“ಹುಡುಗಿಯರೇ ರಾಹುಲ್ ಗಾಂಧಿಯಿಂದ ದೂರವಿರಿ, ಏಕೆಂದರೆ ಅವರು…” ವಿವಾದಿತ ಹೇಳಿಕೆ ಕೊಟ್ಟ ಮಾಜಿ ಸಂಸದ
ದಕ್ಷಿಣದ ರಾಜ್ಯಗಳಲ್ಲಿ ಒಂದಾಗಿರುವ, ದೇವರ ನಾಡು ಎಂದು ಕರೆಯಲ್ಪಡುವ ಕೇರಳ ರಾಜ್ಯದಲ್ಲಿ ಚುನಾವಣೆಯ ಕೋ ಲಾ ಹ ಲ ಗೂ ಬಹಳ ಜೋರಾಗಿ ನಡೆಯುತ್ತಿದೆ. ಚುನಾವಣಾ ಪ್ರಚಾರ ಕಾರ್ಯಗಳು ಬಹಳ ಅಬ್ಬರದಿಂದ ಸಾಗುತ್ತಿದೆ. ಈ ವೇಳೆಯಲ್ಲಿ ಇಡುಕ್ಕಿ ಯ ಮಾಜಿ ಸಂಸದ ಜಾಯ್ಸ್ ಜಾರ್ಜ್ ಅವರು ಕಾಂಗ್ರೆಸ್ ನ ಮುಖಂಡ ರಾಹುಲ್ ಗಾಂಧಿ ಅವರ ವಿ ರು ದ್ಧ ನೀಡಿರುವ ಒಂದು ಹೇಳಿಕೆ ಪ್ರಸ್ತುತ ರಾಜಕೀಯ ವಲಯದಲ್ಲಿ ತೀವ್ರವಾದ ಸಂಚಲನವನ್ನು ಹುಟ್ಟು ಹಾಕಿದೆ. ಇನ್ನು ಕೆಲವರಿಗೆ ಇದು ಒಂದು ತಮಾಷೆಯ ವಿಷಯವಾಗಿವ ಕಂಡು ಬಂದಿದೆ. ಜಾಯ್ಸ್ ಜಾರ್ಜ್ ಅವರು ಚುನಾವಣೆ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ರಾಹುಲ್ ಗಾಂಧಿಯವರು ಇನ್ನು ಅವಿವಾಹಿತರಾಗಿರುವುದರಿಂದ ಹೆಣ್ಣುಮಕ್ಕಳು ಅವರಿಂದ ದೂರ ಇರಬೇಕು ಎನ್ನುವ ವಿ ವಾ ದಿ ತ ಹೇಳಿಕೆಯೊಂದನ್ನು ನೀಡಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಮಂತ್ರಿಯಾಗಿರುವ ಹಾಗೂ ಸಿಪಿಎಂನ ಮುಖಂಡ ಎಂ.ಎಂ. ಮಣಿ ಅವರ ಪರವಾಗಿ ಜಾಯ್ಸ್ ಜಾರ್ಜ್ ಅವರು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗೆ ಚುನಾವಣಾ ಪ್ರಚಾರ ಕಾರ್ಯ ನಡೆಸುವಾಗ ರಾಹುಲ್ ಗಾಂಧಿಯವರ ಕುರಿತಾದ ಇಂತಹದೊಂದು ಹೇಳಿಕೆಯನ್ನು ನೀಡಿದ್ದಾರೆ. ಪ್ರಚಾರ ಭಾಷಣವನ್ನು ಮಾಡುವ ಸಮಯದಲ್ಲಿ ಜಾಯ್ ಅವರು, ರಾಹುಲ್ ಗಾಂಧಿ ಅವರಿಗೆ ಇನ್ನೂ ವಿವಾಹವಾಗಿಲ್ಲ, ಅವರು ಅವಿವಾಹಿತ ವ್ಯಕ್ತಿಯಾಗಿದ್ದಾರೆ. ಅವರು ಏನಾದರೂ ಚರ್ಚೆ ನಡೆಸಬೇಕಾದರೆ ಕೇವಲ ಹೆಣ್ಣು ಮಕ್ಕಳ ಕಾಲೇಜಿಗೆ ಮಾತ್ರವೇ ಹೋಗುತ್ತಾರೆ. ಇದರಿಂದ ಅವರು ಸಮಸ್ಯೆಗಳನ್ನು ಹುಟ್ಟು ಹಾಕಬಹುದು ಆದ್ದರಿಂದ ಹೆಣ್ಣು ಮಕ್ಕಳು ರಾಹುಲ್ ಗಾಂಧಿ ಬಗ್ಗೆ ಭಯಪಡಬೇಕಾಗಿದೆ ಎಂದಿದ್ದಾರೆ.
ಭಾಷಣ ಮಾಡುವಾಗ ಜಾಯ್ಸ್ ಜಾರ್ಜ್ ಅವರು ಇಂತಹುದೊಂದು ಹೇಳಿಕೆಯನ್ನು ನೀಡುವಾಗ ರಾಜ್ಯ ಸರ್ಕಾರದ ಇಂಧನ ಸಚಿವರಾಗಿರುವ ಎಂಎಂ ಮಣಿ ಅವರು ಕೂಡಾ ಅದೇ ವೇದಿಕೆಯಲ್ಲಿದ್ದರು ಎನ್ನುವುದು ಕೂಡಾ ಗಮನಿಸಬೇಕಾದ ವಿಷಯವಾಗಿದೆ. ಅಲ್ಲದೇ ಜಾಯ್ಸ್ ಜಾರ್ಜ್ ಅವರು ರಾಹುಲ್ ಗಾಂಧಿ ಆವರ ಬಗ್ಗೆ ಇಂತಹ ಹೇಳಿಕೆಯನ್ನು ನೀಡುವಾಗ, ಅದನ್ನು ಕೇಳುತ್ತಾ ಅವರು ನಗುತ್ತಿದ್ದರು ಎನ್ನಲಾಗಿದೆ. ಇನ್ನು ಜಾಯ್ಸ್ ಜಾರ್ಜ್ ಅವರ ಈ ಹೇಳಿಕೆಯ ಕುರಿತಾಗಿ ಕೇರಳ ಕಾಂಗ್ರೆಸ್ ಬಹಳ ಸಿ ಟ್ಟ ನ್ನು ವ್ಯಕ್ತಪಡಿಸಿದ್ದು, ಚುನಾವಣಾ ಆಯೋಗದಲ್ಲಿ ಅಭ್ಯರ್ಥಿಯ ವಿ ರು ದ್ಧ ದೂರನ್ನು ನೀಡಲು ಚರ್ಚೆಗಳನ್ನು ನಡೆಸಿದೆ ಎನ್ನಲಾಗಿದೆ.

ಜಾಯ್ಸ್ ಜಾರ್ಜ್ ಅವರು 2014 ರಲ್ಲಿ ನಡೆದಂತಹ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವನ್ನು ಸಾಧಿಸಿದ್ದರು. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಇಡುಕ್ಕಿಯ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡೀನ್ ಕುರಿಯೋಸ್ ಅವರು ಜಾಯ್ಸ್ ಜಾರ್ಜ್ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದರು. ಜಾಯ್ಸ್ ಜಾರ್ಜ್ ಅವರು ಪ್ರಚಾರ ಭಾಷಣದಲ್ಲಿ ರಾಹುಲ್ ಗಾಂಧಿಯವರ ವಿ ರು ದ್ಧ ನೀಡಿರುವ ಹೇಳಿಕೆಯನ್ನು ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಕುರಿಯೋಸ್, ಜಾಯ್ಸ್ ಜಾರ್ಜ್ ಅವರ ವಿ ರು ದ್ಧ ತಾವು ದೂರನ್ನು ನೀಡುವುದಾಗಿ ಹೇಳಿದ್ದಾರೆ. ಕೇರಳ ಕಾಂಗ್ರೆಸ್ ಜಾಯ್ಸ್ ಅವರ ಹೇಳಿಕೆ ಮಹಿಳಾ ವಿ ರೋ ಧಿ ಹೇಳಿಕೆ ಎಂದು ತೀವ್ರ ಅ ಸಮಾಧಾನವನ್ನು ಹೊರಹಾಕಿದೆ.
ಇಂತಹ ಹೇಳಿಕೆಗಳಿಂದ ರಾಜ್ಯದಲ್ಲಿ ಸಿಪಿಎಂ ಈ ಬಾರಿ ಕೂಡ ಸೋಲನ್ನು ಅನುಭವಿಸುತ್ತದೆ ಎನ್ನುವುದು ಖಚಿತವಾಗುತ್ತಿದೆ ಎಂದಿದ್ದಾರೆ. ಕಾಂಗ್ರೆಸ್ ನಾಯಕರು ಈ ಹೇಳಿಕೆಯ ವಿಚಾರವಾಗಿ ಸೀತಾರಾಮ್ ಯೆಚೂರಿ ಮತ್ತು ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಅವರನ್ನೂ ತಮ್ಮ ಗುರಿಯಾಗಿಸಿಕೊಂಡಿದ್ದಾರೆ. ಕೇರಳ ವಿಧಾನ ಸಭೆಯು 141 ಸ್ಥಾನಗಳನ್ನು ಹೊಂದಿದ್ದು, ಇದರಲ್ಲಿ 140 ಸ್ಥಾನಗಳು ಚುನಾಯಿತು ಹಾಗೂ ಒಂದು ನಾಮ ನಿರ್ದೇಶನವಾಗಿದೆ. ಈಗ 140 ವಿಧಾನಸಭಾ ಸ್ಥಾನಗಳಿಗೆ ಒಂದು ಹಂತದಲ್ಲಿ ಚುನಾವಣೆ ನಡೆಯಲಿದ್ದು, ರಾಜ್ಯದ ಎಲ್ಲಾ ಸ್ಥಾನಗಳಿಗೂ ಏಪ್ರಿಲ್ 6 ರಂದು ಮತದಾನ ನಡೆಯಲಿದ್ದು, ಮತ ಎಣಿಕೆ ಮೇ 2 ರಂದು ನಡೆಯುವುದು ಎನ್ನಲಾಗಿದೆ.