ಹಳೆಯ ಕಾರಿಗೆ ಬಣ್ಣ ಹಾಕಿಸಿ ಹೊಸದೆಂದು ಮಾರಾಟ ಮಾಡಿದ ಶೋರೂಂ ಮಾಲೀಕ: ವಂಚನೆ ಬಯಲಾದಾಗ ಅಂತಾನೆ…

ಸ್ವಂತಕ್ಕಾಗಿ ಕಾರನ್ನು ಖರೀದಿಸುವುದು ಅನೇಕರ ಜೀವನದಲ್ಲಿ ಒಂದು ಬಹುದೊಡ್ಡ ಕನಸಾಗಿರುತ್ತದೆ. ಕೆಲವರ ಈ ಕನಸು ನನಸಾದರೆ, ಇನ್ನೂ ಅನೇಕರಿಗೆ ಇದು ಕನಸಾಗಿಯೇ ಉಳಿದು ಬಿಡುತ್ತದೆ. ಅಲ್ಲದೇ ಕಾರನ್ನು ಕೊಳ್ಳುವ ಆಸೆಯಿಂದ ನಮ್ಮ ದೇಶದಲ್ಲಿ ಅದೆಷ್ಟೋ ಮಧ್ಯಮ ವರ್ಗದ ಜನರು ತಮ್ಮ ಖರ್ಚು ವೆಚ್ಚಗಳನ್ನು ಕಡಿಮೆ ಮಾಡಿಕೊಂಡು, ಹಣವನ್ನು ಕೂಡಿಟ್ಟೋ ಅಥವಾ ಇಎಂಐ ಗಳ ಮೂಲಕ ಆದರೂ ಸರಿ ಸಣ್ಣದಾದರೂ ಸರಿ ಒಂದು ಕಾರನ್ನು ಖರೀದಿ ಮಾಡಲು ತವಕಿಸುತ್ತಾರೆ. ಕಾರು ಕೊಂಡು, ಅದರಲ್ಲಿ ಸುತ್ತಾಡುವ ಕುರಿತಾಗಿ ಅವರು ಬಹಳಷ್ಟು ಆಸೆಗಳನ್ನು ಕಟ್ಟಿಕೊಂಡಿರುತ್ತಾರೆ. ಶ್ರೀಮಂತರಿಗೇ ಆಗಲಿ, ಬಡವರಿಗೇ ಆಗಲೀ ಕಾರು ಖರೀದಿ ಎಂಬುದು ಮಾತ್ರ ಒಂದು ಸಂತೋಷದ ವಿಷಯವಾಗಿರುತ್ತದೆ.

ಹೀಗೆ ಹೊಸ ಕಾರನ್ನು ಖರೀದಿ ಮಾಡಬೇಕೆನಿಸಿದಾಗ ಜನರು ತಮ್ಮ ಮೊದಲ ಆದ್ಯತೆಯನ್ನು ನೀಡುವುದು ಶೋರೂಂಗಳಲ್ಲಿ ಬ್ರಾಂಡ್ ನ್ಯೂ ಕಾರ್ ಗಳನ್ನು ಖರೀದಿಸಲು. ಶೋ ರೂಂ ನಲ್ಲಿ ಖರೀದಿ ಮಾಡುವುದ ಎಂದರೆ ಅದೊಂದು ನಂಬಿಕೆ, ಅಲ್ಲಿ ಉತ್ತಮ ಗುಣಮಟ್ಟದ ಹಾಗೂ ಅತ್ಯುತ್ತಮ ಎನಿಸುವ ಕಾರುಗಳು ಸಿಗುತ್ತವೆ ಎನ್ನುವ ವಿಶ್ವಾಸ ಇರುತ್ತದೆ. ಆದ್ದರಿಂದಲೇ ಮೂರನೇ ವ್ಯಕ್ತಿಯಿಂದ ಖರೀದಿಸುವುದಕ್ಕಿಂತ ಶೋ ರೂಂ ಗೆ ಹೋಗುತ್ತಾರೆ ಜನರು. ಆದರೆ ಹೀಗೆ ಹೊಸ ಕಾರನ್ನು ಖರೀದಿಸಲು ಶೋ ರೂಮ್ ಗೆ ಹೋದಂತಹ ಸಂದರ್ಭದಲ್ಲಿ ಶೋ ರೂಂ ನಲ್ಲೇ ಮೋ ಸ ನಡೆದರೆ ನಿಜಕ್ಕೂ ಅದಕ್ಕಿಂತ ದೊಡ್ಡ ವಿಶ್ವಾಸ ಘಾ ತು ಕ ತನ ಮತ್ತೊಂದಿಲ್ಲ ಎಂದೇ ನಾವು ಹೇಳಬಹುದ.

ಹೊಸ ಕಾರು ಖರೀದಿ ಮಾಡಲು ಬಂದವರಿಗೆ ಶೋ ರೂಂ ನ ಆಯೋಜಕರು ಮೋ ಸ ಮಾಡಿ ಹಳೆಯ ಕಾರನ್ನು ಹೊಸದು ಎಂದು ನಂಬಿಸಿ ಅದನ್ನು ಮಾರಾಟ ಮಾಡಿದರೆ, ಕೂಡಿಟ್ಟು, ಕಷ್ಟಪಟ್ಟು ದುಡಿದು, ಎಷ್ಟೋ ಕನಸು ಕಂಡು ಕಾರನ್ನು ಕೊಂಡವರಿಗೆ ತಾವು ಲಕ್ಷ ಲಕ್ಷ ಕೊಟ್ಟು ಕೊಂಡಿದ್ದು ಹೊಸ ಕಾರಲ್ಲ, ಬದಲಿಗೆ ಅದೊಂದು ಹಳೆಯ ಕಾರು ಎಂದು ತಿಳಿದುಬಂದಾಗಲೇ ತಾವೆಷ್ಟು ಮೋಸ ಹೋದೆವು ಎನ್ನುವ ಅರಿವಾಗುತ್ತದೆ‌. ಅಲ್ಲದೇ ಅದರ ಜೊತೆಗೆ ಶೋರೂಂನಲ್ಲಿ ಕೂಡ ಇಂತಹ ಮೋ ಸ ನಡೆಯುತ್ತದೆಯೇ ಎಂಬ ಪ್ರಶ್ನೆ ಕೂಡ ಮೂಡುತ್ತದೆ.

ಈ ಕಾಲದಲ್ಲಿವಯಾರನ್ನು ನಂಬುವುದೋ ಅರ್ಥವಾ ಬಿಡುವುದೊ ಎನ್ನುವ ಇಂತಹ ಘಟನೆಯೊಂದು ವಾಸ್ತವವಾಗಿ ನಮ್ಮ ದೇಶದಲ್ಲಿ ನಡೆದಿದೆ. ಅಸ್ಸಾಂ ರಾಜ್ಯದ ರಾಜಧಾನಿ ಗುವಾಹಟಿಯ ಖಾನ್ ಪಾರ ಇಲಾಖೆಯಲ್ಲಿ ಇಂತಹದೊಂದು ಘಟನೆ ನಡೆದಿದೆ. ಇಲ್ಲಿ ಕಾರು ಕೊಳ್ಳಲು ಬಂದಂತಹ ಗ್ರಾಹಕನಿಗೆ ಶೋರೂಮ್ ಆಯೋಜಕರು ಮೋ ಸ ಮಾಡಿರುವ ಘಟನೆ ವರದಿಯಾಗಿದೆ. ಹಳೆಯ ಕಾರಿಗೆ ಬಣ್ಣ ಹಾಕಿ, ಹೊಸದೆಂದು ನಂಬಿಸಿ ಮೋ ಸ ಮಾಡಿ ಮಾರಾಟ ಮಾಡಿದ್ದಾರೆ. ಈ ವಿಷಯ ಹೊರಬಂದ ಕೂಡಲೇ ಅಲ್ಲಿನ ಸಾರಿಗೆ ಇಲಾಖೆಯು ಮಾರುತಿ ಸುಜುಕಿ ಡೀಲರ್ ಒಬ್ಬರ ವ್ಯಾಪಾರ ಪರವಾನಿಗೆಯನ್ನು ರದ್ದು ಮಾಡಿದೆ. ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಗ್ರಾಹಕರೊಬ್ಬರು ಹೇಗೆ ಮಾರುತಿ ಸುಜುಕಿ ಡೀಲರ್ ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆ ಎಂಬುದನ್ನು ದೂರಿನ ಮೂಲಕ ವಿವರಿಸಿದ್ದಾರೆ.

ಆತನ ದೂರಿನ ಆಧಾರದಲ್ಲಿ ತನಿಖೆಯನ್ನು ನಡೆಸಿದಾಗ ವಾಸ್ತವ ಅಂಶಗಳು ಬಯಲಾಗಿದ್ದು, ಈ ಶೋ ರೂಮ್ ನಲ್ಲಿ ಮಾಡುತ್ತಿದ್ದ ವಂಚನೆಯು ಬಯಲಾಗಿದೆ. ಅಧಿಕಾರಿಗಳು ವಾಹನವೊಂದನ್ನು ಸಮರ್ಪಕವಾದ ರೀತಿಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಹಳೆಯ ಕಾರಿಗೆ ಹೊಸದಾಗಿ ಬಣ್ಣ ಹಾಕಿಸಿ ಅದನ್ನು ಹೊಸದಾಗಿ ಕಾಣುವಂತೆ ಸಿದ್ಧಪಡಿಸಿ, ಮಾರಾಟ ಮಾಡಲಾಗಿತ್ತು ಎನ್ನಲಾಗಿದೆ. ಆಗ ಹಳೆಯ ಕಾರನ್ನು ಮಾರಾಟ ಮಾಡಿರುವ ವಿಷಯ ಹೊರಗೆ ಬಂತು ಆಗ ಶೋ ರೂಂ ನ ಮಾಲೀಕ ಅದು ತಮ್ಮ ಅರಿವಿಗೆ ಬಾರದಂತೆ ಈ ಕಾರಿನ ಮಾರಾಟ ನಡೆದು ಹೋಗಿದೆ ಎಂದು ಹೇಳಿದ್ದಾರೆ. ಆದರೆ ವಂಚನೆಯ ಪ್ರಕರಣವು ಹೊರಬಂದ ಕೂಡಲೇ ಸಾರಿಗೆ ಇಲಾಖೆಯು ಆತನ ವ್ಯಾಪಾರ ಪರವಾನಗಿಯನ್ನು ಹಾಗೂ ಹಾಗೂ ಪ್ರಮಾಣ ಪತ್ರವನ್ನು ರದ್ದುಗೊಳಿಸಿದೆ.