಾಧ್ಯವಿರದ ಪರಸ್ಥಿತಿಯಲ್ಲಿದ್ದರು ಎಂಬುದು ಮಾಹಿತಿ ಉತ್ತರ ಕೊರಿಯಾದ ಡಿಪ್ಲೋಮೇಟ್ ಅವರು ನೀಡಿದ್ದರು. ಈ ಮಾಹಿತಿ ದೊರೆತ ಕೆಲವು ದಿನಗಳ ನಂತರ ಕಿಮ್ ಜೊಂಗ್ ಅವರು ಸಿಗರೇಟ್ ಸೇದುತ್ತ ಫರ್ಟಿಲೈಜರ್ ಕಂಪೆನಿಯೊಂದನ್ನು ಉದ್ಘಾಟನಾ ಮಾಡುವಾಗ ಕಂಡು ಬಂದಿದ್ದರು. ತದನಂತರ ಇದೆಲ್ಲ ಒಂದು ಯೋಜನೆ ಎಂಬುದು ಆ ಸಮಯದಲ್ಲಿ ಕಂಡು ಬಂದಿತು.

ಉತ್ತರ ಕೊರಿಯಾ ಇದುವರೆಗೆ ಕಿಮ್ ಜೊಂಗ್ ಅವರ ಕುರಿತು ಯಾವುದೇ ಪ್ರಕಾರದ ಮಾಹಿತಿ ನೀಡಿಲ್ಲ, ಅಲ್ಲಿಯ ಮಾಧ್ಯಮಗಳು ಸಹ ಯಾವುದೇ ಪ್ರಕಾರದ ಪ್ರಕಟಣೆ ಮಾಡಿಲ್ಲ.

20 ದಿನಗಳ ಕಾಲ ಕಿಮ್ ಕಣ್ಮರೆಯಾಗಿದ್ದರೂ ಮತ್ತು ಅವರ ಸಾವಿನ ಬಗ್ಗೆ ಅಮೆರಿಕ ಮತ್ತು ಜಪಾನಿನ ಮಾಧ್ಯಮಗಳು ವರದಿ ಮಾಡಿದ್ದರೂ, ಉತ್ತರ ಕೊರಿಯಾದ ಸರ್ಕಾರವು ಅವರ ಕುರಿತು ಯಾವುದೇ ವಿವರಣೆಯನ್ನು ನೀಡಿರಲಿಲ್ಲ. ಈ ಸಮಯದಲ್ಲಿ ರಾಜ್ಯ ಮಾಧ್ಯಮಗಳು ಮತ್ತು ನ್ಯೂ ಏಜೆನ್ಸಿ ಕೂಡ ಮೌನವಾಗಿದ್ದವು. ವರದಿಯ ಪ್ರಕಾರ, ಉತ್ತರ ಕೊರಿಯಾದಲ್ಲಿ ಜನರು ಕಿಮ್ ಜೊಂಗ್ ಅವರನ್ನು ಎಷ್ಟು ಬಯಸುತ್ತಾರೆ ಮತ್ತು ಅವರು ಇರದ ಪರಸ್ಥಿತಿಯಲ್ಲಿ ಇತರ ಪಕ್ಷದ ನಾಯಕರು ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ನೋಡಲು ಕಿಮ್ ಬಯಸಿದ್ದರು. ದೇಶದ್ರೋಹಿಗಳನ್ನು ಗುರುತಿಸಿ ಅವರನ್ನು ಸರ್ಕಾರ ಮತ್ತು ಪಕ್ಷದಿಂದ ಹೊರಹೋಗುವ ಮಾರ್ಗವನ್ನು ತೋರಿಸುವುದು ಅವರ ಈ ಯೋಜನೆಯಾಗಿತ್ತು. ಮುಂದಿನ ಕೆಲವೇ ದಿನಗಳಲ್ಲಿ ಶತ್ರುಗಳ ಮರಣದಂಡನೆ ಕಾಣಿಸಿಕೊಳ್ಳಬಹುದು.

ರಿಪೋರ್ಟ್ ಪ್ರಕಾರ, ಕಿಮ್ ಮರಳಿದ್ದಾರೆ ಮುಂದಿನ ದಿನಗಳಲ್ಲಿ ಉತ್ತರ ಕೊರಿಯಾದ ಅಧಿಕಾರಿ ಮತ್ತು ಪಾರ್ಟಿಯ ಕೆಲವು ನಾಯಕರನ್ನು ಮೃತ್ಯು ದಂಡ ಅಥವಾ ಜೈಲುವಾಸ ಮಾಡಬಹುದು. ಕಿಮ್ ಅವರು ಕೆಲವು ದಿವಸಗಳ ಮೊದಲೇ ತಮ್ಮ ಸಹೋದರಿಯಾದ ಕಿಮ್ ಯೋ ಅವರನ್ನು ತಮ್ಮ ಸರ್ಕಾರದಲ್ಲಿ ದೊಡ್ಡ ಜವಾಬ್ದಾರಿಯನ್ನು ನೀಡಿದ್ದರು ಅದರ ಸಲುವಾಗಿ ಇದೊಂದು ಚಿಕ್ಕ ಪ್ರಯತ್ನವಿದೆ ಎಂದು ಸಹ ಹೇಳಬಹುದು.