ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಮಹಾಸಾಗರ ಕೂಡಿದರೂ ಒಟ್ಟಿಗೆ ಸೇರದ ಹಿಂದಿನ ರಹಸ್ಯವೇನು?

ಭೂಮಿಯ ಮೇಲೆ 70 ಪ್ರತಿಶತ ನೀರಿರುವ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇದರಲ್ಲಿ ಸಮುದ್ರ, ನದಿಗಳು, ಹಿಮ ಶಿಖರಗಳೆಲ್ಲವೂ ಇದರಲ್ಲಿ ಬರುತ್ತವೆ. ಜಗತ್ತಿನಲ್ಲಿ ಒಟ್ಟು ಐದು ಮಹಾಸಾಗರಗಳಿದ್ದು, ಅವುಗಳಿಗೆ ಸೀಮೆಯೇ ಇಲ್ಲ. ಮಹಾಸಾಗರಗಳ ಆರಂಭ ಮತ್ತು ಅಂತಗಳನ್ನು ಕಂಡು ಹಿಡಿಯುವದು ಅಸಾಧ್ಯ. ಇವುಗಳ ಆಳದಲ್ಲಿ ಗೊತ್ತಿಲ್ಲದ ಅದೆಷ್ಟೋ ರಹಸ್ಯಗಳು ಅಡಗಿವೆ. ಈ ಮಹಾಸಾಗರಳಿಗೆ ಸಂಬಂಧಪಟ್ಟ ಒಂದು ರಹಸ್ಯಮಯವಾದ ವಿಷಯವನ್ನು ಹೇಳುವವರಿದ್ದೇವೆ. ಅದನ್ನು ಕೇಳಿ ನಿಜಕ್ಕೂ ನಿಮಗೆ ಆಶ್ಚರ್ಯವಾಗಬಹುದು.

ಹಿಂದೂ ಮಹಾಸಾಗರ ಮತ್ತು ಪ್ರಶಾಂತ್ ಮಹಾಸಾಗರ ಇವೆರಡು ಅಲಾಸ್ಕಾದ ಕೊಲ್ಲಿಯಲ್ಲಿ ಕೂಡುವವು. ಆದರೆ ಈ ಮಹಾಸಾಗಾರಗಳು ಒಂದನ್ನೊಂದು ಕೂಡಿಕೊಂಡರೂ ಸಹಿತ ಇವುಗಳ ಸಂಗಮವಾಗಿಲ್ಲವೆಂದೇ ಹೇಳಲಾಗುತ್ತದೆ.

ಹಿಂದೂ ಮಹಾಸಾಗರ ಹಾಗೂ ಪ್ರಶಾಂತ್ ಮಹಾಸಾಗರಗಳು ಎಂದಿಗೂ ಕೂಡಿಕೊಂಡಿಲ್ಲ, ಕಾರಣ ಈ ಎರಡು ಮಹಾಸಾಗರಗಳ ನೀರು ಬೇರೆ ಬೇರೆಯಾಗಿದೆ.

ಫೋಟೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ, ಈ ಎರಡು ಮಹಾಸಾಗರಗಳ ನೀರು ಬೇರೆ ಬೇರೆ ಇದ್ದದ್ದು. ಒಂದು ನೀಲಿ ಬಣ್ಣದ್ದು ಮತ್ತು ಇನ್ನೊಂದು ತಿಳಿ ಹಸಿರು ಬಣ್ಣದ್ದು ಕಂಡು ಬರುತ್ತದೆ. ಹೀಗಾಗಿ ಕೆಲವರು ಇದಕ್ಕೆ ಆಧ್ಯಾತ್ಮಿಕ ಸ್ವರೂಪವನ್ನು ಕೊಡುತ್ತಾರೆ, ಕೆಲವರು ಇದು ಪರಮಾತ್ಮನ ಚಮತ್ಕಾರವೆಂದೂ ತಿಳಿಯುತ್ತಾರೆ.

ಯಾಕೆ ಈ ಮಹಾಸಾಗರಗಳು ಒಂದನ್ನೊಂದು ಕೂಡುವದಿಲ್ಲ?

ಇದರ ಕಾರಣ ವೈಜ್ಞಾನಿಕರು ಹೇಳುವ ಹಾಗೆ ಒಂದು ಸಮುದ್ರದ ನೀರು ಉಪ್ಪು ಮತ್ತು ಇನ್ನೊಂದು ಸಮುದ್ರದ ನೀರು ಸಿಹಿಯಾಗಿರುವದಾಗಿದೆ ಎಂದಿದ್ದಾರೆ. ಇನ್ನೊಂದು ಕಾರಣವೇನೆಂದರೆ, ಮಹಾಸಾಗರಗಳ ತಾಪಮಾನ ಹಾಗೂ ಲವಣತೆ ಇವೆರಡು ಭಿನ್ನ ಭಿನ್ನವಾಗಿರುವದು ಸಹಿತ ಆಗಿದೆ. ಎಲ್ಲಿ ಈ ಎರಡು ಮಹಾಸಾಗರಗಳು ಕೊಡುತ್ತವೆಯೋ ಅಲ್ಲಿ ನೊರೆಯ ಒಂದು ಗೋಡೆ ನಿರ್ಮಾಣವಾಗುವದು. ಪರಿಣಾಮದಿಂದಾಗಿ ಎರಡು ಸಾಗರಗಳು ಕೂಡುತ್ತವೆ, ಆದರೆ ಬೇರೆ ಬೇರೆ ಘನತ್ವದ ಕಾರಣದಿಂದಾಗಿ ಒಂದರಲ್ಲಿ ಒಂದು ಮಿಶ್ರಣವಾಗುವದಿಲ್ಲ.

ಇನ್ನೊಂದು ಕಾರಣ ಹೀಗೂ ಹೇಳಲಾಗುತ್ತದೆ ಅದೇನೆಂದರೆ, ಸೂರ್ಯನ ಕಿರಣಗಳು ಸಾಗರದ ಮೇಲೆ ಬೀಳುವದರಿಂದ ನೀರಿನ ಬಣ್ಣದಲ್ಲಿ ಬದಲಾವಣೆ ಕಂಡು ಬರುತ್ತದೆ. ಹೀಗಾಗಿ ಈ ಎಲ್ಲ ಮೇಲಿನ ಕಾರಣಗಳಿಂದ ಎರಡು ಮಹಾಸಾಗರಗಳು ಕೊಡಿಕೊಳ್ಳುತ್ತವೆ ಆದರೆ ಮಿಶ್ರವಾಗುವದಿಲ್ಲ.