ಹುಲಿಗಳ ಮೇಲೆ ದರ್ಬಾರು ನಡೆಸಿ ಓಡಿಸಿ ಕಳುಹಿಸುತ್ತಿರುವ ಪುಂಡ ಮೊಲ; ನೋಡಲು ಮಸ್ತ್ ಮತ್ತು ಕ್ಯೂಟ್ ವಿಡಿಯೋ…
ಸಾಕು ಪ್ರಾಣಿಗಳೇ ಆಗಲಿ ಇಲ್ಲವೇ ಕಾಡು ಪ್ರಾಣಿಗಳೇ ಆಗಲಿ, ಅವು ಚಿಕ್ಕವುಗಳಿದ್ದಾಗ ತುಂಬಾ ಮುದ್ದು ಮುದ್ದಾಗಿರುತ್ತವೆ. ಅವುಗಳ ಆಟ ನೋಡಲು ನಿಜಕ್ಕೂ ತುಂಬಾ ಅಪ್ಯಾಯಮಾನವೆನಿಸುತ್ತದೆ.
ಸದ್ಯ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಆದ ಟ್ವಿಟರ್ ನಲ್ಲಿ IFS ಆಫೀಸರ್ ಸಾಮ್ರಾಟ್ ಗೌಡ ಅವರು ಇದೇ ರೀತಿಯ ಕ್ಯೂಟ್ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ.
ಈ ವಿಡಿಯೋದಲ್ಲಿ ಒಂದು ಕೈತೋಟ ಕಂಡು ಬರುತ್ತಿದೆ. ಅಲ್ಲಿ ಹುಲಿರಾಯನ ಪುಟ್ಟ ಪುಟ್ಟ ಮರಿಗಳ ಜೊತೆಗೆ ಒಂದು ಸುಂದರವಾದ ಹಾಲು ಬಣ್ಣದ ಮುದ್ದು ಮೊಲ ಇದೆ. ಈ ಮೊಲ ಪುಟ್ಟ ಹುಲಿಗಳ ಮೇಲೆ ಜಿಗಿಜಿಗಿದು ಸತತವಾಗಿ ಅಟ್ಯಾಕ್ ಮಾಡುತ್ತಿದೆ. ಇದರಿಂದ ಹುಲಿಮರಿಗಳು ನಿಜಕ್ಕೂ ಬೇಸತ್ತಿವೆ. ನಂತರ ಇದರ ತಾಪತ್ರಯಕ್ಕೆ ಅಲ್ಲಿಂದ ಒಡಿ ಹೋಗುವುದೇ ಸರಿ ಎಂದು ಕಾಲ್ಕಿತ್ತಿವೆ. ಇಲ್ಲಿ ಮೊಲ ಹುಲಿ ಮರಿಗಳ ಮೇಲೆ ಸಖತ್ ದರ್ಬಾರು ನಡೆಸುತ್ತಿರುವದು ಕಂಡು ಬರುತ್ತಿದೆ.
ವಿಡಿಯೋ ನೋಡಿ
My strategy is to just attack, attack and attack …. pic.twitter.com/wMJRvebpHl
— Dr.Samrat Gowda IFS (@IfsSamrat) July 1, 2022
ಈ ಸುಂದರವಾದ ವಿಡಿಯೋ ನಿಜಕ್ಕೂ ನೋಡಲು ತುಂಬಾ ಮುದ್ದಾಗಿದೆ ಎಂದು ನೆಟ್ಟಿಗರು ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತ ಮಾಡಿದ್ದಾರೆ.