ಹಸಿದು ಬಂದ ನವಿಲಿಗೆ ಕೈಯಾರೆ ಆಹಾರ ತಿನಿಸಿದ ತರಕಾರಿ ಮಾರುವ ಮಹಿಳೆ! ಜನರಂತಿದ್ದಾರೆ “ಹೃದಯವಂತೆ!” ನೋಡಿ ಈ ವೈರಲ್ ವಿಡಿಯೋ!

ಸಾಮಾಜಿಕ ಜಾಲತಾಣಗಳ ಕೊಡುಗೆ ಎಂಬಂತೆ ನಾವು ಭಿನ್ನ, ವಿಭಿನ್ನವಾದ, ಅಪರೂಪ ಹಾಗೂ ಆಶ್ಚರ್ಯಕರ ಎನಿಸುವಂತ ವೀಡಿಯೋಗಳನ್ನು ನೋಡಲು ಸಿಗುತ್ತದೆ‌. ಅಂತಹುವುಗಳಲ್ಲಿ ನಾವು ಸುಂದರವಾದ ಕಾಡಿನ ವೀಡಿಯೋಗಳು, ಅಲ್ಲಿನ ಅಂದವಾದ ನವಿಲುಗಳು, ಅವುಗಳ ಅದ್ಭುತ ನರ್ತನ ಹಾಗೂ ಅವುಗಳ ಅಂದ ಚೆಂದವನ್ನೆಲ್ಲಾ ನೋಡಿರುತ್ತೇವೆ‌. ಇದಲ್ಲದೇ ಲಾಕ್ ಡೌನ್ ವೇಳೆಯಲ್ಲಿ ಜನ ದಟ್ಟಣೆ ಇಲ್ಲದ ವೇಳೆ ನಗರಗಳು, ಪಟ್ಟಣಗಳ ಒಳಗೆ ಓಡಾಡಿದ ನವಿಲುಗಳನ್ನು ಕೂಡಾ ನೋಡಿ ಅಬ್ಬಾ ಎಷ್ಟು ವಿಶೇಷವಾದ ದೃಶ್ಯಗಳು ಅಂತ ಖುಷಿ ಪಟ್ಟಿದ್ವಿ ಕೂಡಾ‌‌.

ಅವುಗಳ ನಡುವೆ ಇತ್ತೀಚಿಗೆ ಒಂದು ನವಿಲಿನ ವೀಡಿಯೋ ವೈರಲ್ ಆಗ್ತಾ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಇದರಲ್ಲಿ ನವಿಲು ಅಂದವಾಗಿ ಓಡಾಡುವುದೋ, ಗರಿ ಬಿಚ್ಚಿ ತಾನು ಕುಣಿಯುವುದೋ ನೋಡಬಹುದು ಎಂದು ಕೊಂಡರೆ ಅದು ಊಹೆ ಮಾತ್ರವೇ ಕಾರಣ ಇಲ್ಲಿ ನಾವ್ಯಾರೂ ಊಹೆ ಮಾಡೋಕೆ ಸಾಧ್ಯವೇ ಇಲ್ಲದ ಒಂದು ಅಪರೂಪದ ಸನ್ನಿವೇಶಕ್ಕೆ ಈ ವೀಡಿಯೋ ಸಾಕ್ಷಿಯಾಗಿದೆ‌. ಹಾಗಾದರೆ ಅಂತಹ ವಿಶೇಷವಾದುದು, ಅಪರೂಪವಾದುದು ಅಥವಾ ಅನೂಹ್ಯವಾದುದು ಏನಿದೆ ಎನ್ನೋ ಕುತೂಹಲ ನಿಮ್ಮಲ್ಲಿ ಮೂಡಿದ್ರೆ ಖಂಡಿತವಾಗಿ ಅದಕ್ಕೆ ಉತ್ತರ ಇಲ್ಲಿದೆ. ಇನ್ನು ಈ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ರಸ್ತೆಯೊಂದರ ಬದಿ ಎಂದರೆ ನೀವು ನಂಬಲೇಬೇಕು.

ಹೌದು ಒಂದು ರಸ್ತೆ ಬದಿಯಲ್ಲಿ ತರಕಾರಿ ಮಾರುತ್ತಿದ್ದ ಒಬ್ಬ ಮಹಿಳೆಯ ಬಳಿಗೆ ಹಸಿದ ನವಿಲೊಂದು ಬಂದಿದೆ. ನವಿಲಿನ ಹಸಿವನ್ನು ಅರಿತು ಆಕೆ ಸ್ವಲ್ಪ ಆಹಾರವನ್ನು ಕೈಯಲ್ಲಿ ಇಟ್ಟುಕೊಂಡು ನವಿಲಿನ ಕಡೆಗೆ ಹಿಡಿದಾಗ ಅದು ಆಕೆಯ ಬಳಿ ಬಂದು ಕೈಯಲ್ಲಿದ್ದ ಆಹಾರವನ್ನು ತಿಂದಿದೆ. ಇದನ್ನು ಅಲ್ಲಿ ಅನೇಕರು ಈ ಅಪರೂಪದ ಸನ್ನಿವೇಶವನ್ನು ಫೋನ್ ಗಳಲ್ಲಿ ವೀಡಿಯೋ ಮಾಡಿಕೊಂಡಿದ್ದಾರೆ. ಅದಾದ ನಂತರ ಆಗಸ್ಟ್ 1 ರಂದು ಈ ವೀಡಿಯೋವನ್ನು ಟಿಂಕು ವೆಂಕಟೇಶ್ ಎನ್ನುವ ಟ್ವಿಟರ್ ಖಾತೆದಾರರು ತಮ್ಮ ಖಾತೆಯಲ್ಲಿ ಹಂಚಿಕೊಂಡು, ಅದರ ಜೊತೆಗೆ ಆ ನವಿಲಿಗೆ ಆಹಾರ ನೀಡುತ್ತಿರುವ ಮಹಿಳೆ ಬಗ್ಗೆ, “ಈಕೆ ಹೃದಯ ಶ್ರೀಮಂತಿಕೆಯುಳ್ಳವರು” ಎಂಬ ಸಾಲನ್ನು ವೀಡಿಯೋಗೆ ಶೀರ್ಷಿಕೆ ಹಾಕಿದ್ದಾರೆ.

ಅಪರೂಪದ ಈ ವೀಡಿಯೋವನ್ನು ಈಗಾಗಲೇ, 4.5 ಲಕ್ಷಕ್ಕಿಂತ ಅಧಿಕ ಜನ ವೀಕ್ಷಣೆ ಮಾಡಿದ್ದರೆ, 5 ಸಾವಿರಕ್ಕೂ ಹೆಚ್ಚು ಲೈಕ್‌ಗಳು ಮತ್ತು ಸಾವಿರಕ್ಕೂ ಹೆಚ್ಚು ರೀ-ಟ್ವೀಟ್‌ಗಳು ಮತ್ತು ಕಾಮೆಂಟ್‌ಗಳು ಬಂದಿವೆ. ವೀಡಿಯೋ ನೋಡಿದವರಲ್ಲಿ ಅನೇಕರು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ, ಇನ್ನೂ ಕೆಲವರು ನವಿಲು ತುಂಬಾ ಸ್ಮಾರ್ಟ್ ಎಂದರೆ, ಕೆಲವರು ನವಿಲಿನ ಮುಗ್ದತೆಯನ್ನು ಮೆಚ್ಚಿಕೊಂಡಿದ್ದಾರೆ. ಕೆಲವರಂತೂ‌ ನವಿಲು ಕಾರ್ತಿಕೇಯನ ವಾಹನ ಎಂದು ಕೂಡಾ ಟ್ವೀಟ್ ಮಾಡಿದ್ದಾರೆ. ಒಟ್ಟಾರೆ ಈ ವೀಡಿಯೋ ಮಾತ್ರ ಬಹಳ ಸೊಗಸಾಗಿದೆ. ‌