ಹಾವು ನೋಡಿದಾಗ ಮನುಷ್ಯ ಬೆಚ್ಚಿ ಬೀಳುವುದು ಸಹಜ; ಆದರೀ ವಿಡಿಯೋದಲ್ಲಿ ಮಂಗನ ರಿಯಾಕ್ಷನ್ ನೋಡಿ ಬಿದ್ದು ಬಿದ್ದು ನಗುವಿರಿ…

ನಿಸರ್ಗ ಒಂದೊಂದು ಪ್ರಾಣಿಗಳಲ್ಲಿ ಒಂದು ರೀತಿಯ ಶಕ್ತಿಯನ್ನು ದಯಪಾಲಿಸಿದೆ. ಎಷ್ಟೇ ಶಕ್ತಿಯುತ ಪ್ರಾಣಿಯಾದರೂ ಅದಕ್ಕೆ ಮಣಿಸುವ ಬೇರೊಂದು ಪ್ರಾಣಿ ಇದ್ದೇ ಇದೆ. ಹಾವು ಎಂದು ಬರೀ ಹೆಸರು ಕೇಳಿದರೆ ಸಾಕು ಎಷ್ಟೋ ಜನರು ಬೆಚ್ಚಿ ಬೀಳುವದರ ಜೊತೆಗೆ ಅವರ ಮೈಯೆಲ್ಲಾ ಬೆವರುತ್ತದೆ. ಇದು ಮನುಷ್ಯನ ಸ್ಥಿತಿ, ಆದರೆ ಕೆಲವು ಪ್ರಾಣಿಗಳೂ ಸಹ ಹಾವಿಗೆ ತುಂಬಾ ಹೆದರುತ್ತವೆ. ಅದರಲ್ಲೂ ಮಂಗಣ್ಣನ ಮಾತೇ ಬೇರೆ.

ಈ ಪ್ರಾಂಕ್ ವಿಡಿಯೋದಲ್ಲಿ ಮಂಗ ಹಾವಿಗೆ ನೋಡಿ ಬೆಚ್ಚಿ ಬಿದ್ದ ರೀತಿ ತುಂಬಾ ಅದ್ಭುತವಾಗಿದೆ. ಕಾರಣ ಎಲ್ಲರಿಗೂ ತಮ್ಮ ಪ್ರಾಣ ಎಂದರೆ ಎಷ್ಟೊಂದು ಕಾಳಜಿ ನೋಡಿ. ಮರಗಿಡಗಳ ಮೇಲೆ ಯಾವುದೇ ಭಯವಿಲ್ಲದೆ ಜಿಗಿದಾಡುವ ಮತ್ತು ಇನ್ನಿತರ ಸಾಧು ಪ್ರಾಣಿಗಳಿಗೆ ಕಾಡಿ ಕಾಡಿ ಗೋಳು ಹೊಯ್ದುಕೊಳ್ಳುವ ಈ ಮಂಗ ತನ್ನ ಜೀವಕ್ಕೆ ಕುತ್ತು ಬಂದಾಗ ಯಾವ ರೀತಿ ಬೆಚ್ಚಿ ಬಿದ್ದು ರಿಯಾಕ್ಷನ್ ನೀಡಿದೆ ನೋಡಿ ಈ ತಮಾಷೆಯ ವಿಡಿಯೋದಲ್ಲಿ…

ವಿಡಿಯೋದಲ್ಲಿ ಕಂಡು ಬರುವ ಹಾಗೆ ಒಂದು ಬಾಳೆಹಣ್ಣಿಗೆ ದಾರವನ್ನು ಕಟ್ಟಿ ರಸ್ತೆಯ ಮೇಲೆ ಇಟ್ಟಿದ್ದಾರೆ. ದಾರದ ಇನ್ನೊಂದು ಬದಿಯನ್ನು ರಬರ್ ನ ಕೋಬ್ರಾ ಹಾವಿನ ಕೊರಳಿಗೆ ಕಟ್ಟಿ ಅದರ ಮೇಲೆ ಬಟ್ಟೆಯನ್ನು ಕವರ್ ಮಾಡಿದ್ದಾರೆ. ಮಂಗ ಬಾಳೆಹಣ್ಣಿಗೆ ಆಸೆಪಟ್ಟು ಅದನ್ನು ಜಗ್ಗಿ ತೆಗೆದುಕೊಳ್ಳುವಾಗ ಕೋಬ್ರಾ ಹಾವಿನ ಮೇಲೆ ಕವರ್ ಮಾಡಿದ ಬಟ್ಟೆ ಸರಿದಿದೆ. ಆಗ ಮಂಗನ ಕಣ್ಣಿಗೆ ಹಠಾತ್ತನೆ ಬಿದ್ದ ಕೋಬ್ರಾ ಹಾವು ಮಂಗನ ದಿಕ್ಕು ತಪ್ಪಿಸಿದೆ. ಅದು ಬೆಚ್ಚಿ ಬಿದ್ದ ರೀತಿ ನೋಡಿದರೆ ಮಂಗಕ್ಕೆ ಕೋಬ್ರಾ ಹಾವು ಕಚ್ಚಿದರೆ ಮುಂದಾಗುವ ಗಂಡಾಂತರದ ಬಗ್ಗೆ ಸಂಪೂರ್ಣ ಜ್ಞಾನವಿದೆ ಎಂಬುದು ತಿಳಿದು ಬರುತ್ತದೆ. ಯಾಕೆಂದರೆ ಪ್ರಾಣಿಗಳು ತಮ್ಮ ಪ್ರಾಣ ರಕ್ಷಣೆಗಾಗಿ ಎಷ್ಟೊಂದು ಜಾಗೃತೆ ವಹಿಸುತ್ತವೆ ಎಂಬುದು ಈ ವಿಡಿಯೋದಿಂದ ಗೊತ್ತಾಗುತ್ತದೆ..

ವಿಡಿಯೋ ನೋಡಿ

ವಿಡಿಯೋವನ್ನು “ವೈಲ್ಡ್ ಎಕ್ಸಪ್ಲೋರರ್ ಅನಿಮಲ್” ಹೆಸರಿನ ಅಕೌಂಟ್ ನಿಂದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ.