ಹುಷಾರು! ಈ ಮಕ್ಕಳೆಂದರೆ ಮಂಗಗಳಿದ್ದಂತೆ; ಮಕ್ಕಳ ತುಂಟಾಟ ತಾಯಿಗೆ ಬಿತ್ತು ಸಖತ್ ದುಬಾರಿ!

ಮಕ್ಕಳ ಜೊತೆಗೆ ಹೊಂದಿಕೊಳ್ಳುವದೆಂದರೆ ಸಾಮಾನ್ಯ ಮಾತಲ್ಲ. ಮಕ್ಕಳಲ್ಲಿ ಮಂಗನ ಚೇಷ್ಟೆಗಳು ಅವಿತು ಕುಳಿತಿರುತ್ತವೆ. ಅವು ಯಾವಾಗ, ಯಾವ ಸಂದರ್ಭದಲ್ಲಿ ಹೊರಗೆ ಬೀಳುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಮಕ್ಕಳಿಗೆ ತೆಗೆದುಕೊಂಡು ಹೊರಗಡೆ ಸುತ್ತಾಡಲು ಬಿದ್ದಾಗ ಆದಷ್ಟು ಅಲರ್ಟ್ ಆಗಿರುವುದೇ ಜಾಣತನ. ಸದ್ಯ ಇದೇ ರೀತಿಯ ಮಕ್ಕಳ ಒಂದು ಚೇಷ್ಟೆ ತಾಯಿಗೆ ಸಖತ್ ದುಬಾರಿಯಾಗಿ ಪರಿಣಮಿಸಿದೆ.

ಎರಡೂ ಮಕ್ಕಳಿಗೆ ತಾಯಿ ಶಾಲೆಗೆ ಕರೆದುಕೊಂಡು ನಡೆಯುತ್ತಾ ಹೋಗುತ್ತಿದ್ದಾಳೆ. ಇಬ್ಬರೂ ಮಕ್ಕಳು ಹೆಗಲಿಗೆ ಬ್ಯಾಗ್ ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದಾರೆ. ರಸ್ತೆಯ ಮೇಲೆ ಮಳೆಯಿಂದಾಗಿ ಸ್ವಲ್ಪ ನೀರು ನಿಂತಿದೆ. ನೀರು ಕಂಡ ಮೇಲೆ ಮಕ್ಕಳಿಗೆ ಅದೆನಾಗುತ್ತೋ ಗೊತ್ತಿಲ್ಲ? ಅವರ ಬಿಹೇವಿಯರ್ ಸಂಪೂರ್ಣವಾಗಿ ಬದಲಾಗಿ ಬಿಡುತ್ತದೆ. ನೀರೆಂದರೆ ನನಗೆ ಆಗಿಯೇ ಬರುವದಿಲ್ಲ ಎಂಬಂತೆ ಇಲ್ಲಿ ಮಕ್ಕಳಿಬ್ಬರು ತಾಯಿಯ ಒಂದೊಂದು ಕೈ ಹಿಡಿದು ನೀರನ್ನು ದಾಟಲು ಜೋರಾಗಿ ಜಂಪ್ ಮಾಡಿದ್ದಾರೆ. ಹೀಗೆ ಇಬ್ಬರೂ ಒಟ್ಟಿಗೆ ಜಂಪ್ ಮಾಡಲು ತಾಯಿಯ ಬ್ಯಾಲೆನ್ಸ್ ಬಿಗಡಾಯಿಸಿದೆ. ಮತ್ತೇನು ಪಾಪ ತಾಯಿ ಎರಡು ಮೂರು ಲಾಗ ಹಾಕಿ ಮುಂದೆ ಹೋಗಿ ಬೀಳಬೇಕೆ?

ನೋಡಿ ಈ ವಿಡಿಯೋ…

 

View this post on Instagram

 

A post shared by David Júnior (@cantordavidjunior)

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು ಈ ವಿಡಿಯೋ ಮಿಲಿಯನ್ ಗಟ್ಟಲೆ ವೀಕ್ಷಣೆಯನ್ನು ಪಡೆದಿದೆ. ಅಷ್ಟೇ ಅಲ್ಲದೆ ಸುಮಾರು 1 ಲಕ್ಷ 52 ಸಾವಿರ ಜನರು ಲೈಕ್ ಮಾಡಿದ್ದಾರೆ.