ಹುಕ್ಕಾದ ಹೊಗೆಯಿಂದ ಬಾಯಲ್ಲಿ ಹೊಗೆಯ ಉಂಗುರ ಸೃಷ್ಟಿಸಲು ಸಿದ್ಧನಾದ ವ್ಯಕ್ತಿ: ಆಗಲೇ ಆಯ್ತು ಕಪಾಳ ಮೋಕ್ಷ. ವೈರಲ್ ಆಯ್ತು ಫನ್ನಿ Video
ಒಂದು ಹಾಸ್ಯಭರಿತ ಸನ್ನಿವೇಶ ಇರುವ ವೀಡಿಯೋ ಒಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಈ ಫನ್ನಿ ವೀಡಿಯೋ ನೀಡಿದರೆ ನೀವು ಕೂಡಾ ನಿಮ್ಮ ನಗುವನ್ನು ತಡೆದುಕೊಳ್ಳುವುದು ಸಾಧ್ಯವೇ ಇಲ್ಲ ಎಂದು ಹೇಳಬಹುದು.ಈಗಾಗಲೇ ನೀವು ಸೋಶಿಯಲ್ ಮೀಡಿಯಾಗಳಲ್ಲಿ ಕೆಲವರು ಹುಕ್ಕಾ ಹೊಗೆಯಿಂದ ವಿವಿಧ ವಿನ್ಯಾಸದ ಉಂಗುರಗಳನ್ನು ಮಾಡಿ ಬಾಯಿಂದ ಹೊರ ಬಿಡುತ್ತಾ ತಮ್ಮ ಕೌಶಲ್ಯವನ್ನು ತೋರಿಸಿರುವ ವೀಡಿಯೋ ಗಳನ್ನು ನೋಡಿಯೇ ಇರುವಿರಿ. ಆ ವೀಡಿಯೋಗಳನ್ನು ನೋಡಿದಾಗ ಎಂತಹ ವಿಸ್ಮಯ, ಹೀಗೆಲ್ಲಾ ಮಾಡಲು ಸಾಧ್ಯವೇ ಎಂದರೆ, ಕೆಲವರು ಇದೆಲ್ಲಾ ಎಡಿಟ್, ಗ್ರಾಫಿಕ್ಸ್ ಎಂದು ಕೂಡಾ ಹೇಳುವುದನ್ನು ನೀವು ಗಮನಿಸಿಯೇ ಇರಬಹುದು ಕೂಡಾ. ಆದರೆ ವಿಷಯ ಏನೇ ಆದರೂ ಕೂಡಾ ಆ ದೃಶ್ಯಗಳನ್ನು ನೋಡಲು ಮಾತ್ರ ಬಹಳ ಸುಂದರವಾಗಿರುತ್ತದೆ ಹಾಗೂ ಜನ ಅದನ್ನು ನೋಡಿ ಆನಂದಿಸುತ್ತಾರೆ ಕೂಡಾ.
ಈಗ ಇಂತಹುದೇ ಒಂದು ವೀಡಿಯೋ ವೈರಲ್ ಆಗಿದ್ದು ಇದರಲ್ಲಿ ಒಂದು ಅಂಗಡಿಯ ಮುಂದೆ ನಿಂತ ವ್ಯಕ್ತಿಯು ತನ್ನ ಬಾಯಿಂದ ಹುಕ್ಕಾ ಹೊಗೆಯಿಂದ ವಿವಿಧ ವಿನ್ಯಾಸದ ಉಂಗುರಗಳನ್ನು ಸೃಷ್ಟಿಸುತ್ತಾ ಗಾಳಿಯಲ್ಲಿ ಅದನ್ನು ಬಿಡುತ್ತಾ ತನ್ನ ಚಮತ್ಕಾರವನ್ನು ತೋರಿಸುವಾಗ ಅಲ್ಲಿ ಮತ್ತೊಬ್ಬ ವ್ಯಕ್ತಿ ನಿಂತುಕೊಂಡು ಅದನ್ನು ನೋಡುತ್ತಿರುವುದನ್ನು ನಾವು ಗಮನಿಸಬಹುದು. ಅದೇ ಸಮಯದಲ್ಲಿ ಅನಿರೀಕ್ಷಿತ ಎನ್ನುವಂತೆ ಆ ವ್ಯಕ್ತಿಯ ಕೆನ್ನೆಗೊಂದು ಚಟಾರ್ ಎಂದು ಹೊಡೆತ ಬೀಳುತ್ತದೆ. ಇಂತಹ ಒಂದು ಫನ್ನಿ ವೀಡಿಯೋ ವನ್ನು ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ಅವರು ಶೇರ್ ಮಾಡಿಕೊಂಡಿದ್ದು ವೀಡಿಯೋ ವೈರಲ್ ಆಗಿದೆ.
ವೀಡಿಯೋದಲ್ಲಿ ನಾವು ನೋಡಿದಾಗ ವ್ಯಕ್ತಿಯೊಬ್ಬನು ಒಂದು ಹುಕ್ಕಾ ಪಾರ್ಲರ್ ನಲ್ಲಿ ಬಾಯಿ ತುಂಬಾ ಹೊಗೆಯನ್ನು ತುಂಬಿ ಕೊಂಡು, ಅದರಿಂದ ಸುರುಳಿಯಂತಹ ಉಂಗುರಗಳನ್ನು ಸೃಷ್ಡಿಸಿ ಹೊರಗೆ ಬಿಡುವ ಪ್ರಯತ್ನವನ್ನು ಮಾಡುತ್ತಾ ಇರುವುದನ್ನು ನಾವು ಗಮನಿಸಬಹುದು. ಹೀಗೆ ಆತ ಹೊಗೆ ಬಿಡುವುದನ್ನು ಅಲ್ಲೇ ನಿಂತಿದ್ದ ವ್ಯಕ್ತಿಯೊಬ್ಬನು ಬಹಳ ಆಸಕ್ತಿಯಿಂದ ಗಮನಿಸಲು ಆರಂಭಿಸುತ್ತಾನೆ. ಇನ್ನು ಹುಕ್ಕಾ ಹೊಗೆಯನ್ನು ಬಾಯಿಂದ ಹೊರಗೆ ಬಿಡುವವನು ಉಂಗುರಗಳ ಆಕೃತಿಯ ಸುರುಳಿಗಳನ್ನು ಹೊರ ಬಿಡುವನೆಂದು ತದೇಕ ಚಿತ್ತದಿಂದ ನೋಡುತ್ತಾ ಇರುತ್ತಾನೆ. ಹಾಗೆ ನೋಡುತ್ತಿದ್ದ ವ್ಯಕ್ತಿ ಅನಿರೀಕ್ಷಿತ, ಅನೂಹ್ಯ ಎನ್ನುವಂತೆ ಹುಕ್ಕಾ ಹೊಗೆ ಬಿಡುವ ವ್ಯಕ್ತಿಯ ಕಪಾಳಕ್ಕೆ ಹೊಡೆದು ಅಲ್ಲಿಂದ ಓಡಿ ಹೋಗುತ್ತಾನೆ.
ಹೀಗೆ ಅನಿರೀಕ್ಷಿತವಾಗಿ ಕಪಾಳ ಮೋ ಕ್ಷ ಮಾಡಿಸಿಕೊಂಡ ವ್ಯಕ್ತಿ ಕೋ ಪ ದಿಂದ ಅವನತ್ತು ತನ್ನ ಕೈಗೆ ಸಿಕ್ಕಿದ ವಸ್ತುಗಳನ್ನು ಎಸೆಯಲು ಆರಂಭಿಸಿ ಬಿಡುತ್ತಾನೆ. ಈ ಫನ್ನಿ ವೀಡಿಯೋವನ್ನು ರುಪಿನ್ ಶರ್ಮಾ ಅವರು ಫೆಬ್ರವರಿ 25 ರಂದು ಶೇರ್ ಮಾಡಿಕೊಂಡಿದ್ದಾರೆ. ಈವರೆಗೆ ಈ ವೀಡಿಯೋವನ್ನು ಸಾವಿರಾರು ಜನರು ವೀಕ್ಷಣೆಯನ್ನು ಮಾಡಿದ್ದಾರೆ. ಅಲ್ಲದೇ ಅನೇಕರು ಅದನ್ನು ನೋಡಿ ಲೈಕ್ಸ್ ಗಳನ್ನು ನೀಡಿದರೆ, ಇನ್ನೂ ಅನೇಕರು ಈ ವೀಡಿಯೋವನ್ನು ರೀಟ್ವೀಟ್ ಮಾಡಿದ್ದಾರೆ, ಬೇರೆ ಸೋಶಿಯಲ್ ಮೀಡಿಯಾ ಪ್ಲಾಟ್ ಪಾರ್ಮ್ ಗಳಲ್ಲಿ ಈ ಫನ್ನಿ ವೀಡಿಯೋವನ್ನು ಶೇರ್ ಮಾಡಿಕೊಂಡು ಇತರರಿಗೂ ಹಾಸ್ಯದ ದೃಶ್ಯವನ್ನು ನೋಡುವಂತೆ ಮಾಡಿದ್ದಾರೆ.
ವಿಡಿಯೋ ನೋಡಿ
Knowingly by Mistake 🤣🤣 pic.twitter.com/s4dxSduGCp
— Rupin Sharma IPS (@rupin1992) February 25, 2021
ವೀಡಿಯೋ ನೋಡಿದವರು ಅನೇಕರು ಕಾಮೆಂಟ್ ಗಳ ಮೂಲಕ ವಿನೋದದ,ತಮಾಷೆಯ ಪ್ರತಿಕ್ರಿಯೆಗಳನ್ನು ಕೂಡಾ ನೀಡುತ್ತಾ ಸಾಗಿದ್ದಾರೆ. ವೀಡಿಯೋ ನೋಡಿದವರಲ್ಲಿ ಬಹುತೇಕ ಎಲ್ಲರೂ ಕೂಡಾ ಸೋ ಫನ್ನಿ, ವೆರಿ ಫನ್ನಿ ಎಂದರೆ ಕೆಲವರು ಇದು ಎಪಿಕ್ ಮೂಮೆಂಟ್ ಎಂದಿದ್ದಾರೆ. ಒಟ್ಟಾರೆ ಈ ಫನ್ನಿ ವೀಡಿಯೋ ನೋಡುಗನ ಮುಖದಲ್ಲಿ ಒಂದು ನಗುವನ್ನು ಮೂಡಿಸುವುದು ಮಾತ್ರ ಖಚಿತ ಎಂದೇ ಹೇಳಬಹುದು. ಈ ವೀಡಿಯೋ ನಿಜಕ್ಕೂ ಕೂಡಾ ಫನ್ನಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಇಂತಹ ಒಂದು ಸನ್ನಿವೇಶ ಸಾಮಾನ್ಯವಾಗಿ ಪ್ರಾಂಕ್ ವೀಡಿಯೋಗಳಲ್ಲಿ ನೋಡಬಹುದು ಆದರೆ ಅಂತದ್ದು ನಿಜವಾಗಿಯೂ ನಡೆದಾಗ ಅದು ಆಶ್ಚರ್ಯ ಎನಿಸುತ್ತದೆ.