ಹವೆಯಲ್ಲಿ ಹಾರಿಸಿ ಗೋಡೆಗೆ ಅದ್ಭುತವಾಗಿ ಕುಳ್ಳು ಮೆತ್ತುವ ಯುವತಿಯ ಈ ಕಲೆಗೆ ಯಾರು ಸಾಠಿ? ವಿಡಿಯೋ ವೈರಲ್!
ದೇಸಿ ಜುಗಾಡ್ ಅಥವಾ ಐಡಿಯಾಗಳನ್ನು ನಿರೂಪಿಸುವುದರಲ್ಲಿ ಜಗತ್ತಿನಲ್ಲಿಯೇ ಭಾರತದ ಕೈ ಯಾರು ಹಿಡಿಯಲು ಸಾಧ್ಯವಿಲ್ಲ. ಭಾರತೀಯರು ತಮ್ಮ ವಿದ್ಯಾಭ್ಯಾಸದಲ್ಲಂತೂ ಹೆಸರು ಮಾಡಿ ಜಗತ್ತಿನ ಅನೇಕ ಮಹತ್ವದ ಪದವಿಗಳ ಮೇಲೆ ತಮ್ಮ ಪ್ರಾಬಲ್ಯವನ್ನು ಮೆರೆದಿದ್ದಾರೆ. ಜೊತೆಗೆ ‘ಕಸದಿಂದ ರಸ’ ತೆಗೆಯುವ ವಿವಿಧ ಐಡಿಯಾಗಳಲ್ಲಿಯೂ ಭಾರತದ ಜನ ತುಂಬಾ ಮುಂದೆ ಇದ್ದಾರೆ ಎಂದರೆ ತಪ್ಪಲ್ಲ.
ಈಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ದನಗಳ ಸೆಗಣಿಯ ಮುಖಾಂತರ ತನ್ನ ಟ್ಯಾಲೆಂಟ್ ತೋರಿಸಿದ್ದಾಳೆ. ಸೆಗಣಿಯ ಕಲ್ಲುಗಳನ್ನು ಈ ಮಹಿಳೆಯು ಕೈಗೆ ನಿಲುಕದ ತುಂಬಾ ಎತ್ತರದ ಗೋಡೆಯ ಮೇಲೆ ಕುಳ್ಳುಗಳನ್ನು ಹವೆಯಲ್ಲಿ ಹಾರಿಸಿ ಅತೀ ಸಹಜವಾಗಿ ಮೆತ್ತುತ್ತಿದ್ದಾಳೆ. ಈ ದೃಶ್ಯವನ್ನು ನೋಡಿದ ಮೇಲೆ ಕಣ್ಣುಗಳಿಗೆ ನಂಬಲಿಕ್ಕೇ ಆಗುವದಿಲ್ಲ. ಅಷ್ಟೊಂದು ಸಹಜವಾಗಿ ಈ ಪ್ರಕ್ರಿಯೆ ನಡೆದಿದೆ. ಮಹಿಳೆಯ ಗುರಿ ನೋಡಿದರೆ ಒಲಂಪಿಕ್ ನಲ್ಲಿ ಕಳುಹಿಸುವ ವಿಚಾರ ತಲೆಯಲ್ಲಿ ಬರುತ್ತದೆ. ಅಷ್ಟೊಂದು ಸರಿಯಾದ ಸ್ಥಳದ ಮೇಲೆಯೇ ಮಹಿಳೆ ಗುರಿಯಿಟ್ಟು ಕುಳ್ಳು ಮೆತ್ತುತ್ತಿದ್ದಾಳೆ.
ವಿಡಿಯೋ ನೋಡಿ
Indian basket ball team is searching for her. pic.twitter.com/hE2dBy7nAu
— Awanish Sharan (@AwanishSharan) June 29, 2022
ಪ್ರಸ್ತುತ ವಿಡಿಯೋವನ್ನು ಟ್ವಿಟರ್ ನಲ್ಲಿ IAS ಆಫೀಸರ್ ಆದ ಅವನೀಶ್ ಶರಣ್ ಅವರು ತಮ್ಮ ಅಕೌಂಟ್ ಮುಖಾಂತರ ಶೇರ್ ಮಾಡಿದ್ದಾರೆ. ಜೊತೆಗೆ ಕ್ಯಾಪ್ಶನ್ ನಲ್ಲಿ ‘ ಭಾರತೀಯ ಬಾಸ್ಕೆಟ್ ಬಾಲ್ ಅಸೋಶಿಯೇಶನ್ ಈ ಮಹಿಳೆಗೆ ಶೋಧಿಸುತ್ತಿದ್ದಾರೆ ‘ ಎಂದಿದ್ದಾರೆ.