ಹುಡುಗಿಯ ಜೊತೆಗೆ ಸ್ಟಂಟ್ ಮಾಡುವುದು ಹುಡುಗನ ಬಿತ್ತು ದುಬಾರಿ! ಅಷ್ಟಕ್ಕೂ ಆಗಿದ್ದೇನು ನೋಡಿ ಈ ವಿಡಿಯೋದಲ್ಲಿ…
ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿ ಪಡೆಯುವ ಸಲುವಾಗಿ ಈಗಿನ ಯುವಪೀಳಿಗೆ ಏನೇನು ಮಾಡುತ್ತಾರೆ ಹೇಳಲು ಸಾಧ್ಯವಿಲ್ಲ. ಕೆಲವೊಂದು ಸಲ ಅವರು ತಮಾಷೆಗಾಗಿ ಮಾಡುವ ಆಟಗಳು ತುಂಬಾ ದುಬಾರಿಯಾಗಿ ಪರಿಣಮಿಸುತ್ತದೆ. ಸದ್ಯ ಇದೇ ರೀತಿಯ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಕಂಡುಬರುತ್ತಿದೆ.
ಪ್ರಸ್ತುತ ವಿಡಿಯೋದಲ್ಲಿ ಯುವಕನೊಬ್ಬ ತನ್ನ ಗರ್ಲ್ ಫ್ರೆಂಡ್ ಜೊತೆಗೆ ಭರದಲ್ಲಿ ಬೈಕ್ ನಡೆಸುತ್ತಿರುವಾಗಲೇ ಸ್ಟಂಟ್ ಮಾಡಲು ಪ್ರಯತ್ನಿಸಿದ್ದಾನೆ.
ಸ್ಟಂಟ್ ಆಯ್ತು ಫೇಲ್…
ಸದ್ಯ ಜಗತ್ತಿನ ತುಂಬ ಬರೀ ಸ್ಟಂಟ್ ಗಳನ್ನು ಮಾಡುವ ಟ್ರೆಂಡ್ ಜಾಸ್ತಿಯಾಗುತ್ತಿದೆ. ವಿಶೇಷವಾಗಿ ಈ ಕ್ರೇಜ್ ಜಾಸ್ತಿ ಯುವಕ ಮತ್ತು ಯುವತಿಯರಲ್ಲಿ ಕಂಡುಬರುತ್ತಿದೆ. ಸ್ಟಂಟ್ ಮಾಡುವುದು ಚಿಕ್ಕಮಕ್ಕಳ ಆಟವಲ್ಲ. ಯಾವುದೇ ಸ್ಟಂಟ್ ಮಾಡಬೇಕಾದರೆ ಅದಕ್ಕೆ ತುಂಬಾ ಪ್ರಾಕ್ಟೀಸ್ ಬೇಕಾಗುತ್ತದೆ. ಅಂದಾಗ ಮಾತ್ರ ಅದರಲ್ಲಿ ಪರ್ಫೆಕ್ಷನ್ ಬರುತ್ತದೆ. ಈ ರೀತಿಯ ಆಟಗಳನ್ನು ಆಡುವಾಗ ಸ್ವಲ್ಪ ಏನಾದರೂ ತಪ್ಪಾದರೆ ಅಥವಾ ಬ್ಯಾಲೆನ್ಸ್ ಬಿಗಡಾಯಿಸಿದರೆ ಕಥೆ ಮುಗಿದಂತೆಯೇ ಸರಿ. ಈ ವಿಡಿಯೋದಲ್ಲಿಯೇ ನೋಡಿ ಯುವಕನು ತನ್ನ ಗರ್ಲ್ ಫ್ರೆಂಡ್ ಗೆ ಇಂಪ್ರೆಸ್ ಮಾಡಲು ಸ್ಟಂಟ್ ಮಾಡಿದ್ದಾನೆ. ಆದರೆ ಈ ಸ್ಟಂಟ್ ಆತನ ಜೊತೆಗೆ ಗರ್ಲ್ ಫ್ರೆಂಡ್ ಗೂ ದುಬಾರಿಯಾಗಿ ಪರಿಣಮಿಸಿದೆ. ಇಬ್ಬರು ಈ ಆಟದಲ್ಲಿ ಬೈಕ್ ಮೇಲಿನಿಂದ ಜೋರಾಗಿ ನೆಲಕ್ಕೆ ಅಪ್ಪಳಿಸಿದ್ದಾರೆ.
ವಿಡಿಯೋದಲ್ಲಿ ಕಾಣುವ ಹಾಗೆ ಇಬ್ಬರೂ ರಸ್ತೆಯಲ್ಲಿ ಬೈಕ್ ಮೇಲೆ ಕುಳಿತು ಬರುತ್ತಿದ್ದಾರೆ. ಇದೇ ಸಮಯದಲ್ಲಿ ಹುಡುಗನು ಆಕಸ್ಮಿಕವಾಗಿ ಬೈಕಿನ ವೇಗ ಹೆಚ್ಚು ಮಾಡುತ್ತಾನೆ. ತದನಂತರ ಕೆಲವೇ ಕ್ಷಣಗಳಲ್ಲಿ ಹುಡುಗನು ಮುಂದಿನ ಗಾಲಿಯ ಬ್ರೇಕ್ ಹಿಡಿಯುತ್ತಾನೆ. ಇದರಿಂದಾಗಿ ಬೈಕಿನ ಹಿಂದಿನ ಗಾಲಿಯು ಅನಾಮತ್ತಾಗಿ ಮೇಲೇಳುತ್ತದೆ. ಹವೆಯಲ್ಲಿ ಮೇಲೆದ್ದು ಮತ್ತೆ ನೆಲಕ್ಕೆ ಕುಕ್ಕರಿಸುವ ಬದಲು ವೇಗದ ಪರಿಣಾಮದಿಂದಾಗಿ ಬೈಕ್ ಉಲ್ಟಾ ತಿರುಗಿ ಅವರ ಮೇಲೆಯೇ ಬಿದ್ದಿದೆ.
ನೋಡಿ ಈ ವಿಡಿಯೋ…
ಅವರು ಬಿದ್ದಿರುವ ಸ್ಥಿತಿಯನ್ನು ನೋಡಿದರೆ ಇಬ್ಬರಿಗೂ ಬಹುಶಃ ತುಂಬಾ ಗಾಯವಾಗಿರಬೇಕು ಎನಿಸುತ್ತದೆ. 5 ಸೆಕೆಂಡಿನ ಈ ವಿಡಿಯೋವನ್ನು ಇನ್ಸ್ಟಾಗ್ರಾಂ ನಲ್ಲಿ punjabi_industry__ ಹೆಸರಿನಿಂದ ಶೇರ್ ಮಾಡಲಾಗಿದೆ.