ಹಸುವಿನ ಹಾಲು ಕರೆಯಲು ಮಹಿಂದ್ರ ಟ್ರಾಕ್ಟರ್ ಬಳಸಿದ ವ್ಯಕ್ತಿ! ಆಶ್ಚರ್ಯ ವ್ಯಕ್ತ ಪಡಿಸಿದ ಆನಂದ್ ಮಹಿಂದ್ರ! ನೋಡಿ ಈ ವಿಡಿಯೋ!
ಐಡಿಯಾ ಯಾರ ಸ್ವತ್ತು ಅಲ್ಲ. ಇದು ಬರೀ ವಿದ್ಯಾವಂತರಿಗೇ ಅಷ್ಟೇ ಮೀಸಲೂ ಇಲ್ಲ. ಯಾರ ತಲೆಯಲ್ಲಿ ಯಾವಾಗ ಏನೋ ಹೊಳೆದು ಅದು ಜಾದೂವಿನ ರೂಪ ತಾಳುತ್ತದೆ ಗೊತ್ತಾಗುವದಿಲ್ಲ, ಅಲ್ವಾ?
ಸೋಶಿಯಲ್ ಮಿಡಿಯಾದಲ್ಲಿ ಸದ್ಯಕ್ಕೆ ಒಂದು ವೀಡಿಯೊ ತುಂಬಾ ಹರಿದಾಡುತ್ತಿದೆ. ವಿಡಿಯೋದಲ್ಲಿ ಹಸುವಿನ ಹಾಲನ್ನು ಕರೆಯುವ ಸಲುವಾಗಿ ಇಲ್ಲಿ ಟ್ರ್ಯಾಕ್ಟರ್ ದ ಉಪಯೋಗ ಮಾಡಲಾಗಿದೆ. ವಿಶೇಷವೆಂದರೆ ಈ ಕೆಲಸಕ್ಕೆ ಮನುಷ್ಯ ಬಲದ ಅವಶ್ಯಕತೆಯೇ ಇಲ್ಲ. ಇದನ್ನು ನೋಡಿದ ಮಹಿಂದ್ರಾ ಗ್ರೂಪ್ ಚೇರ್ಮನ್ ಆನಂದ ಮಹಿಂದ್ರಾ ಅವರೂ ಸಹಿತ ಭಲೇ ಎಂದು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ.
ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಇಲ್ಲಿ ನಡೆಯುತ್ತಿರುವ ಪ್ರಕ್ರಿಯೆಯ ಬಗ್ಗೆ ಸರಿಯಾಗಿ ಮಾಹಿತಿಯನ್ನು ನೀಡುತ್ತಿದ್ದಾನೆ. ಈ ಸಿಸ್ಟಮ್ ಅನ್ನು ನಿಮಗೆ ಬೇಕಾದ ಹಾಗೆ ನೀವು ಸೆಟ್ ಮಾಡಬಹುದು. ಹಾಲನ್ನು ಕರೆಯುವ ಸಲುವಾಗಿ ನಿಧಾನ ಅಥವಾ ವೇಗ ಈ ಎರಡು ಆಪ್ಶನ್ ಗಳನ್ನು ಬಳಸಬಹುದು. ಟ್ರ್ಯಾಕ್ಟರ್ ಸ್ಟಾರ್ಟ್ ಮಾಡಿದ ನಂತರ ಅದಕ್ಕೆ ಎಕ್ಸಲರೇಷನ್ ಕೊಡುವ ಅವಶ್ಯಕತೆ ಇಲ್ಲ. ವ್ಯಾಕ್ಯೂಮ್ ಸಲುವಾಗಿ ಏರ್ ಸೆಕ್ಷನ್ ತೆಗೆಯಬೇಕಾಗುವದು. ಆಗ ಹಾಲು ಬರಲು ಪ್ರಾರಂಭವಾಗುವದು. ಎರಡರಿಂದ ಮೂರು ನಿಮಿಷಗಳಲ್ಲಿ ಈ ಹಾಲು ಕರೆಯುವ ಕೆಲಸ ಮುಗಿಯುವದು.
ವಿಡಿಯೋ ನೋಡಿ…..
People keep sending me clips of how our tractors are used as ‘multi-tasking’ beasts of burden in rural areas. This one was a new one for me. Can the non-engineers amongst you figure out what essentially they have rigged out here? pic.twitter.com/OcKRYWXDyK
— anand mahindra (@anandmahindra) August 5, 2020
ಆನಂದ್ ಮಹಿಂದ್ರಾ ಅವರು ಈ ವೀಡಿಯೊವನ್ನು ಶೇರ್ ಮಾಡುತ್ತಾ ಹೀಗೆ ಹೇಳಿದ್ದಾರೆ, ಜನ ನನಗೆ ಬೇರೆ ಬೇರೆ ತರದ ಅನೇಕ ವಿಡಿಯೋಗಳನ್ನು ಕಳಿಸುತ್ತಿರುತ್ತಾರೆ. ಗ್ರಾಮೀಣ ಭಾಗಗಳಲ್ಲಿ ಟ್ರ್ಯಾಕ್ಟರ್ ದ ಉಪಯೋಗ ಅನೇಕ ಕೆಲಸಗಳಿಗಾಗಿ ಮಾಡುತ್ತಿರುತ್ತಾರೆ. ಆದರೆ ಈ ವೀಡಿಯೋ ನನಗೆ ಸಂಪೂರ್ಣ ಹೊಸದಾಗಿದೆ. ಇಲ್ಲಿ ನಿಜವಾಗಿಯೂ ನಡೆದಿದ್ದಾದರೂ ಏನು ಎಂಬುದನ್ನು, ಇಂಜಿನಿಯರ್ ನಲ್ಲದ ವ್ಯಕ್ತಿಯಿಂದ ನನಗೆ ತಿಳಿದುಕೊಳ್ಳಬೇಕಾಗಿದೆ….ಎಂದು ತಮ್ಮ ಹೊಗಳಿಕೆಯನ್ನು ವ್ಯಕ್ತ ಮಾಡಿದ್ದಾರೆ.
ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದ್ದು ಇದನ್ನು ನೋಡಿದ ನೆಟ್ಟಿಗರು ವಿವಿಧ ರೀತಿಯ ಕಮೆಂಟ್ಸ್ ಗಳನ್ನು ಮಾಡುತ್ತಿದ್ದಾರೆ.
Bit of an expensive way to use the suction from the air-filter but saves on buying a separate compressor. Could your engineers design an inline option to deliver milk foam to the tractor operators for their coffee? Thanks.
— Veeresh Malik ವೀರೇಶ್ ಮಲಿಕ್ वीरेश मलिक ਵੀਰੇਸ਼ ਮਲਿਕ (@VeereshMalik) August 5, 2020
You need to start "Mahindra Tractor Accessories" Division… Hire these talented guys…. Send offer letter NOW please
— Nishad Joshi (@nishadvjoshi) August 5, 2020