ಹುಡುಗಿಯನ್ನು ನೋಡಿ ಸ್ಟಂಟ್ ಮಾಡಲು ಹೋದ ಯುವಕನ ಗತಿ ಏನಾಯಿತು ನೋಡಿ ಈ ವಿಡಿಯೋದಲ್ಲಿ…

ಸೈಕಲ್ ಮೇಲೆ ಸ್ಟಂಟ್ ಮಾಡಿ ಪ್ರಸಿದ್ಧಿ ಪಡೆಯಲು ಹದಿಹರೆಯದ ಹುಡುಗರಿಗೆ ತುಂಬಾ ಇಷ್ಟವಾಗುತ್ತದೆ. ಅದರಲ್ಲೂ ಹುಡುಗಿ ಕಂಡರೆ ಆಯಿತು ಹುಡುಗರಿಗೆ ಆನೆಯ ಬಲ ಬರುತ್ತದೆ. ಅವರ ಮುಂದೆ ಸ್ಟಂಟ್ ಮಾಡುವಾಗ ಯಾವುದನ್ನೂ ಈ ಹುಡುಗರು ಯೋಚಿಸುವುದಿಲ್ಲ. ಆದರೆ ಒಮ್ಮೊಮ್ಮೆ ಈ ಸ್ಟಂಟ್ ದುಬಾರಿಯಾಗಿ ಪರಿಣಮಿಸುತ್ತದೆ.

ಇಂಥದ್ದೇ ಒಂದು ಫೇಲ್ ಆದ ಸ್ಟಂಟ್ ಈ ವಿಡಿಯೋದಲ್ಲಿ ನೋಡಬಹುದು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಯುವಕನೊಬ್ಬ ಹುಡುಗಿಯ ಮುಂದೆ ಸ್ಟಂಟ್ ಮಾಡಲು ಹೋಗಿ ಸೈಕಲ್ ಸಮೇತ ಆಕೆಯ ಮೇಲೆಯೇ ಹೋಗಿ ಬಿದ್ದಿದ್ದಾನೆ

ವಿಡಿಯೋದಲ್ಲಿ ಕಾಣುವ ಹಾಗೆ ತರುಣನೊಬ್ಬ ಸೈಕಲ್ ಜೊತೆಗೆ ಪಾರ್ಕ್ ನಲ್ಲಿ ಸ್ಟಂಟ್ ಮಾಡುತ್ತಿರುತ್ತಾನೆ. ಅಷ್ಟರಲ್ಲಿ ಆತನ ಮುಂದೆ ಹುಡುಗಿಯೊಬ್ಬಳು ಬಂದು ತನ್ನ ಶೂಸ್ ನ ಬಿಚ್ಚಿದ ಲೇಸನ್ನು ಕಟ್ಟಿಕೊಳ್ಳಲು ಕೆಳಗೆ ಕೂಡುತ್ತಾಳೆ. ಸರಿಯಾಗಿ ಅದೇ ಸಮಯಕ್ಕೆ ಯುವಕನು ಸ್ಟಂಟ್ ಮಾಡಲು ಮುಂದಾಗುತ್ತಾನೆ. ದುರದೃಷ್ಟವಶಾತ್ ಯುವಕನು ಮಾಡುವ ಸ್ಟಂಟ್ ಫೇಲಾಗಿ ಸೈಕಲ್ ಜೊತೆಗೆ ಹುಡುಗಿಯ ಮೇಲೆಯೇ ಬೀಳುತ್ತಾನೆ. ಹೀಗಾಗಿ ಸ್ಟಂಟ್ ಬದಿಗೆ ಉಳಿಯುತ್ತದೆ ಮತ್ತು ಇಬ್ಬರೂ ಅಪಘಾತಕ್ಕೆ ಒಳಗಾಗುತ್ತಾರೆ. ವಿಡಿಯೋ ನೋಡಲಾಗಿ ಇಬ್ಬರಿಗೂ ಚೆನ್ನಾಗಿಯೇ ಪೆಟ್ಟು ತಗುಲಿರಬೇಕು ಎನಿಸುತ್ತದೆ. ಈ ವಿಡಿಯೋವನ್ನು mohd_junaid_ch77 ಹೆಸರಿನ ಅಕೌಂಟ್ ನಿಂದ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಲಾಗಿದೆ.

ವೀಡಿಯೋ ನೋಡಿ.