ಹಾರುವ ಹಕ್ಕಿಯನ್ನು ಚಂಗನೆ ಜಿಗಿದು ವಿದ್ಯುತ್ತಿನಂತೆ ಬೇಟೆಯಾಡಿದ ಬೆಕ್ಕು; ಮರುಕ್ಷಣವೇ ಬಾಜಿ ಪಲಟಾಯಿಸಿದ ಹಕ್ಕಿಯ ಮಿತ್ರರು.

ಗೇಣುದ್ದ ಹೊಟ್ಟೆಗಾಗಿ ಈ ಪ್ರಪಂಚದಲ್ಲಿ ಪ್ರತಿಯೊಂದು ಜೀವಿ ಸಂಘರ್ಷ ಮಾಡುವುದನ್ನು ನಾವು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಅನೇಕ ವಿಡಿಯೋಗಳಲ್ಲಿ ನೋಡುತ್ತೇವೆ. ನಿಸರ್ಗ ಎಲ್ಲ ಪ್ರಾಣಿಗಳಿಗೆ ಒಂದೊಂದು ರೀತಿಯ ಶಕ್ತಿಯನ್ನು ನೀಡಿದ್ದಾನೆ. ಆ ಶಕ್ತಿಯ ಉಪಯೋಗವನ್ನು ಮಾಡಿಕೊಂಡು ಪ್ರತಿಯೊಂದು ಜೀವಿ ಭೂಮಿಯ ಮೇಲೆ ಬದುಕಲು ಪ್ರಯತ್ನಿಸುತ್ತಿರುತ್ತದೆ. ಈ ಪ್ರಯತ್ನ ಮಾಡುವಾಗ ಅವುಗಳ ಹೋರಾಟದ ಕೆಲವೊಂದು ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗುತ್ತವೆ ಮತ್ತು ನಮ್ಮ ಕಣ್ಣುಗಳ ಮುಂದೆ ಹರಿದಾಡುತ್ತವೆ. ಇಂಥ ವಿಡಿಯೋಗಳು ಕೆಲವು ಸಲ ತುಂಬಾ ರೋಚಕತೆಯಿಂದ ಕೂಡಿರುತ್ತವೆ.

ಸದ್ಯ ಇಲ್ಲಿ ನೋಡಲಿರುವ ವಿಡಿಯೋ ಕಂಟೆಂಟ್ ಸಹ ತುಂಬಾ ರೋಚಕತೆಯಿಂದ ಕೂಡಿದೆ. ಪ್ರಸ್ತುತ ದೃಶ್ಯದಲ್ಲಿ ಬೆಕ್ಕು ಸಖತ್ ಬೇಟೆಯಾಡಿದೆ. ಬೆಕ್ಕಿನ ಈ ಬೇಟೆಗಾರಿಕೆ ನಿಜಕ್ಕೂ ಅದ್ಭುತವಾಗಿದೆ ಎಂದು ಕಂಡುಬರುತ್ತದೆ. ಅದಕ್ಕೆ ಅಂತಲೇ ಬೆಕ್ಕಿಗೆ ಹುಲಿಯ ಸೋದರ ಮಾವ ಎಂತಲೂ ಕರೆಯುತ್ತಾರೆ. ಇಲ್ಲಿ ಬೆಕ್ಕು ಬೇಟೆಗಾಗಿ ಹೊಂಚು ಹಾಕಿ ಕುಳಿತಿದೆ. ಆಕಾಶದಿಂದ ಹಾರಿ ಬರುತ್ತಿರುವ ಹಕ್ಕಿಯನ್ನು ಬೆಕ್ಕು ವಿದ್ಯುತ್ತಿನ ವೇಗದಲ್ಲಿ ಚಂಗನೇ ಜಿಗಿದು ತನ್ನ ಕೈಯುಗುರುಗಳಲ್ಲಿ ಕ್ಯಾಚ್ ಮಾಡಿಕೊಳ್ಳುತ್ತದೆ. ಬೆಕ್ಕಿನ ಈ ಸಫಲತೆ ಸೂಪರ್ ಆಗಿದ್ದರೂ ಅದೃಷ್ಟ ಮಾತ್ರ ಯಾಕೋ ಚೆನ್ನಾಗಿರಲಿಲ್ಲ ಎಂದು ಮುಂದೆ ಕಂಡು ಬರುತ್ತದೆ. ಕಾರಣ ಬೆಕ್ಕು ಬೇಟೆಯಾಡಿದ ಮರುಕ್ಷಣವೇ ಹಕ್ಕಿಯ ಇನ್ನೆರಡು ಸಂಗಡಿಗರು ಬೆಕ್ಕಿನ ಮೇಲೆ ಹಠಾತ್ ಅಟ್ಯಾಕ್ ಮಾಡುತ್ತವೆ. ಇಲ್ಲಿ ಬೆಕ್ಕು ತನ್ನ ಮೇಲಾದ ಹಠಾತ್ ಅಟ್ಯಾಕ್ ನಿಂದ ಗಲಿಬಿಲಿಗೊಳ್ಳುತ್ತದೆ ಮತ್ತು ತನ್ನ ಕೈಯಲ್ಲಿದ್ದ ಬೇಟೆಯನ್ನು ಬಿಟ್ಟುಬಿಡುತ್ತದೆ.

ವೀಡಿಯೋ ನೋಡಿ

ಬೇಟೆಯ ಅಚ್ಚರಿಪಡಿಸುವ ಈ ಸುಂದರ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ liebes.haustier ಹೆಸರಿನ ಐಡಿಯಿಂದ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನೋಡಿ ಅನೇಕ ನೆಟ್ಟಿಗರು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.