ಹಾವಿನ ಉ ಗ್ರ ಕೋಪದಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡ ಪುಟ್ಟ ಹುಡುಗಿ: ಭಯ ಹುಟ್ಟಿಸು ಸನ್ನಿವೇಶ ನೋಡಿ ಬೆಚ್ಚಿದ ನೆಟ್ಟಿಗರು

ಹಾವುಗಳನ್ನು ನೋಡುವುದು ಎಂದರೇನೇ ಭಯದಿಂದ ಮೈಯಲ್ಲೊಂದು ನಡುಕ ಉಂಟಾಗುತ್ತದೆ ಅನೇಕರಿಗೆ. ಹಾವಿನ ಹೆಸರನ್ನು ಕೇಳಿದರೆ ಮಾರು ದೂರ ಓಡುವುದು ಕೂಡಾ ಸಹಜ. ಹಾವಿನ ವಿಷ ಎನ್ನುವುದು ಸಹಜವಾಗಿಯೇ ನಮ್ಮಲ್ಲಿ ಒಂದು ಅವ್ಯಕ್ತ ಭಯವನ್ನು ಉಂಟು ಮಾಡಿರುವುದು ಕೂಡಾ ನಿಜ. ಆದ್ದರಿಂದಲೇ ಹಾವುಗಳನ್ನು ನೋಡಿದಾಗ ಜನರಲ್ಲಿ ಒಂದು ಆ ತಂ ಕ ಉಂಟಾಗುತ್ತದೆ. ಆದರೆ ಎಲ್ಲೋ ಕೆಲವರಿಗೆ ಹಾವುಗಳೆಂದರೆ ಭಯ ಇಲ್ಲದೇ ಇರಬಹುದು ಎನ್ನಬಹುದು. ಆದರೂ ಹಾವುಗಳ ವಿಷಯ ಬಂದಾಗ ಆಸಕ್ತಿ ಕೂಡಾ ಇರುತ್ತದೆ. ಇನ್ನು ಹಾವುಗಳನ್ನು ಸಿನಿಮಾ ಅಥವಾ ವೀಡಿಯೋಗಳಲ್ಲಿ ನೋಡಿದಾಗಲೂ ಕೆಲವೊಮ್ಮೆ ಭಯ ಹುಟ್ಟಿಸುವ ಹಾಗಿರುತ್ತವೆ. ಅಲ್ಲದೇ ಸೋಶಿಯಲ್ ಮೀಡಿಯಾಗಳಲ್ಲಿ ಕೂಡಾ ಹಾವುಗಳ ವೀಡಿಯೋಗಳು ಆಗಾಗ ವೈರಲ್ ಆಗಿ ಗಮನ ಸೆಳೆಯುತ್ತವೆ.

ಸಾಮಾನ್ಯವಾಗಿ ಹಾವು ಹರಿದಾಡುವುದನ್ನು, ಕಚ್ಚುವುದನ್ನು ಎಲ್ಲವನ್ನೂ ನಾವು ನೋಡಿಯೇ ಇರುತ್ತೇವೆ. ಆದರೆ ಇಲ್ಲೊಂದು ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಈ ವೀಡಿಯೋದಲ್ಲಿನ ಸನ್ನಿವೇಶವನ್ನು ನೋಡಿದಾಗ ಒಂದು ಸಲ ಮೈಯಲ್ಲೊಂದು ಕಂಪನ ಖಂಡಿತ ಹುಟ್ಟುತ್ತೆ ಇದಕ್ಕೆ ಕಾರಣ ಕೋಪಗೊಂಡ ಹಾವನ್ನು ಈ ವೀಡಿಯೋದಲ್ಲಿ ನಾವು ನೋಡಬಹುದಾಗಿದೆ. ಈ ವೀಡಿಯೋ ನೋಡುವಾಗ ಆರಂಭದಲ್ಲಿ ನಮಗೆ ಅಲ್ಲೊಂದು ಹಾವು ಇರುವ ವಿಷಯ ಕೂಡಾ ತಿಳಿಯುವುದಿಲ್ಲ. ಆದರೆ ಅನಂತರ ದೃಷ್ಟಿಸಿ ನೋಡಿದಾಗ ಎದುರಾಗುವ ಸನ್ನಿವೇಶ ಓ ಗಾಡ್ ಇದೇನಿದು ಎಂದು ಬೆ ಚ್ಚಿ ಬೀಳಿಸುತ್ತದೆ.

ವೀಡಿಯೋದಲ್ಲಿ ಒಂದು ಮಾ ರ ಣಾಂತಿಕ ಹಾವು ಚಿಕ್ಕ ಹುಡುಗಿಯ ಮೇಲೆ ಹಾರಿ ಕಚ್ಚಲು ಪ್ರಯತ್ನ ಮಾಡುವ ಹೃದಯ ಸ್ತಂ ಭ ನ ಉಂಟು ಮಾಡುವಂತಹ ದೃಶ್ಯ ರೆಕಾರ್ಡ್ ಆಗಿದೆ. ದಕ್ಷಿಣ ಥೈಲ್ಯಾಂಡ್ ನ ಫಾಂಗ್-ನ್ಗಾ ಪ್ರಾಂತ್ಯದಲ್ಲಿ ಐದು ವರ್ಷದ ಬಾಲಕಿ ಟಿಯಾನಾ ತನ್ನ ಸಹೋದರಿಯೊಂದಿಗೆ ಕಾಲ್ನಡಿಗೆ ಹಾದಿಯಲ್ಲಿ ಬಹಳ ಉತ್ಸಾಹದಿಂದ ನಡೆದು ಬರುವಾಗ ಇದ್ದಕ್ಕಿದ್ದಂತೆ ಅನಿರೀಕ್ಷಿತವಾಗಿ ಅಲ್ಲೊಂದು ಹಾವು ಕಂಡಿಂದೆ. ಟಿಯಾನಾಳ ತಾಯಿ ಸ್ವೆಟ್ಲಾನಾ ತನ್ನ ಮಕ್ಕಳು ಆಡುವುದನ್ನು ವೀಡಿಯೋದಲ್ಲಿ ರೆಕಾರ್ಡ್ ಮಾಡುವಾಗ ಈ ನಾಟಕೀಯ ಎನಿಸುವ ಘಟನೆ ರೆಕಾರ್ಡ್ ಆಗಿದೆ‌.

ವೀಡಿಯೋದಲ್ಲಿ ನೋಡಿದಾಗ ತೀವ್ರವಾಗಿ ಕೋಪಗೊಂಡ ಹಾವು ಹೇಗೆ ಪುಟ್ಟ ಹುಡುಗಿಯ ಕಾಲಿಗೆ ಸಿಕ್ಕಿ ಹಾಕಿಕೊಂಡು ಕಚ್ಚುವಂತೆ ಬಾಯಿ ತೆರೆದಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಅದನ್ನು ನೋಡಿದ ಕೂಡಲೇ ಟಿಯಾನಾ ತಾಯಿ ಭಯದಿಂದ ಕ್ಯಾಮೆರಾ ಅಲ್ಲೇ ಬಿಟ್ಟು ಮಗಳ ಕಡೆಗೆ ಓಡಿದ್ದಾರೆ. ಮಗಳನ್ನು ಮೇಲೆತ್ತಿಕೊಂಡು ಕಾಪಾಡಿದ್ದು, ಹಾವು ಅಲ್ಲೇ ಗಿಡಗಳ ಮೂಲಕ ದೂರ ಹರಿದು ಹೋಗಿದೆ. ಈ ವೀಡಿಯೋವನ್ನು ಇದುವರೆವಿಗೂ 9 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಣೆಯನ್ನು ಮಾಡಿದ್ದರೆ ಐದು ಸಾವಿರಕ್ಕಿಂತ ಅಧಿಕ ಮಂದಿ ಲೈಕ್ ಗಳನ್ನು ನೀಡಿ ಮೆಚ್ಚಿದ್ದಾರೆ.

ವೀಡಿಯೋ ನೋಡಿದವರಲ್ಲಿ ಅನೇಕರು ಈ ಸನ್ನಿವೇಶ ಭ ಯ ವನ್ನು ಹುಟ್ಟಿಸುವ ಹಾಗಿದೆ ಎಂದಿದ್ದೂ ಆ ಮಗು ನಿಜಕ್ಕೂ ಅದೃಷ್ಟ ವಂತೆ ಹಾವಿನಿಂದ ದೂರ ಓಡಿದ್ದಾಳೆ ಎಂದಿದ್ದಾರೆ.ದೇವರು ಮಾನವನನ್ನು ಕಾಪಾಡುತ್ತಾನೆ ಎನ್ನುವುದಕ್ಕೆ ಇದೊಂದು ಉದಾಹರಣೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಕೆಲವರು ಹುಡುಗಿ ಬರುವ ವೇಳೆಯಲ್ಲೇ ಹಾವು ಒಂದು ಬದಿಯಿಂದ ಇನ್ನೊಂದು ಬದಿಗೆ ಹೋಗುತ್ತಿತ್ತು. ಆಗ ಬಾಲಕಿ ಅದನ್ನು ತುಳಿದ ಕಾರಣ ಅದಕ್ಕೆ ಕೋಪ ಬಂದಿದೆ. ಆದರೆ ಏನೇ ಆಗಲೀ ಆ ಮಗುವಿನ ಅದೃಷ್ಟ ತುಂಬಾ ಚೆನ್ನಾಗಿದೆ ಎಂದು ಹೇಳಿದ್ದಾರೆ.