ಹಾಲಿನಲ್ಲಿ ಖರ್ಜೂರವನ್ನು ಕುದಿಸಿ ತಿನ್ನುವುದರಿಂದ ಆಗುವ ಲಾಭಗಳು ಅನೇಕ, ಪುರುಷರಂತೂ ದಿನಂಪ್ರತಿ ಸೇವಿಸಲೇಬೇಕು.
ಆಹಾರದಲ್ಲಿ ಹಾಲು ಮಹತ್ವದ ಪಾತ್ರವನ್ನು ವಹಿಸುತ್ತದೆ. ದಿನಂಪ್ರತಿ ಹಾಲಿನ ಸೇವನೆಯು ವ್ಯಕ್ತಿಗೆ ಬಲಿಷ್ಠನನ್ನಾಗಿ ಮಾಡುವುದರ ಜೊತೆಗೆ ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿಯನ್ನು ಸಹ ಬಲಪಡಿಸುತ್ತದೆ. ಇದರ ಜೊತೆಗೆ ಖರ್ಜೂರವು ಸೇರಿದರೆ ಹಾಲು ಜೇನು ಕೂಡಿದ ಹಾಗೆ ಆಗುತ್ತದೆ. ಇವೆರಡೂ ಕೂಡಿ ದೇಹಕ್ಕೆ ಅನೇಕ ರೀತಿಯ ಲಾಭಗಳನ್ನು ಒದಗಿಸುತ್ತವೆ. ಪೌಷ್ಟಿಕ ಘಟಕಗಳಿಂದ ಪರಿಪೂರ್ಣ ವಾಗಿರುವ ಈ ಎರಡು ಪದಾರ್ಥಗಳು ಒಂದುಗೂಡಿಸಿ ತಿನ್ನುವುದರಿಂದ ದೇಹಕ್ಕೆ ಪೋಷಕ ತತ್ವಗಳ ಅಭಾವ ಎಂದಿಗೂ ಕಂಡುಬರುವುದಿಲ್ಲ. ಖರ್ಜೂರವು ಪ್ರತಿಯೊಬ್ಬರಿಗೂ ಲಾಭದಾಯಕವಾಗಿದ್ದರು ಪುರುಷರಿಗೆ ಮಾತ್ರ ತುಂಬಾ ಆಶ್ಚರ್ಯಕರವಾದ ಬದಲಾವಣೆ ತಂದುಕೊಡುತ್ತದೆ.
ಪುರುಷರಿಗಾಗಿ ಹಾಲು ಮತ್ತು ಖರ್ಜೂರವು ಹೇಗೆ ಲಾಭದಾಯಕವಾಗಿದೆ ಎಂದು ಈ ಅಂಕಣದಲ್ಲಿ ಹೇಳಲಿದ್ದೇವೆ. ಇವೆರಡು ಪದಾರ್ಥಗಳಲ್ಲಿ ಜೀವನ ಸತ್ವಗಳು, ಖನಿಜಾಂಶ, ಫೈಬರ್, ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಈ ಘಟಕಗಳು ಹೆಚ್ಚಿನ ಪ್ರಮಾಣದಲ್ಲಿವೆ. ಖರ್ಜೂರವು ವಿಶೇಷವಾಗಿ ಪುರುಷರಿಗೆ ಹೆಚ್ಚು ಲಾಭದಾಯಕವಾಗಿದೆ. ಇದರ ಸೇವನೆ ಪುರುಷರ ಶಕ್ತಿಯನ್ನು ವೃದ್ಧಿಸುವುದರ ಜೊತೆಗೆ ಆ ಕೆಲಸಕ್ಕೆ ಉತ್ತೇಜನೆಯನ್ನು ಕೊಡುತ್ತದೆ. ಹಾಲಿನಲ್ಲಿ ಖರ್ಜೂರವನ್ನು ಸೇವಿಸುವುದರಿಂದ ಅನೇಕ ರೋಗಗಳು ದೂರವಾಗುತ್ತವೆ. ಇದರ ಸೇವನೆಯನ್ನು ಮಾಡುವುದರಿಂದ ಯಾವ ಯಾವ ಲಾಭಗಳಾಗುತ್ತವೆ ಎಂಬುದನ್ನು ತಿಳಿದುಕೊಳ್ಳಿ.
- ಕೆಮ್ಮು ಮತ್ತು ನೆಗಡಿ ದೂರ:- ಒಂದು ಗ್ಲಾಸ್ ಹಾಲಿನಲ್ಲಿ 5 ಖರ್ಜೂರ ಮತ್ತು 5 ಕರಿಮೆಣಸು ಹಾಗೂ ಒಂದು ಯಾಲಕ್ಕಿ ಸೇರಿಸಿ ಚೆನ್ನಾಗಿ ಕುದಿಸಿದ ಮಿಶ್ರಣದಲ್ಲಿ 1ಚಮಚ ಶುದ್ಧ ತುಪ್ಪನ್ನು ಸೇರಿಸಿ ಕುಡಿಯುವುದರಿಂದ ಕೆಮ್ಮು ಮತ್ತು ನೆಗಡಿ ಆದಷ್ಟು ಬೇಗ ಮಂಗ ಮಾಯವಾಗುವುದು. ಈ ಪೇಯ ಸೈನಸ್ ನಿಂದ ಬಳಲುವವರಿಗೆ ಹಿತಕರವಾಗಿದೆ.
- ಕರ್ಕ ರೋಗವನ್ನು ತಡೆಯಲು:- ಖರ್ಜೂರವನ್ನು ಹಾಕಿ ಕುದಿಸಿದ ಹಾಲಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಶಿಯಂ ಇರುತ್ತದೆ. ಖರ್ಜೂರದಲ್ಲಿ ಕ್ಯಾಲ್ಸಿಯಂ ಮ್ಯಾಂಗನೀಸ್, ಸೆಲೆನಿಯಂ ಇರುತ್ತೆ ಆದ್ದರಿಂದ ಇದನ್ನು ಹಾಲಿನಲ್ಲಿ ಬೆರೆಸಿ ಕುದಿಸಿ ಕುಡಿಯುವುದರಿಂದ ಎಲುಬುಗಳು ಸಶಕ್ತವಾಗುತ್ತವೆ. ಖರ್ಜೂರದಲ್ಲಿರುವ ಫೈಬರ್ ಕೊಲೋನ್ ಹೆಸರಿನ ಅಂಶವು ಕರ್ಕ ರೋಗವನ್ನು ದೂರವಿಡಲು ಸಹಾಯ ಮಾಡುತ್ತದೆ.
- ಹಸಿವು ಹೆಚ್ಚಾಗಲು ಸಹಾಯ:- ಖರ್ಜೂರ ಮತ್ತು ಹಾಲು ಇವೆರಡರ ಮಿಶ್ರಣ ಹಸಿವು ಹೆಚ್ಚಾಗಲು ಸಹಾಯ ಮಾಡುತ್ತದೆ. ಖರ್ಜೂರದಲ್ಲಿ ಫೈಬರ್ ಪ್ರಮಾಣವು ಹೇರಳವಾಗಿದೆ. ಈ ಕಾರಣದಿಂದ ಪಚನಕ್ರಿಯೆ ತುಂಬಾ ಚೆನ್ನಾಗಿ ಆಗುತ್ತದೆ. ಇದಕ್ಕಾಗಿ ಎರಡು ಗ್ಲಾಸ್ ಹಾಲಿನಲ್ಲಿ ಐದಾರು ಖರ್ಜೂರಗಳನ್ನು ಹಾಕಿ ನಿಧಾನವಾದ ಶಾಖದ ಮೇಲೆ ಕುದಿಸಿ. ಹಾಲು ಗಟ್ಟಿಯಾದ ಮೇಲೆ ಕುದಿಸಿದ ನಂತರ ತಣ್ಣಗಾದ ಆ ದ್ರವ ಪದಾರ್ಥವನ್ನು ಮಿಕ್ಸಿಯಲ್ಲಿ ಹಾಕಿ ತಿರುಗಿಸಿ ಆಮೇಲೆ ಸೇವಿಸಿ. ಈ ಪೇಯ ವ್ಯಕ್ತಿಗೆ ಹಸಿವಾಗಲು ಸಹಾಯ ಮಾಡುತ್ತದೆ.
4 .ಮಲಬದ್ಧತೆಯ ಸಮಸ್ಯೆಯಿಂದ ಮುಕ್ತಿ:- ಖರ್ಜೂರದ ಸೇವನೆಯಿಂದ ಮಲಬದ್ಧತೆಯ ಸಮಸ್ಯೆಯು ತನ್ನಂತಾನೆ ದೂರವಾಗುವುದು. ಇದರಲ್ಲಿ ಪೊಟ್ಯಾಶಿಯಂ ಪ್ರಮಾಣವು ಹೆಚ್ಚಾಗಿರುವುದರಿಂದ ಹಾಲಿನಲ್ಲಿ ಬೆರೆಸಿ ಕುಡಿಯಲು ಉಪಯುಕ್ತವಾಗಿದೆ. ಇದರಲ್ಲಿ ಡಾಯಟರಿ ಫೈಬರ್ ಇರುವುದರಿಂದ ಪಚನ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ವ್ಯಕ್ತಿಗೆ ಮಲಬದ್ಧತೆಯ ಸಮಸ್ಯೆ ಇದ್ದರೆ ದಿನಂಪ್ರತಿ ಖರ್ಜೂರದ ಸೇವನೆ ತುಂಬಾ ಲಾಭದಾಯಕವಾಗಿದೆ.
5.ಶುಕ್ರಾಣುನ ಸಂಖ್ಯೆಯಲ್ಲಿ ಹೆಚ್ಚಳ:– ಖರ್ಜೂರ ಮಿಶ್ರಿತ ಹಾಲು ತುಂಬಾ ನಿರೋಗಿಯಾಗಿದೆ. ಪುರುಷರು ಈ ಮಿಶ್ರಣದ ಸೇವನೆಯನ್ನು ಚಳಿಗಾಲದಲ್ಲಿ ಮಾಡಬೇಕು. ಇದರಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿರುವುದರಿಂದ ಪುರುಷರಲ್ಲಿ ಶುಕ್ರಾಣುವಿನ ಸಂಖ್ಯೆಯನ್ನು ಹೆಚ್ಚು ಮಾಡಲು ಸಹಾಯವಾಗುತ್ತದೆ. ಈ ಎರಡು ಪದಾರ್ಥಗಳ ಮಿಶ್ರಣದ ಹಾಲು ಪುರುಷರಿಗೆ ಬಂಜೆತನದಿಂದ ದೂರಮಾಡುತ್ತದೆ.