ಹಸು ಮತ್ತು ಎಮ್ಮೆಯ ಹಾಲನ್ನು ಎಲ್ಲರೂ ಮಾರಾಟ ಮಾಡುತ್ತಾರೆ, ಆದರೆ ಈತ ಕತ್ತೆಯ ಹಾಲನ್ನು ಮಾರಿ ಗಳಿಸುತ್ತಾನೆ ಲಕ್ಷ ಲಕ್ಷ ರೂಪಾಯಿಗಳನ್ನು….

ದಿನಗಳದಂತೆ ಜನರು ದಿನನಿತ್ಯ ತಮ್ಮ ಉದರ ನಿರ್ವಾಹಕ್ಕೆ ಹೊಸ ಹೊಸ ಐಡಿಯಾಗಳನ್ನು ಜಾರಿಗೆ ತರುತ್ತಿದ್ದಾರೆ. ಕೆಲವರಂತೂ ಕನಸಿನಲ್ಲಿಯೂ ಪೂರ್ಣವಾಗದಂತಹ ಉಪಾಯಗಳನ್ನು ನಿಜಜೀವನದಲ್ಲಿ ಯಶಸ್ವಿಯನ್ನಾಗಿ ಮಾಡಿದ್ದಾರೆ. ಇಂದಿನ ಈ ಲೇಖನದಲ್ಲಿಯ ಕಥೆಯೂ ಹೀಗೆ ಇದೆ. ಈತ ಎಲ್ಲರೂ ಮಾಡುವುದಕ್ಕಿಂತ ಬೇರೆ ಏನಾದರೂ ಮಾಡಿ ತನ್ನ ಉದ್ಯೋಗದಲ್ಲಿ ಯಶಸ್ವಿಯಾಗಿದ್ದಾನೆ.

ನಾವೆಲ್ಲರೂ ಹಸು, ಎಮ್ಮೆ ಮತ್ತು ಆಡಿನ ಹಾಲಿನ ಬಗ್ಗೆ ಕೇಳಿದ್ದೇವೆ. ಆದರೆ ಈ ವ್ಯಕ್ತಿ ಕತ್ತೆಯ ಹಾಲಿನಿಂದ ಉದ್ಯೋಗವನ್ನು ಪ್ರಾರಂಭಿಸುವ ನಿರ್ಣಯವನ್ನು ತೆಗೆದುಕೊಂಡನು. ವರ್ಷಕ್ಕೆ ಲಕ್ಷಾವಧಿ ರೂಪಾಯಿಗಳ ಪ್ಯಾಕೇಜ್ ತೊರೆದು ಹೊಸದಾದ ಕ್ಷೇತ್ರದಲ್ಲಿ ಅವಕಾಶವನ್ನು ಶೋಧಿಸುವುದು ಅಷ್ಟೊಂದು ಸರಳವಾದ ಕೆಲಸವಲ್ಲ. ಆದರೆ ಕೇರಳದಲ್ಲಿಯೇ ಎಬಿ ಬೇಬಿ ತನ್ನ ದೃಢ ನಿಶ್ಚಯದಿಂದ ಇಂದು ಯಶಸ್ವಿ ಕತ್ತೆಯ ಹಾಲು ಮಾರಾಟಗಾರ ಎನಿಸಿ ಕೊಂಡಿದ್ದಾನೆ.

ಇಂದು ತಿಂಗಳಿಗೆ ಲಕ್ಷಾವಧಿ ರೂಪಾಯಿಗಳನ್ನು ಗಳಿಸುತ್ತಿರುವ ಎಬಿಗೆ ಇಲ್ಲಿಯವರೆಗೆ ಬಂದು ತಲುಪಲು ಅನೇಕ ವರ್ಷಗಳು ಹಿಡಿದವು. ಅನೇಕ ವರ್ಷಗಳ ಸಂಶೋಧನೆಯ ನಂತರ ಕತ್ತೆ ಹಾಲಿನಲ್ಲಿರುವ ಲಾಭಕಾರಿ ಗುಣಗಳ ಬಗ್ಗೆ ತಿಳಿದುಕೊಳ್ಳಲು ಯಶಸ್ವಿಯಾದನು.

ಹಾಗೆ ನೋಡಲಾಗಿ ಮೊದಲಿನಿಂದಲೂ ಈತನಿಗೆ ಏನಾದರೂ ಹೊಸದನ್ನು ಮಾಡಬೇಕು ಮತ್ತು ಅದರಲ್ಲಿ ಯಶಸ್ವಿಯಾಗಬೇಕು ಎಂಬ ವಿಚಾರವನ್ನು ಹೊಂದಿದ್ದನು. ಈತನಿಗೆ ಲಂಡನ್ ನಿಂದ ಬಂದ ಗೆಳೆಯನಿಂದ ಪ್ರೇರಣೆ ಸಿಕ್ಕಿತು. ಆತ ಭಾರತಕ್ಕೆ ಬಂದು ಸ್ವಂತದ ಸ್ಟಾರ್ಟಅಪ್ ಪ್ರಾರಂಭಿಸಿದನು. ಆತ ಕಸದಿಂದ ಸೊಳ್ಳೆಗಳನ್ನು ಸಾಯಿಸುವ ಔಷಧವನ್ನು ತಯಾರಿಸಿದನು. ಇದರಿಂದಲೇ ಏಬಿಗೆ ತಾನೂ ಏನಾದರೂ ಸ್ವಂತದ ಉದ್ಯೋಗವನ್ನು ಪ್ರಾರಂಭಿಸಬೇಕೆಂದು ಪ್ರೇರಣೆ ಸಿಕ್ಕಿತು.

ಎಬಿ ಕೇರಳದಲ್ಲಿಯ ಸುಪ್ರಸಿದ್ಧ ಐಟಿ ಕಂಪನಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ನಾಗಿ ಮಾಡುತ್ತಿದ್ದ ಒಳ್ಳೆಯ ನೌಕರಿಯನ್ನು 2006 ರಲ್ಲಿ ತ್ಯಜಿಸಿ ತನ್ನ ಹುಟ್ಟೂರಲ್ಲಿ ಕತ್ತೆಗಳ ಸಾಕಾಣಿಕೆಯನ್ನು ಶುರುಮಾಡಿದನು. ಸತತ ಹತ್ತು ವರ್ಷಗಳ ವರೆಗೆ ಅವುಗಳ ಮೇಲೆ ರಿಸರ್ಚ್ ಮಾಡಿ ಈಜಿಪ್ಟಿನ ರಾಣಿ ತನ್ನ ಸೌಂದರ್ಯ ವೃದ್ಧಿಗಾಗಿ ಕತ್ತೆಯ ಹಾಲನ್ನು ಯಾಕೆ ಉಪಯೋಗಿಸಿದ್ದಳು. ಆನಂತರ ಆತ ಸಂಪೂರ್ಣ ದಕ್ಷಿಣ ಭಾರತದಲ್ಲಿ ಸುತ್ತಾಡಿದನು. ಏತನ್ಮಧ್ಯೆ 2015 ರವರೆಗೆ ಆತ ಒಟ್ಟು 32 ಕತ್ತೆಗಳನ್ನು ಖರೀದಿಸಿದನು. ಅದಕ್ಕೂ ಮೊದಲು ಆತ ಎರಡೂವರೆ ಎಕರೆ ಭೂಮಿಯನ್ನು ಖರೀದಿಸಿ ಅಲ್ಲಿ ಒಳ್ಳೆಯ ಹುಲ್ಲನ್ನು ಬೆಳೆಸಿ ಒಳ್ಳೆಯ ತೋಟ ನಿರ್ಮಿಸಿದನು.

ಒಂದು ಸಂದರ್ಶನದಲ್ಲಿ ಎಬಿ ಹೇಳುವ ಪ್ರಕಾರ, ನನಗೆ ಗಾಯಡನ್ಸ್ ಮಾಡುವ ಸಲುವಾಗಿ ನನ್ನ ಜೊತೆಗೆ ಯಾರೂ ಇರಲಿಲ್ಲ. ಹೀಗಾಗಿ ಮೊದಮೊದಲು ಸ್ವಲ್ಪ ಕಷ್ಟಗಳು ಎದುರಾದವು. ಆ ಸಮಯದಲ್ಲಿ ಲಕ್ಷಾವಧಿ ರೂಪಾಯಿಗಳ ನಷ್ಟವೂ ಸಂಭವಿಸಿತು. ಕೆಲಸ ಶುರು ಮಾಡಿದ ಪ್ರಾರಂಭದಲ್ಲಿ ಎಬಿ ಸಹೋದರ ಮತ್ತು ಸಂಬಂಧಿಕರಿಂದ ಸ್ವಲ್ಪ ಹಣವನ್ನು ಪಡೆದುಕೊಂಡಿದ್ದನು. ಆಗ ಆ ಎಲ್ಲ ಹಣವು ನಷ್ಟದಲ್ಲಿ ಹೋಯಿತು.

ಎಬಿ ಪ್ರಕಾರ ಆತ ತನ್ನ ಉತ್ಪಾದನೆಯಲ್ಲಿ ಕತ್ತೆಯ ಹಾಲಿನ ಜೊತೆಗೆ ರೋಜ್ ಮೇರಿಯ ಕೃಷಿಯನ್ನು ಮಾಡುತ್ತಿದ್ದನು. ಎಬಿ ಮೊದಲು ಮನೆಯ ಹತ್ತಿರದ ಬದಿಯಿಂದ ಕೃಷಿ ವ್ಯವಸಾಯ ಶುರುಮಾಡಿದನು. ಮೊದಲು ಆತ ಅನೇಕ ಕಾಸ್ಮೆಟಿಕ್ ಗಳನ್ನು ತಯಾರಿಸಿದನು. ಅವುಗಳಲ್ಲಿ ಬ್ಯೂಟಿ ಕ್ರೀಮ್, ಶಾಂಪೂ, ಬಾತ್-ವಾಷ್ ಇತ್ಯಾದಿ. ಎಬಿ ಹೇಳುವ ಹಾಗೆ, ಕತ್ತೆಯ ಹಾಲನ್ನು ತೆಗೆದು ಅದನ್ನು ವಿದೇಶಗಳಲ್ಲಿ ಉಪಯೋಗಿಸುವ ಈ ರೀತಿಯ ಮೊದಲ ಉಪಕ್ರಮ ಇದಾಗಿದೆ ಎನ್ನುತ್ತಾರೆ.

ಕತ್ತೆಯ ಹಾಲು ಚರ್ಮಕ್ಕಾಗಿ ತುಂಬಾ ಲಾಭದಾಯಕವಾಗಿದೆ ಎಂದು ಎಬಿಯ ನೆರೆಹೊರೆಯವರು ಹೇಳುತ್ತಿದ್ದಾರೆ. ಕತ್ತೆಯ ಹಾಲಿನಿಂದ ಅನೇಕ ರೋಗಗಳು ದೂರವಾಗುತ್ತವೆ ಎಂದು ಎಬಿ ದಾವೆ ಮಾಡಿ ಹೇಳುತ್ತಾರೆ. ಅನೇಕ ರೋಗಗಳಿಂದ ಮುಕ್ತವಾಗಲು ಎಷ್ಟೋ ಜನರು ಎಬಿಯ ತೋಟಕ್ಕೂ ಬರುತ್ತಾರಂತೆ. ಇಂಟರ್ನೆಟ್ ಮತ್ತು ಟೆಕ್ನಾಲಾಜಿಕಲ್ ಕ್ರಾಂತಿಯ ಕಾರಣದಿಂದಾಗಿ ಎಬಿ ಅವರು ಈಗ ಆನ್ಲೈನ್ ವೆಬ್ಸೈಟ್ ಡಾಲ್ಫಿನಿಬಾ ಡಾಟ್ ಕಾಮ್ ಮುಖಾಂತರ ತಮ್ಮ ಉತ್ಪಾದನೆಗಳನ್ನು ಮಾರಾಟ ಮಾಡುತ್ತಿದ್ದಾರೆ.

ಸಂಶೋಧಕರ ಪ್ರಕಾರ ಕತ್ತೆಯ ಹಾಲು ಕ್ಷಯರೋಗ, ದಮ್ಮು, ಕಾಮಾಲೆ ಮತ್ತು ಅಲರ್ಜಿಯಂತಹ ಅನೇಕ ರೋಗಗಳ ಮೇಲೆ ರಾಮಬಾಣ ಔಷಧಿಯಾಗಿದೆ. ಅಷ್ಟೇ ಅಲ್ಲ ಭಾರತದ ಮಾರುಕಟ್ಟೆಯಲ್ಲಿ ಈ ಹಾಲು 5 ರಿಂದ 6 ಸಾವಿರ ರೂಪಾಯಿ ಲೀಟರ್ ಗಳಿಗೆ ಮಾರಾಟವಾಗುತ್ತದೆ ಅಂತೆ. ಒಳ್ಳೆಯ ಕತ್ತೆಗಳು 80 ಸಾವಿರದಿಂದ 1 ಲಕ್ಷ ರೂಪಾಯಿಗಳವರೆಗೆ ದೊರೆಯುತ್ತವೆ. ಅಂಥ ಕತ್ತೆಗಳ ಹಾಲಿನಿಂದ ತಯಾರಿಸಿದ ಪದಾರ್ಥಗಳು ತುಂಬಾ ಬೆಲೆಗೆ ಮಾರಾಟವಾಗುತ್ತದೆ ಎಂದು ಎಬಿ ಹೇಳುತ್ತಾರೆ.

ಕೇರಳದ ಈ ಅಧುನಿಕ ರೈತ ತನ್ನ ಈ ವಿನೂತನ ಬೇಸಾಯದ ಮುಖಾಂತರ ಯಶಸ್ಸನ್ನು ಪಡೆಯುವುದು ಹೇಗೆ ಎಂಬುದು ಹೇಳಿದ್ದಾನೆ. ಪರಂಪರಾಗತವಾಗಿ ಬಂದ ಬೇಸಾಯದ ಬದಲಾಗಿ ಬೇರೆ ಮಾರ್ಗಗಳ ಮುಖಾಂತರ ಸಾಕಷ್ಟು ಹಣವನ್ನು ಗಳಿಸಬಹುದೆಂಬ ಒಳ್ಳೆಯ ಉದಾಹರಣೆ ಎಬಿ ನೀಡಿದ್ದಾನೆ.