ಹರ್ಭಜನ್ ಸಿಂಗ್ ಕಪಾಳಮೋಕ್ಷ ಮಾಡಿದ ಶ್ರೀಸಂತ್ ಅವರು ಹರ್ಭಜನ್ ರ ನಿವೃತ್ತಿಯ ನಂತರ ಮಾಡಿದ ಮೊದಲ ಪ್ರತಿಕ್ರಿಯೆ; ನೀನು ಯಾವಾಗಲೂ…
ಪ್ರತಿಯೊಂದು ಒಳ್ಳೆಯ ವಿಷಯ ಒಮ್ಮೆಯಾದರೂ ದಿ ಎಂಡ್ ಆಗಲೇಬೇಕು ಎಂದು ಟೆಸ್ಟ್ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಭಾರತದ ಮೊದಲ ಬೌಲರ್ ಹರಭಜನ್ ಸಿಂಗ್ ಅವರು ಶುಕ್ರವಾರದಂದು ಕ್ರಿಕೆಟಿನ ಎಲ್ಲ ಪ್ರಕಾರಗಳಿಂದ ನಿವೃತ್ತರಾಗುವ ಘೋಷಣೆ ಮಾಡಿದರು. ಹರ್ಭಜನ್ ಸಿಂಗ್ ಅವರು ಕ್ರಿಕೆಟ್ನಿಂದ ಸನ್ಯಾಸತ್ವ ಪಡೆದ ನಂತರ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ ಅವರ ಜೊತೆಗೆ ಇನ್ನು ಅನೇಕ ಕ್ರಿಕೆಟ್ ದಿಗ್ಗಜರು ಈ ಆಟಗಾರನಿಗೆ ಮುಂದಿನ ಭವಿಷ್ಯಕ್ಕಾಗಿ ಶುಭಾಶಯಗಳನ್ನು ನೀಡಿದ್ದಾರೆ. ಇದರಲ್ಲಿ ಶ್ರೀಶಾಂತ್ ಸಹ ಹರ್ಭಜನ್ ಸಿಂಗ್ ರ ನಿವೃತ್ತಿಗಾಗಿ ವಿಶೇಷ ಸಂದೇಶವೊಂದನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಐಪಿಎಲ್ 2008 ರಲ್ಲಿ ಹರ್ಭಜನ್ ಸಿಂಗ್ ಪಂದ್ಯವೊಂದರಲ್ಲಿ ಶ್ರೀಶಾಂತ್ ಗೆ ಮೈದಾನದಲ್ಲಿಯೆ ಕಪಾಳಮೋಕ್ಷ ಮಾಡಿದ್ದರು. ಆಗ ಶ್ರೀಸಂತ್ ಮೈದಾನದಲ್ಲಿಯೇ ಕಣ್ಣೀರಿಟ್ಟಿದ್ದರು. ಇದರ ನಂತರ ತುಂಬಾ ವಾದ-ವಿವಾದವೂ ಹುಟ್ಟಿತ್ತು. ಆದರೆ ಈಗ ಹರ್ಭಜನ್ ಸಿಂಗ್ ರ ನಿವೃತ್ತಿಯ ನಂತರ ಶ್ರೀಸಂತ್ ಅವರು ಮಾಡಿದ ಪೋಸ್ಟ್ ತುಂಬಾ ಚರ್ಚೆಯ ವಿಷಯವಾಗಿದೆ.
ಶ್ರೀಸಂತ್ ಅವರು ಹರ್ಭಜನ್ ಜೊತೆಗಿನ ನಾಲ್ಕು ಫೋಟೋಗಳನ್ನು ಟ್ವಿಟರ್ನಲ್ಲಿ ಶೇರ್ ಮಾಡುತ್ತಾ ಅವರ ನಿವೃತ್ತಿಯ ನಂತರದ ಪ್ರವಾಸಕ್ಕಾಗಿ ಶುಭಾಶಯಗಳನ್ನು ಕೋರಿದ್ದಾರೆ.
ಟ್ವಿಟರ್ನಲ್ಲಿ ಶ್ರೀಸಂತ್ ಅವರು “ಹರ್ಭಜನ್ ಸಿಂಗ್ ನೀನು ಯಾವತ್ತೂ ಬರೀ ಭಾರತಕ್ಕಾಗಿ ಅಷ್ಟೇ ಅಲ್ಲ ಈ ಜಗತ್ತಿನಲ್ಲಿ ಕ್ರಿಕೆಟ್ ಆಡಿದ ಉತ್ತಮ ಆಟಗಾರರಲ್ಲಿ ಒಬ್ಬನಾಗಿರುವೆ. ನಾನು ನಿನ್ನನ್ನು ಚೆನ್ನಾಗಿ ಅರಿತಿರುವೆ. ನಿನ್ನ ಜೊತೆಗೆ ಆಡಲು ಅವಕಾಶ ಸಿಕ್ಕಿದ್ದು ನನ್ನ ದೊಡ್ಡ ಗೌರವವಾಗಿದೆ ಎಂದು ತಿಳಿಯುತ್ತೇನೆ. ನಾನು ಯಾವಾಗಲೂ ನಿನ್ನ ಜೊತೆಗಿನ ಒಳ್ಳೆಯ ಕ್ಷಣಗಳನ್ನು ಸದಾ ನೆನಪಿನಲ್ಲಿ ಇಡುವೆ. ನಿನಗೆ ತುಂಬಾ ತುಂಬಾ ಪ್ರೀತಿ ಮತ್ತು ಗೌರವ” ಎಂದು ತಮ್ಮ ಮನದ ಭಾವನೆಗಳನ್ನು ವ್ಯಕ್ತ ಮಾಡಿದ್ದಾರೆ.
@harbhajan_singh Ur gonna be the one of the best ever played cricket not just for india but in world of cricket..it’s a huge honour to know u and to have played with you b bhajjipa ….will always cherish the lovely hugs( lucky for me ) before my spells ) lots of love and respect pic.twitter.com/5IgYJk4HcD
— Sreesanth (@sreesanth36) December 24, 2021
2008 ರಲ್ಲಿ ಏನು ನಡೆದಿತ್ತು?
2008 ರ ಐಪಿಎಲ್ ಪಂದ್ಯವೊಂದರಲ್ಲಿ ಹರಭಜನ್ ಮತ್ತು ಶ್ರೀಶಾಂತ್ ಅವರ ಮಧ್ಯೆ ವಿವಾದ ನಿರ್ಮಾಣವಾಗಿತ್ತು. ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಎಲೆವನ್ ಪಂಜಾಬ್ ಪಂದ್ಯದ ನಂತರ ಹರ್ಬಜನ್ ಅವರು ಶ್ರೀಸಂತ್ ಗೆ ಕಪಾಳಕ್ಕೆ ಹೊಡೆದಿದ್ದರು. ಇದರಿಂದಾಗಿ ಶ್ರೀಸಂತ್ ಅವರು ಮೈದಾನದಲ್ಲಿಯೇ ಕಣ್ಣೀರಿಟ್ಟಿದ್ದರು. ಇವರಿಬ್ಬರ ಫೋಟೋ ಆ ಸಮಯದಲ್ಲಿ ತುಂಬಾ ಚರ್ಚೆ ಮೂಡಿಸಿತ್ತು.
ಟೀಮ್ ಇಂಡಿಯಾ ಜರ್ಸಿ ತೊಟ್ಟು ನಿವೃತ್ತಿ ಹೊಂದುವ ಬಯಕೆಯಿತ್ತು.
1998 ರಲ್ಲಿ ಶಾರ್ಜಾದಲ್ಲಿ ನಡೆದ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದ ಮುಖಾಂತರ ಹರಭಜನ್ ಸಿಂಗ್ ಅವರು ತಮ್ಮ ಕ್ರಿಕೆಟ್ ಕರಿಯರ್ ಪ್ರಾರಂಭಿಸಿದ್ದರು. ತದನಂತರ 2016 ರಲ್ಲಿ ಸಂಯುಕ್ತ ಅರಬ್ ಎಮಿರತ ವಿರುದ್ಧ ಹರ್ಭಜನ್ ಸಿಂಗ್ ರು ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಭಾರತ ತಂಡದ ಜರ್ಸಿ ತೊಟ್ಟು ಕೊನೆಯ ಪಂದ್ಯವನ್ನು ಆಡಿ ನಿವೃತ್ತನಾಗಬೇಕೆಂಬ ಆಸೆ ಹರ್ಭಜನ್ ಸಿಂಗ್ ಅವರು ಇಟ್ಟುಕೊಂಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ‘ನಿಮಗೆ ಯಾವಾಗಲಾದರೂ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲೇಬೇಕಾಗುತ್ತದೆ. ಮಾನಸಿಕವಾಗಿ ನಾನು ಮೊದಲೇ ನಿವೃತ್ತಿಯಾಗಿದ್ದೆ. ಬರೀ ಘೋಷಣೆ ಮಾಡುವುದು ಅಷ್ಟೇ ಸಾಧ್ಯವಾಗುತ್ತಿರಲಿಲ್ಲ’. ಎಂದು ಹರ್ಭಜನ್ ಅವರು ಹೇಳುತ್ತಾರೆ.