ಹಳ್ಳಿ ಹುಡುಗನ ಅದ್ಭುತ ಟ್ಯಾಲೆಂಟ್ ನೋಡಿ ಆನಂದ್ ಮಹೇಂದ್ರ ಶಾಕ್! ಶೇರ್ ಮಾಡಿದರು ಈ ವಿಡಿಯೋ…

ಯಾವತ್ತೂ ಸೋಶಿಯಲ್ ಮೀಡಿಯಾದಲ್ಲಿ ಹ್ಯಾಪಿ ಇರುವವರಿಗೆ ಆನಂದ್ ಮಹೀಂದ್ರಾ ಅವರ ಬಗ್ಗೆ ಚೆನ್ನಾಗಿ ಗೊತ್ತಿದೆ. ಇವರು ಜಗತ್ತಿನಲ್ಲಿಯೇ ಚಿರಪರಿಚಿತರಾದ ಬಿಸಿನೆಸ್ ಮ್ಯಾನ್. ಇವರು ತಮ್ಮ ಬಿಜಿನೆಸ್ ನಲ್ಲಿ ತುಂಬಾ ಜನಪ್ರಿಯ ಇರುವುದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿಯೂ ಸದಾ ಆಕ್ಟಿವ್ ಆಗಿರುತ್ತಾರೆ. ತಮ್ಮ ಖಾತೆಯಿಂದ ಸದಾ ಒಳ್ಳೊಳ್ಳೆಯ ವಿಡಿಯೋ ಮತ್ತು ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಹಾಗೂ ಟ್ಯಾಲೆಂಟ್ ಇದ್ದ ಜನರಿಗೆ ಪ್ರೇರಣೆಯನ್ನು ನೀಡುತ್ತಾರೆ. ಸದ್ಯ ಅವರು ಶೇರ್ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಅಂಥ ಅದ್ಯಾವ ವಿಡಿಯೋ ಇದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಪ್ರಸ್ತುತ ವಿಡಿಯೋ ಒಂದು ದೊಡ್ಡದಾದ ಹೈವೇ ರಸ್ತೆ ಮೇಲಿನದ್ದಾಗಿರಬಹುದು. ಈ ವಿಡಿಯೋ ದೃಶ್ಯದಲ್ಲಿ ಬಾಲಕನೊಬ್ಬ ತನ್ನ ಅದ್ಭುತವಾದ ಟ್ಯಾಲೆಂಟ್ ತೋರಿಸುತ್ತಿದ್ದಾನೆ. ಹುಡುಗ ಮಾಡುವ ಸ್ಟಂಟ್ ನೋಡಿದಾಗ ಮೈನವಿರೇಳುತ್ತದೆ. ಪುಟ್ಟ ಬಾಲಕನ ಪರ್ಫೆಕ್ಷನ್ ಮತ್ತು ಸ್ಪೂರ್ತಿ ನೋಡಿದ ಮೇಲೆ ನಿಜಕ್ಕೂ ಆತನ ಫ್ಯಾನ್ ಆಗುವುದರಲ್ಲಿ ಸಂಶಯವಿಲ್ಲ. ಬಾಲಕ ಯಾವುದೇ ರೀತಿಯ ಸುರಕ್ಷತೆಯ ಸಾಧನೆಗಳನ್ನು ಉಪಯೋಗಿಸದೆ ಹವೆಯಲ್ಲಿ ಸ್ಟಂಟ್ ಮಾಡುವದರ ಜೊತೆಗೆ ಆತನ ಜಿಗಿತವನ್ನು ನೋಡಿದರೆ ನೋಡುವ ಕಣ್ಣುಗಳೇ ನಂಬಲಾರವು. ಅದಕ್ಕೆ ಹೇಳುವುದು ಭಾರತದಲ್ಲಿ ಟ್ಯಾಲೆಂಟಿಗೆ ಏನು ಕಮ್ಮಿ ಇಲ್ಲ. ಆತನ ಈ ಸ್ಟಂಟ್ ನೋಡಿ ಸ್ವತಃ ಆನಂದ್ ಮಹೀಂದ್ರಾ ಅವರೇ ಅಚ್ಚರಿಪಟ್ಟಿದ್ದಾರೆ. ಹಾಗೂ ಆತನ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ನೋಡಿ ಈ ವಿಡಿಯೋದಲ್ಲಿ ಹುಡುಗನ ಟ್ಯಾಲೆಂಟ್…

ಪ್ರಸ್ತುತ ವಿಡಿಯೋದಲ್ಲಿ ಕಂಡು ಬರುತ್ತಿರುವ ಹುಡುಗ ತಮಿಳುನಾಡಿನ ತಿರುನಲ್ವೆಲಿಯವನಾಗಿದ್ದಾನೆ ಎಂದು ತಿಳಿದುಬಂದಿದೆ. ವಿಡಿಯೋ ಶೇರ್ ಮಾಡಿದ ಆನಂದ್ ಮಹೇಂದ್ರ ಅವರು ತಮ್ಮ ಕ್ಯಾಪ್ಷನ್ನಲ್ಲಿ ಯುವಪೀಳಿಗೆಯಲ್ಲಿ ಪ್ರತಿಭೆ ಆಕಾರ ಪಡೆದುಕೊಳ್ಳುತ್ತಿದೆ ಎಂದಿದ್ದಾರೆ. 17 ಸೆಕೆಂಡುಗಳ ಈ ವಿಡಿಯೋವನ್ನು ಇಲ್ಲಿಯವರೆಗೆ 5 ಲಕ್ಷಕ್ಕೂ ಮೀರಿ ಜನರು ವೀಕ್ಷಿಸಿದ್ದಾರೆ. ಹಾಗೂ ಸಾವಿರಾರು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ನಂತರ ಆನಂದ್ ಮಹೇಂದ್ರ ಅವರಷ್ಟೇ ಅಲ್ಲ ಉಳಿದವರು ಸಹ ಆಶ್ಚರ್ಯ ಪಡುವುದರಲ್ಲಿ ಸಂಶಯವಿಲ್ಲ.