ಹಾರ್ದಿಕ್ ನಾಯಕತ್ವ-ನೆಹ್ರಾ ಅವರ ಪ್ಲ್ಯಾನಿಂಗ್. ಗುಜರಾತ್ ಟೈಟನ್ಸ್ ಚಾಂಪಿಯನ್ ಮಾಡಿರುವ 3 ಗೊತ್ತಿರದ ವಿಷಯಗಳು….!!

ಗುಜರಾತ್ ಟೈಟಾನ್ಸ್ ಐಪಿಎಲ್ 2022 ರ ಚಾಂಪಿಯನ್ ಆಗಿದೆ. ಹಾರ್ದಿಕ್ ಪಾಂಡ್ಯಾ ನಾಯಕತ್ವದಲ್ಲಿ ತಂಡವು ತನ್ನ ಚೊಚ್ಚಲ ಸರಣಿಯಲ್ಲಿ ಇತಿಹಾಸ ನಿರ್ಮಿಸಿ ಕಪ್ ಗೆದ್ದುಕೊಂಡಿದೆ. ಗುಜರಾತ್ ಚಾಂಪಿಯನ್ ಆಗಲು ಕಾರಣವಾದ ಅಂಶಗಳು ಯಾವುವು?ನಾವು ಇಂದು ನಿಮಗೆ ಹೇಳಲು ಬಯಸುತ್ತೇವೆ.

ಇಂಡಿಯನ್ ಪ್ರೀಮಿಯರ್ ಲೀಗ್ ಐಪಿಎಲ್ 2022 ರಲ್ಲಿ ಪಾದಾರ್ಪಣೆ ಮಾಡಿದ ಗುಜರಾತ್ ಟೈಟಾನ್ಸ್, ಹಾರ್ದಿಕ್ ಪಾಂಡೆ ಅವರನ್ನು ನಾಯಕನನ್ನಾಗಿ ಮಾಡಿದಾಗ ಎಲ್ಲರಿಗೂ ಆಶ್ಚರ್ಯದೊಂದಿಗೆ ಆ#ಘಾತಕ್ಕೊಳಗಾಯಿತು. ಯಾಕೆಂದರೆ ಇಲ್ಲಿಯವರೆಗೆ ಹಾರ್ದಿಕ್ ಪಾಂಡ್ಯ ಯಾವುದೇ ತಂಡದ ನಾಯಕತ್ವ ವಹಿಸಿರಲಿಲ್ಲ, ಆದರೆ ಇದೀಗ ಗುಜರಾತ್ ಟೈಟಾನ್ಸ್ ತನ್ನ ಚೊಚ್ಚಲ ಸೀಸನ್‌ನಲ್ಲಿ ಚಾಂಪಿಯನ್ ಆಗಿರುವುದರಿಂದ ಈ ಪ್ರಶ್ನೆಗೆ ಎಲ್ಲರಿಗೂ ಉತ್ತರ ಸಿಕ್ಕಿದೆ.

 

View this post on Instagram

 

A post shared by Gujarat Titans (@gujarat_titans)

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ 7 ವಿಕೆಟ್‌ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿತು. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ 130 ರನ್ ಗಳಿಸಿತು, ಉತ್ತರವಾಗಿ ಗುಜರಾತ್ ಟೈಟಾನ್ಸ್ ಸುಲಭವಾಗಿ ಗುರಿ ತಲುಪಿತು.

ಇದು ಕೇವಲ ಒಂದು ಪಂದ್ಯದ ವಿಷಯವಲ್ಲ, ಗುಜರಾತ್ ಈ ಸಂಪೂರ್ಣ ಸೀಸನ್ ನಲ್ಲಿ ತನ್ನ ಪ್ರಬಲ ಆಟವನ್ನು ಪ್ರದರ್ಶಿಸಿದೆ. ಗುಜರಾತ್ ಟೈಟಾನ್ಸ್ ತನ್ನ ಚೊಚ್ಚಲ ಸೀಸನ್ ನಲ್ಲಿ ಚಾಂಪಿಯನ್ ಆಗಲು ಸಹಾಯ ಮಾಡಿದ ಐದು ಪ್ರಮುಖ ಅಂಶಗಳನ್ನು ನೋಡೋಣ.

 

View this post on Instagram

 

A post shared by Gujarat Titans (@gujarat_titans)

ನಾಯಕ ಹಾರ್ದಿಕ್ ಪಾಂಡ್ಯ ಅಪ್ರತಿಮ ಪರಾಕ್ರಮ: 2021 ರ ಟಿ20 ವಿಶ್ವಕಪ್ ಬಳಿಕ ವಾಪಸಾಗುತ್ತಿರುವ ಹಾರ್ದಿಕ್ ಪಾಂಡ್ಯ ನಾಯಕನೆಂದು ಆಯ್ಕೆ ಮಾಡಿದ ನಂತರ ಇದರ ಕುರಿತು ಹಲವು ಪ್ರಶ್ನೆಗಳು ಉದ್ಭವಿಸಿದ್ದವು. ಆದರೆ ಹಾರ್ದಿಕ್ ಪಾಂಡ್ಯ ತಮ್ಮ ಉತ್ತಮ ಪ್ರದರ್ಶನದಿಂದ ಎಲ್ಲರ ಮನ ತಣಿಸಿದರು. ನಾಯಕನಾಗಿ, ಹಾರ್ದಿಕ್ ಪಾಂಡ್ಯ ಸೀಸನ್ ಉದ್ದಕ್ಕೂ ಸಾಕಷ್ಟು ಸ್ಥಿರವಾಗಿ ಕಾಣುತ್ತಿದ್ದರು, ಅವರು ಕೆಲವೇ ತಪ್ಪುಗಳನ್ನು ಮಾಡಿದರು. ಅಲ್ಲದೆ, ಅವರು ಬ್ಯಾಟ್ಸ್‌ಮನ್-ಬೌಲರ್ ಆಗಿ ತಮ್ಮ ಪ್ರದರ್ಶನದೊಂದಿಗೆ ತಂಡವನ್ನು ಮುನ್ನಡೆಸಿದರು. ಟೂರ್ನಿಯಲ್ಲಿ ಕೆಲವು ಸೋಲುಗಳ ನಂತರವೂ ಹಾರ್ದಿಕ್ ಮುಗುಳ್ನಗುತ್ತಲೇ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ನಾಯಕನಾಗಿ ಸೋಲನ್ನು ಎದುರಿಸಲು ಸಿದ್ಧ ಎಂದು ಸೂಚಿಸಿದರು.

ಆಲ್‌ರೌಂಡರ್ ರಶೀದ್ ಖಾನ್ ಸ್ಪಿನ್ ಬೌಲಿಂಗ್: ರಶೀದ್ ಖಾನ್‌ಗಿಂತ ಉತ್ತಮ ಟಿ20 ಆಟಗಾರ ಜಗತ್ತಿನಲ್ಲಿ ಸದ್ಯಕ್ಕೆ ಇಲ್ಲ. ರಶೀದ್ ಖಾನ್ ಅವರನ್ನು ಗುಜರಾತ್ ಟೈಟಾನ್ಸ್ ಉಪನಾಯಕನನ್ನಾಗಿ ಮಾಡಲಾಯಿತು, ಹೈದರಾಬಾದ್‌ನೊಂದಿಗೆ ಸುದೀರ್ಘ ಅವಧಿಯ ನಂತರ ಅವರು ಗುಜರಾತ್‌ಗೆ ಸೇರಿಕೊಂಡರು ಮತ್ತು ಪ್ರಾಬಲ್ಯ ಸಾಧಿಸಿದರು. ರಶೀದ್ ಈ ಇಡೀ ಸೀಸನ್ ನಲ್ಲಿ 19 ವಿಕೆಟ್ಗಳನ್ನು ಪಡೆದಿದ್ದಾರೆ, ಅದರಲ್ಲೂ ವಿಶೇಷವಾಗಿ ಅವರ ಎಕಾನಮಿ ದರವು 7 ಕ್ಕಿಂತ ಕಡಿಮೆಯಿತ್ತು. ಐಪಿಎಲ್‌ನಂತಹ ಲೀಗ್‌ನಲ್ಲಿ, ಅಂತಹ ಎಕಾನಮಿ ದರವು ಸೀಸನ್ ಉದ್ದಕ್ಕೂ ಉತ್ತಮವಾಗಿರುತ್ತದೆ. ಆದರೆ ಎರಡ್ಮೂರು ಪಂದ್ಯಗಳಲ್ಲಿ ಬ್ಯಾಟ್ ಬೀಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದ ಆಲ್ ರೌಂಡರ್ ರಶೀದ್ ಗುಜರಾತ್ ಗೆ ಪ್ಲಸ್ ಪಾಯಿಂಟ್. ‘ನನ್ನನ್ನು ಆಲ್ ರೌಂಡರ್ ಎಂದು ಕರೆಯಲು ಇಷ್ಟಪಡುತ್ತೇನೆ’ ಎಂದು ಸ್ವತಃ ರಶೀದ್ ಖಾನ್ ಹೇಳಿದ್ದಾರೆ.

ನೆಹ್ರಾ ಪ್ಲಾನಿಂಗ್: ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಅವರ ಅನುಭವವನ್ನು ಗುಜರಾತ್ ಟೈಟಾನ್ಸ್ ಮೆಚ್ಚಿಕೊಂಡಿದೆ. ಶಮಿ 20 ವಿಕೆಟ್ ಕಬಳಿಸಿ ತಂಡದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಬಹು ಮುಖ್ಯವಾಗಿ, ಪ್ರತಿಯೊಂದು ಪಂದ್ಯದಲ್ಲೂ, ಮೊಹಮ್ಮದ್ ಶಮಿ ತನ್ನ ತಂಡಕ್ಕೆ ಯಶಸ್ಸಿನ ಆರಂಭವನ್ನು ನೀಡಿದರು, ಅಲ್ಲದೆ ಕೆಲವು ಪಂದ್ಯಗಳಲ್ಲಿ ಮಾತ್ರ ಅವರು ತುಂಬಾ ದುಬಾರಿಯಾಗಿ ಪ್ರದರ್ಶಿಸಿದರು. ಆದರೆ ನಂತರ ತಂಡದ ಜವಾಬ್ದಾರಿಯನ್ನು ಮತ್ತೊಬ್ಬ ಆಟಗಾರ ವಹಿಸಜೆಕೊಂಡರು. ಲಕ್ಕಿ ಫರ್ಗುಸನ್ ಅವರ ಅಬ್ಬರದ ಬೌಲಿಂಗ್ ಎದುರಾಳಿ ತಂಡವನ್ನು ನಾಶಪಡಿಸಿತು, ಮೊಹಮ್ಮದ್ ಶಮಿ ಅವರ ಹೊರತು ಪಡಿಸಿ ಲಕ್ಕಿ ಫರ್ಗುಸನ್ 12 ವಿಕೆಟ್‌ಗಳನ್ನು ಪಡೆದರು. ಅಲ್ಲದೆ ಇವರು ಈ ಸೀಸನ್ ನ ಎಲ್ಲಕ್ಕೂ ವೇಗದ ಬಾಲ್ ಪ್ರತಿ ಗಂಟೆಗೆ 157.30 ಕಿ.ಮೀ. ನಂತೆ ಎಸೆದು ದಾಖಲೆ ಮಾಡಿದ್ದಾರೆ.