ಹಾರ್ಟ್ ಅಟ್ಯಾಕ್! ತುರ್ತು ಪರಿಸ್ಥಿಯಲ್ಲಿ ಈ 5 ಮಹತ್ವದ ಉಪಾಯಗಳಿಂದ ಉಳಿಯುವುದು ವ್ಯಕ್ತಿಯ ಪ್ರಾಣ.
ಹಾರ್ಟ್ ಅಟ್ಯಾಕ್ ಬಂದಾಗ ಮೊದಲ 15 ನಿಮಿಷಗಳಲ್ಲಿ ವೈದ್ಯಕೀಯ ಉಪಚಾರ ದೊರೆತರೆ 99% ರೋಗಿಗಳ ಪ್ರಾಣ ಉಳಿಯುತ್ತದೆ ಎಂದು ಹೃದಯ ತಜ್ಞರು ಹೇಳುತ್ತಾರೆ.
ಮೊದಲು ಹಾರ್ಟ್ ಅಟ್ಯಾಕ್ ನ ಲಕ್ಷಣಗಳನ್ನು ತಿಳಿದುಕೊಳ್ಳುವುದು ತುಂಬಾ ಅವಶ್ಯಕವಾಗಿದೆ. ಒಂದು ಗಮನದಲ್ಲಿಡಬೇಕಾದ ವಿಷಯವೇನೆಂದರೆ ಪ್ರತಿಯೊಬ್ಬರ ಲಕ್ಷಣಗಳು ಬೇರೆ ಬೇರೆಯಾಗಿರುತ್ತವೆ. ಹೃದಯಾಘಾತ ಒಮ್ಮೆಲೆ ಎದೆಯಲ್ಲಿ ನೋವಾಗುವುದರಿಂದ ಸಂಭವಿಸುವುದಿಲ್ಲ. ಸ್ವಲ್ಪ ನೋವು ಹಾಗೂ ಚಡಪಡಿಕೆ ಅಥವಾ ಮನಸ್ಸಿಗೆ ಸಮಾಧಾನವಿಲ್ಲದಂತೆ ಆಗುವದು. ಇದು ರೆಸ್ಟ್ ತೆಗೆದುಕೊಳ್ಳುವಾಗ ಅಥವಾ ಇನ್ನಿತರ ಕೆಲಸಗಳಲ್ಲಿ ಸಕ್ರಿಯರಾಗಿದ್ದಾಗಲೂ ಆಗಬಹುದು.
ಇದರ ಚಿಕಿತ್ಸೆಯು ವಯಸ್ಸು, ಲಿಂಗ ಮತ್ತು ಲಕ್ಷಣಗಳ ಮೇಲೆ ಅವಲಂಬಿಸಿರುತ್ತದೆ. ಹಾರ್ಟ್ ಅಟ್ಯಾಕ್ ನ ಸಾಮಾನ್ಯ ಲಕ್ಷಣ ಏನೆಂದರೆ ಎದೆಯ ಮೇಲೆ ಒತ್ತಡ ನಿರ್ಮಾಣವಾಗುತ್ತದೆ. ಈ ನೋವು ಸ್ವಲ್ಪ ಸಮಯದವರೆಗೆ ಇರುತ್ತದೆ. ನಂತರ ಕಡಿಮೆಯಾಗಿ ಮತ್ತೆ ಶುರುವಾಗುತ್ತದೆ. ಅದರ ಜೊತೆಗೆ ಈ ನೋವು, ತಳಮಳ, ದೇಹದ ಬೇರೆ ಬೇರೆ ಭಾಗಗಳಿಗೆ ಸಂಚರಿಸುವುದು. ಆಗ ವ್ಯಕ್ತಿಯ ಒಂದು ಕೈ ಅಥವಾ ಎರಡು ಕೈಗಳು, ಬ್ಯಾಕ್ ಪೇನ್ ಮತ್ತು ಕುತ್ತಿಗೆಯಲ್ಲಿ ವೇದನೆಯಾಗುತ್ತದೆ. ಇದರ ಹೊರತಾಗಿ ರೋಗಿಗೆ ಬೆವರು ಬಿಡುವುದು, ತಲೆ ಸುತ್ತುವುದು, ವಾಂತಿಯಾಗುವಿಕೆ, ಖಿನ್ನತೆ, ಅಪಚನ, ದಣಿವುಗಳಂತಹ ಲಕ್ಷಣಗಳು ಕಂಡುಬರುತ್ತವೆ.
ಮೆಯೋ ಕ್ಲಿನಿಕ್ ಪ್ರಕಾರ, 15 ನಿಮಿಷಗಳಿಗಿಂತಲೂ ಹೆಚ್ಚು ಸಮಯ ಎದೆಯಲ್ಲಿ ನೋವು ಕಾಣಿಸಿಕೊಂಡರೆ ಹಾರ್ಟ್ ಅಟ್ಯಾಕ್ ಬರುತ್ತದೆ. ಕೆಲವರಿಗೆ ಈ ನೋವು ಕಡಿಮೆ ಪ್ರಮಾಣದಲ್ಲಿ ಕಂಡು ಬಂದರೆ ಇನ್ನೂ ಕೆಲವರಿಗೆ ಹೆಚ್ಚು ವೇದನೆ ನೀಡುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಕೆಲವೊಂದು ವ್ಯಕ್ತಿಗಳಿಗೆ ಎದೆಯಲ್ಲಿ ನೋವು ಕಾಣಿಸುವುದಿಲ್ಲ ಮತ್ತು ಒತ್ತಡವು ಕಂಡುಬರುವುದಿಲ್ಲ. ಕೆಲವರಿಗೆ ಆಕಸ್ಮಿಕವಾಗಿ ನೋವು ಪ್ರಾರಂಭವಾಗುತ್ತದೆ. ಕೆಲವರಿಗೆ ಕೆಲವು ಗಂಟೆ ಮೊದಲು ಅಥವಾ ಒಂದು ದಿವಸ ಮೊದಲೇ ಮುನ್ಸೂಚನೆಯನ್ನು ತೋರಿಸುತ್ತದೆ. ಹಾರ್ಟ್ ಅಟ್ಯಾಕ್ ನಂತಹ ತುರ್ತುಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಕೆಲವು ಮಹತ್ವದ ಉಪಾಯಗಳನ್ನು ಅನುಸರಿಸಿದ್ದೇ ಆದರೆ ವ್ಯಕ್ತಿಯ ಪ್ರಾಣ ಉಳಿಯುವಲ್ಲಿ ಸಾಕಷ್ಟು ಸಹಾಯವಾಗುತ್ತದೆ.
ಎಮರ್ಜೆನ್ಸಿ ನಂಬರ್ ಗಳಿಗೆ ಕಾಲ್ ಮಾಡಿ..
ಯಾವುದೇ ವ್ಯಕ್ತಿಗೆ ಅಥವಾ ಸ್ವಂತಕ್ಕೆ ಈ ರೀತಿಯ ಲಕ್ಷಣಗಳು ಕಂಡು ಬಂದರೆ ಆದಷ್ಟು ಬೇಗ ಮೆಡಿಕಲ್ ಎಮರ್ಜೆನ್ಸಿ ನಂಬರ್ ಗಳಿಗೆ ಫೋನ್ ಮಾಡಿ. ಆದರೂ ಸಹ ಅಂಬುಲೆನ್ಸ್ ಬರಲು ಅಥವಾ ತುರ್ತುಪರಿಸ್ಥಿತಿಯಲ್ಲಿ ವಾಹನ ಸಿಗದೆ ಇದ್ದಾಗ ನೆರೆಹೊರೆಯವರ ಸಹಾಯವನ್ನು ಅವಶ್ಯವಾಗಿ ತೆಗೆದುಕೊಳ್ಳಿ ಮತ್ತು ಸಮೀಪದ ಆಸ್ಪತ್ರೆಯನ್ನು ತಲುಪಲು ಪ್ರಯತ್ನಿಸಿ. ಈ ಸಂದರ್ಭದಲ್ಲಿ ಹಾರ್ಟ್ ಅಟ್ಯಾಕ್ ನೋವು ಅನುಭವಿಸುತ್ತಿರುವ ವ್ಯಕ್ತಿಗೆ ವಾಹನ ನಡೆಸಲು ಕೊಡಬೇಡಿ. ಅಥವಾ ಸ್ವತಃ ಈ ಸಮಸ್ಯೆಗೆ ಎದುರಾಗಿದ್ದರೆ ಅವರು ಸಹ ವಾಹನ ನಡೆಸುವ ಪ್ರಯತ್ನ ಮಾಡಬಾರದು.
ಎಸ್ಪರಿನ್ ತೆಗೆದುಕೊಳ್ಳಿ..
ಎಲ್ಲಿಯವರೆಗೆ ವೈದ್ಯಕೀಯ ಸಹಾಯ ದೊರೆಯುವದಿಲ್ಲವೋ ಅಲ್ಲಿಯವರೆಗೆ ಎಸ್ಪರೀನ್ ಟ್ಯಾಬಲೆಟ್ ಬಾಯಿಯಲ್ಲಿ ಇಡಿ ಅಥವಾ ನುಂಗಿ ಬಿಡಿ. ಎಸ್ಪರಿನ ರಕ್ತದ ಗಂಟುಗಳಾಗುವದನ್ನು ತಡೆಯುತ್ತದೆ. ಇದು ಹಾರ್ಟ್ ಅಟ್ಯಾಕ್ ಆದ ನಂತರ ಹೃದಯಕ್ಕೆ ಹಾನಿಯಾಗುವದರಿಂದ ತಡೆಯುತ್ತದೆ. ಒಂದು ವೇಳೆ ಈ ಎಸ್ಪರಿನ್ ಟ್ಯಾಬ್ಲೆಟ್ ನ ಅಲರ್ಜಿ ಇದ್ದರೆ ಮತ್ತು ಡಾಕ್ಟರ್ ಬೇಡ ಎಂದಿದ್ದರೆ ವ್ಯಕ್ತಿಗೆ ಇದನ್ನು ನೀಡಬೇಡಿ.
ನಾಯಿಟ್ರೋಗ್ಲಿಸರಿನ್ ತೆಗೆದುಕೊಳ್ಳಿ..
ಒಂದು ವೇಳೆ ಡಾಕ್ಟರ್ ನಾಯಿಟ್ರೋಗ್ಲಿಸರಿನ್ ತೆಗೆದುಕೊಳ್ಳಲು ಅನುಮತಿ ನೀಡಿದ್ದರೆ ಅವಶ್ಯವಾಗಿ ಇದನ್ನು ರೋಗಿಗೆ ತೆಗೆದುಕೊಳ್ಳಲು ಹೇಳಿ ಅಥವಾ ಸಂಬಂಧಪಟ್ಟ ರೋಗಿಗೆ ನೀಡಿ. ಡಾಕ್ಟರ್ ವ್ಯಕ್ತಿಗೆ ಈ ಔಷಧಿಯನ್ನು ರೆಫರೆನ್ಸ್ ಮಾಡಿದ್ದರೆ ಅವರ ಗಾಯಡನ್ಸ್ ನಲ್ಲಿಯೇ ಇದನ್ನು ನೀಡಿ.
ಡೀಫಿಬ್ರಿಲೇಟರ್ ಉಪಯೋಗ ಅತ್ಯವಶ್ಯ..
ಒಂದು ವೇಳೆ ರೋಗಿ ಮೂರ್ಛೆ ಹೋಗಿದ್ದರೆ ಮತ್ತು ನಿಮ್ಮ ಹತ್ತಿರ ಆಟೋಮೇಟೆಡ್ ಎಕ್ಸ್ಟರ್ನಲ್ ಡಿಫಿಬ್ರಿಲೆಟರ್ ಉಪಲಬ್ಧವಿದ್ದರೆ ಆ ಡಿವೈಸ್ ನ್ನು ನೀಡಿದ ನಿರ್ದೇಶಗಳ ಪ್ರಕಾರ ಉಪಯೋಗಿಸಿ. ಕಾರ್ಡಿಯಾಕ್ ಅರೆಸ್ಟ್ ಅಥವಾ ಹಾರ್ಟ್ ಅಟ್ಯಾಕ್ ನಲ್ಲಿ ಇದರ ಉಪಯೋಗವಾಗುತ್ತದೆ.
ಸಿಪಿಆರ್ (Cardiopulmonary resuscitation) ಮಾಡಿ..
ರೋಗಿಯು ಮೂರ್ಚಿತಾವಸ್ಥೆಯಲ್ಲಿದ್ದರೆ ಆತನಿಗೆ ಸಿಪಿಆರ್ ಮಾಡಿ. ವ್ಯಕ್ತಿಯು ಉಸಿರಾಟದ ತೊಂದರೆ ಅನುಭವಿಸುತ್ತಿದ್ದರೆ ಮತ್ತು ನಾಡಿ ಗುರುತಿಸಲು ಸಾಧ್ಯವಾಗದಂಥ ಪರಿಸ್ಥಿತಿ ಇದ್ದಾಗ ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆಯ ಸಹಾಯ ಅವಶ್ಯಕತೆ ಇರುವ ರೋಗಿಗೆ ಅಂಥ ಸಂದರ್ಭದಲ್ಲಿ ಸಿಪಿಆರ್ ಮಾಡಲು ಪ್ರಾರಂಭಿಸಿ. ಈ ಪ್ರಕ್ರಿಯೆಯಲ್ಲಿ ರೋಗಿಯ ಎದೆಯ ಮೇಲೆ ನಿರ್ದಿಷ್ಟ ಮಟ್ಟದ ಒತ್ತಡ ಹಾಕಿ ವೇಗದಿಂದ ಪುಷ್ ಮಾಡುತ್ತಾ ಇರಬೇಕು. ಈ ರೀತಿಯ ಪ್ರಕ್ರಿಯೆ 1 ನಿಮಿಷದಲ್ಲಿ 100 ರಿಂದ 120 ಬಾರಿ ಮಾಡಬೇಕು.