ಹಲ್ಲೆ ಮಾಡಲು ಬಂದ ನಾಯಿ ನೋಡಿ ಪುಟ್ಟ ಅಣ್ಣ ತನ್ನ ಪುಟಾಣಿ ತಮ್ಮನ ರಕ್ಷಣೆಗಾಗಿ ಮಾಡಿದನು ಈ ಕೃತಿ! ವಿಡಿಯೋ ಆಯಿತು ವೈರಲ್! ನೇಟಿಜನ್ಸ್ ಎಂದರು ಶಬ್ಬಾಷ್!
ವ್ಯಕ್ತಿಯು ಸಂಕಷ್ಟದಲ್ಲಿದ್ದಾಗ ಸಹಾಯಕ್ಕಾಗಿ ಹತ್ತಿರದವರು ಇಲ್ಲ ಕುಟುಂಬದ ಸದಸ್ಯರು ಹೀಗೆ ಯಾರಾದರೂ ಬಂದೇ ಬರುತ್ತಾರೆ. ಇಲ್ಲವೆ ನೆರೆಹೊರೆಯವರು, ಮಿತ್ರರು ಸಹಾಯಕ್ಕೆ ಬರುತ್ತಾರೆ. ಈಗ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪುಟಾಣಿ ತಮ್ಮನನ್ನು ನಾಯಿಯಿಂದ ರಕ್ಷಿಸಲು ಬಂದ ಆತನ ಪುಟ್ಟ ಅಣ್ಣ ಮತ್ತು ಆತನ ಧೈರ್ಯವನ್ನು ನೋಡಿ ನೇಟಿಜನ್ಸ್ ಗಳು ಮೆಚ್ಚಿದ್ದಾರೆ.
ಅಣ್ಣನಿಗೆ ಯಾವಾಗಲೂ ಮನೆಯ ಜವಾಬ್ದಾರಿ ಮನೆಯ ಇತರ ಸದಸ್ಯರಿಗಿಂತ ಸ್ವಲ್ಪ ಜಾಸ್ತಿಯಾಗಿಯೇ ಇರುತ್ತದೆ ಎಂಬುದು ಸುಳ್ಳಲ್ಲ. ಇಲ್ಲಿ ಅಣ್ಣನೊಬ್ಬ ತನ್ನ ತಮ್ಮನ ಜೊತೆಗೂಡಿ ರಸ್ತೆಯ ಮೇಲಿಂದ ಹೋಗುತ್ತಿದ್ದಾನೆ. ಅದೇ ಸಮಯಕ್ಕೆ ಸರಿಯಾಗಿ ಬದಿಯಿಂದ ಬಿಳಿಯ ಬಣ್ಣದ ನಾಯಿಯೊಂದು ಏರಿ ಹಲ್ಲೆ ಮಾಡಲು ಬರುವ ಹಾಗೆ ಬರುತ್ತದೆ. ತಕ್ಷಣ ಇದನ್ನು ಗಮನಿಸಿದ ಅಣ್ಣನು ತಮ್ಮನ ರಕ್ಷಣೆಗೆ ನಿಲ್ಲುತ್ತಾನೆ. ನಾಯಿ ಮೈಮೇಲೆ ಬರುತ್ತದೆ ಎಂದು ತಿಳಿದು ಅಣ್ಣ ಮೊದಲೇ ಆಕ್ಷನ್ ನಲ್ಲಿರುತ್ತಾನೆ. ಹಾಗೂ ಅದಕ್ಕೆ ಹೊಡೆಯುವ ರೀತಿಯಲ್ಲಿ ವಾರ್ನಿಂಗ್ ನೀಡುತ್ತಾನೆ. ಹುಡುಗನ ಈ ಒಂದೇ ಒಂದು ವರಸೆ ನೋಡಿ ನಾಯಿಯು ಹೆದರಿ ತನ್ನ ಮಾರ್ಗವನ್ನು ಬದಲಿಸಿ ಬೇರೆ ಕಡೆಗೆ ಹೋಗುತ್ತದೆ. ಆನಂತರ ಅಣ್ಣ ತನ್ನ ತಮ್ಮನನ್ನು ಹಿಡಿದುಕೊಂಡು ಸುರಕ್ಷಿತವಾಗಿ ಮುಂದೆ ನಡೆಯುತ್ತಾನೆ. ಇಲ್ಲಿ ತನ್ನ ಚಿಕ್ಕ ತಮ್ಮನ ಮೇಲೆ ಅಣ್ಣನು ತೋರಿದ ಪ್ರೀತಿ ನೇಟಿಜನ್ಸ್ ಗಳಿಗೆ ತುಂಬಾ ಖುಷಿ ತಂದಿದೆ. ಚಳಿಯಲ್ಲಿ ತಮ್ಮನ ಕಾಳಜಿ ಮಾಡುವ ಅಣ್ಣನನ್ನು ನೆಟ್ಟಿಗರು ಬಾಯಿತುಂಬ ಹೊಗಳುತ್ತಿದ್ದಾರೆ.
ವೀಡಿಯೋ ನೋಡಿ
भाई हो तो ऐसा. pic.twitter.com/W7G3yNPCfz
— Dipanshu Kabra (@ipskabra) February 1, 2022
ಈ ವೀಡಿಯೋವನ್ನು ಟ್ವಿಟರ್ ನಲ್ಲಿ ಐಪಿಎಸ್ ಅಧಿಕಾರಿಯಾದ ದಿಪಾಂಶು ಕಾಬರಾ ಅವರು ಶೇರ್ ಮಾಡಿ ಕ್ಯಾಪ್ಶನ್ ನಲ್ಲಿ ಅಣ್ಣನಿದ್ದರೆ ಹೀಗಿರಬೇಕು ಎಂದಿದ್ದಾರೆ. ಇಲ್ಲಿಯವರೆಗೆ ಈ ವೀಡಿಯೋವನ್ನು ಸುಮಾರು 5 ಲಕ್ಷ ಜನರು ವೀಕ್ಷಿಸಿದ್ದಾರೆ. ಮತ್ತು 40 ಸಾವಿರ ಜನರು ಲೈಕ್ ಮಾಡಿದ್ದಾರೆ.