ಹನಿಮೂನ್ ಗೆ ಹೋಗದೆ ಹೆಂಡತಿಗೆ ಓದಲು ಹೇಳಿದ, 2 ವರ್ಷದಲ್ಲೇ PSI ಆದ ಹೆಂಡತಿಗೆ ‘ಸಲ್ಯೂಟ್’ ಹೊಡೆಯುತ್ತಿರುವ ಗಂಡನ ನೈಜ ಕಥೆ!

ಭಾರತದ ಪರಂಪರೆಯ ಪ್ರಕಾರ ಮದುವೆಯಾದರೆ ಸಾಕು ಗಂಡನ ಮನೆಗೆ ಹೋಗಿ ಸಂಸಾರದ ಬಂಡಿಯನ್ನು ಹೆಗಲ ಮೇಲೆ ಏರಿಸಿಕೊಂಡು ಜವಾಬ್ದಾರಿಯ ಜೀವನ ಸಾಗಿಸಿಕೊಂಡು ಹೋಗುವದೊಂದೆ ದೊಡ್ಡ ಕೆಲಸವಾಗಿ ಬಿಡುತ್ತದೆ. ಮುಂದೆ ಮನೆ, ಮಕ್ಕಳು, ಗಂಡ, ಎನ್ನುತ್ತ ಸಂಸಾರ ದೂಡುತ್ತ ನಡೆಯುವುದೇ ಆಗಿ ಬಿಡುತ್ತದೆ. ಆದರೆ ಇದಕ್ಕೆ ಕೆಲವು ಅಪವಾದಗಳು ಸಹ ಇರುತ್ತವೆ. ಈ ಅಪವಾದಕ್ಕೆ ಸಾಕ್ಷಿಯೇ ಜಯದೀಪ ಪಿಸಾಳ ಹೆಸರಿನ ವ್ಯಕ್ತಿ. ಅವರ ಬಗ್ಗೆ ತಿಳಿದರೆ ಅವರಿಗೆ ನೀವು ಒಂದು ಸೆಲ್ಯೂಟ್ ಕೊಡುತ್ತೀರಿ. ಅವರು ಏನು ಮಾಡಿದ್ದಾರೆ ಅಂತಹ ಕೆಲಸ ಎಂಬುದನ್ನು ಈ ಲೇಖನದಲ್ಲಿ ನೋಡುವ.

ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ನಿವಾಸಿ ಜಯದೀಪ ಚಿಕ್ಕಂದಿನಿಂದಲೇ ಕಷ್ಟದ ಜೀವನದಲ್ಲಿ ಬೆಂದ ವ್ಯಕ್ತಿ. ಒಳ್ಳೆಯ ಶಿಕ್ಷಣವನ್ನು ಪಡೆದವ. ಸಾತಾರಾ ಜಿಲ್ಲೆಯ ವಾಠಾರ್ ಸ್ಟೇಶನ್ ನಲ್ಲಿ ಕಬ್ಬಿನ ಹಾಲು ಮಾರಿ ಜೀವನ ನಡೆಸುತ್ತಿದ್ದ. ಈ ಸ್ಟೇಶನ್ ನಲ್ಲಿ ರೈಲು ಬರೀ ಮೂರು ನಿಮಿಷ ನಿಲ್ಲುತ್ತಿತ್ತು. ಆ ಮೂರು ನಿಮಿಷದಲ್ಲಿಯೇ 12 ರಿಂದ 15 ಗ್ಲಾಸ್ ಕಬ್ಬಿನ ಹಾಲನ್ನು ಮಾರಿ ಸ್ವಲ್ಪ ಹಣವನ್ನು ಕೂಡಿ ಹಾಕಿದ್ದ. ತುಂಬಾ ಪ್ರಯತ್ನ ಪಟ್ಟು MPSC ಪರೀಕ್ಷೆ ಎರಡು ಸಲ ಪಾಸಾದನು. ಒಂದು PSI ಮತ್ತೊಂದು ಸಲ ಬೇರೆ ಪೋಸ್ಟ್ ಸಿಕ್ಕಿತು. ಆದರೆ ಜಯದೀಪನ ಮನಸ್ಸು ಅದರಲ್ಲಿರಲಿಲ್ಲ.

ಆತನಿಗೆ ತನ್ನ ಹುಟ್ಟೂರಿನ ಸೇವೆ ಮಾಡುವ ಹಂಬಲವಿತ್ತು. ಎರಡು ಸಲ ನೌಕರಿ ಬಂದರೂ ನೌಕರಿಗೆ ಹೋಗಲಿಲ್ಲ. ಊರಲ್ಲಿಯೇ ಏನಾದರೂ ಮಾಡಬೇಕೆಂದು ಹೋಂಡಾ ಕಂಪನಿಯ ಫ್ರೆಂಚಾಯಾಜಿ ತೆಗೆದುಕೊಂಡನು. ಮುಂದೆ ರಾಜಕೀಯದಲ್ಲಿ ಸೇರಿ ತನ್ನೂರಾದ ಪಳಶಿಯ ಸರಪಂಚ್ ಆದನು. ಆಮೇಲೆ ಊರಿನಲ್ಲಿ ರಸ್ತೆಯಿಂದ ಹಿಡಿದು ಶೌಚಾಲಯ ವ್ಯವಸ್ಥೆಯವರೆಗೆ ಅನೇಕ ಸುಧಾರಣೆಯ ಕೆಲಸಗಳನ್ನು ಮಾಡಿದನು.

ಆದರೆ ಜಾಣನಾಗಿಯೂ ದೊಡ್ಡ ಹುದ್ದೆಯನ್ನು ಬಿಟ್ಟು ಊರಲ್ಲಿಯೇ ಕುಳಿತ ಜಯದೀಪನ ಬಗ್ಗೆ ಜನರು ಮಾತ್ರ ಹಿಂದಿನಿಂದ ಹೆಸರಿಡಲು, ಚೇಷ್ಟೆ ಮಾಡಲು ಶುರು ಮಾಡಿದರು. ಯುವಕರು ತುಚ್ಛವಾಗಿ ಕಾಣಲು ಪ್ರಾರಂಭಿಸಿದರು. ಆದರೆ ಇದೆಲ್ಲ ಜಯದೀಪನ ಮೇಲೆ ಯಾವ ಪರಿಣಾಮವು ಬೀರಲಿಲ್ಲ. ಅದೇ ಸಮಯಕ್ಕೆ ಕಲ್ಯಾಣಿ ಹೆಸರಿನ ಯುವತಿಯ ಮೇಲೆ ಮನಸ್ಸು ಹೋಯಿತು. ಹೆಣ್ಣು ಕೇಳಿದಾಗ ಕಲ್ಯಾಣಿಯ ಮನೆಯವರು ಮಾತ್ರ ಆಕೆಯನ್ನು ಜಯದೀಪನಿಗೆ ಕೊಡಲು ನಿರಾಕರಿಸಿದರು. ಕಲ್ಯಾಣಿಯ ತಂದೆಯು ಸಹಿತ ನೌಕರಿ ತ್ಯಜಿಸಿದ ಕಾರಣಕ್ಕಾಗಿ ಜಯದೀಪನ ಬಗ್ಗೆ ಹಗುರವಾಗಿ ಮಾತನಾಡಿದ್ದರು.

ಆದರೆ ಜಯದೀಪನು ಮಾತ್ರ ಕಲ್ಯಾಣಿಯ ತಂದೆಗೆ ನಿಮ್ಮ ಮಗಳನ್ನು ಮದುವೆಯಾದ ಎರಡೇ ವರ್ಷಗಳಲ್ಲಿ PSI ಮಾಡಿ ತೋರಿಸುವೆ ಎಂದು ಚಾಲೆಂಜ್ ನೀಡಿದನು. ಮುಂದೆ ಆತನ ಮದುವೆ ಕಲ್ಯಾಣಿಯ ಜೊತೆಗೆ ನಡೆಯಿತು. ಮದುವೆಯ ನಂತರ ಆಕೆಯನ್ನು ಹನಿಮೂನಿಗೆ ಕರೆದೊಯ್ಯುದೆ ಆಕೆಗೆ ಒಂದು ಸ್ವತಂತ್ರ ರೂಮ್ ನೀಡಿ ಜೊತೆಗೆ ಕೆಲವು ಪುಸ್ತಕಗಳನ್ನು ನೀಡಿದನು. ಹಾಗೆಯೇ ಸ್ಟಡಿ ಪ್ರಾರಂಭಿಸಲು ಹೇಳಿದನು.

ಜಯದೀಪನು ಕಲ್ಯಾಣಿಗೆ ಅಭ್ಯಾಸದಲ್ಲಿಯ ತಂತ್ರಗಳನ್ನು ಹೇಳಿಕೊಡಲು ಪ್ರಾರಂಭಿಸಿದನು. ಪತ್ನಿ ಎಂದು ಆಕೆಯ ಜೊತೆಗೆ ಚೇಷ್ಟೆ, ಮಸ್ತಿ ಎನ್ನುತ್ತಾ ಸಮಯ ಹಾಳು ಮಾಡದೆ ಜನರಲ್ ನಾಲೆಜ್ ಜ್ಞಾನ ಕೊಡಲು ಶುರು ಮಾಡಿದನು. ಹೀಗೆ ಎರಡು ವರ್ಷಗಳ ನಂತರ ಜಯದೀಪ ತಾನು ಕೊಟ್ಟ ಮಾತನ್ನು ನಿಜವನ್ನಾಗಿ ಮಾಡಿ ತೋರಿಸಿದ. ಎರಡು ವರ್ಷದ
ಸಮಯದಲ್ಲಿ ಆಕೆಗೆ MPSC ಪರೀಕ್ಷೆ ಉತ್ತೀರ್ಣ ಮಾಡಿಸಿದ. ನಂತರ ಆಕೆಯ ಟ್ರೇನಿಂಗ್ ಪ್ರಾರಂಭವಾಯಿತು. ಇದನ್ನೆಲ್ಲಾ ನೋಡಿದ ಮಾವ ಅಳಿಯನಿಗೆ, ಅಳಿಯರೆ ಹೋಂಡಾ ಶೋರೂಮ್ ವ್ಯವಸಾಯ ಚೆನ್ನಾಗಿ ನಡೆಯಿತು, ಊರಲ್ಲಿ ನೀವೇ ಸರಪಂಚ್, ಜನರು ನಮಸ್ಕಾರ ಮಾಡುತ್ತಾರೆ, ಹೆಂಡತಿ PSI ಇನ್ನು ಯಾವ ಕನಸು ಬಾಕಿ ಉಳಿದಿದೆ? ಹೇಳಿ ಎಂದರು.

ಆಗ ಜಯದೀಪ ಮಾವ ಎಲ್ಲವೂ ಸಿಕ್ಕರೂ ಇನ್ನೂ ಒಂದೇ ಒಂದು ಕನಸು ಬಾಕಿ ಉಳಿದಿದೆ ಅದನ್ನಿಷ್ಟು ಮಾಡಬೇಕಾಗಿದೆ ಎಂದಾಗ, ಅದು ಯಾವುದು ಎಂದು ಮಾವ ಕೇಳಿದ. ಕಲ್ಯಾಣಿ ಟ್ರೇನಿಂಗ್ ಮುಗಿಸಿ ಬಂದ ಮೇಲೆ ಯೂನಿಫಾರ್ಮ್ ನಲ್ಲಿದ್ದಾಗ ಆಕೆಗೆ ಒಂದು ಸೆಲ್ಯೂಟ್ ಹೊಡೆಯುವ ಆಸೆ ಇದೆ ಎಂದು ಹೇಳಿದನು.

ಸದ್ಯ ಕಲ್ಯಾಣಿ ಮುಂಬಯಿ ಪೊಲೀಸ್ ನಲ್ಲಿ PSI ಆಗಿ ಕೆಲಸ ಮಾಡುತ್ತಿದ್ದಾರೆ. ಮದುವೆಯ ನಂತರ ಪತ್ನಿಗೆ ಹನಿಮೂನಿಗೆ ಕರೆದುಕೊಂಡು ಹೋಗದೆ ಸತತ ಎರಡು ವರ್ಷಗಳ ವರೆಗೆ ಅಭ್ಯಾಸ ಮಾಡಿಸಿಕೊಂಡು ಆಕೆಯನ್ನು PSI ಮಾಡಿಸಿ ಆಕೆಗೆ ಗೌರವದ ಸೆಲ್ಯೂಟ್ ಹೊಡೆದ ಜಯದೀಪನಿಗೆ ನಮ್ಮಿಂದ ಒಂದು ಆದರದ ಸೆಲ್ಯೂಟ್.