ಹುಷಾರು! ಎಲ್ಲರೂ ಕೂಡಿ ಜೋಶ್ ನಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಹಠಾತ್ ಕಣ್ಮರೆ! ಈ ದೃಶ್ಯ ನೋಡಿ ಈ ವಿಡಿಯೋದಲ್ಲಿ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲವು ಕಂಟೆಂಟ್ ಗಳು ಒಮ್ಮೆಲೇ ಗಾಬರಿ ತರಿಸುತ್ತವೆ. ಸೋಶಿಯಲ್ ಮೀಡಿಯಾ ಸೈಟ್ ಗಳಲ್ಲಿ ಸ್ಕ್ರೋಲ್ ಮಾಡುತ್ತಾ ಹೋದಂತೆ ಹೋದಂತೆ ಕೆಲವು ವಿಡಿಯೋಗಳು ಹಠಾತ್ತನೆ ನೋಡುಗನಿಗೆ ಶಾಕ್ ನೀಡುತ್ತದೆ.
ಈಗ ಇಲ್ಲಿ ನೋಡಲಿರುವ ವಿಡಿಯೋ ಸಹ ನಿಮಗೂ ಶಾಕ್ ನೀಡುತ್ತದೆ ಹುಷಾರು! ಸುಮಾರು 25 ರಿಂದ 30 ಜನರ ಯುವಕ ಯುವತಿಯರ ಗುಂಪೊಂದು ತುಂಬಾ ಜೋಶ್ ನಿಂದ ವೃತ್ತಾಕಾರದಲ್ಲಿ ಡ್ಯಾನ್ಸ್ ಮಾಡುತ್ತಿದ್ದಾರೆ. ಇಲ್ಲಿ ಕಂಡುಬರುವ ದೃಶ್ಯದ ಪ್ರಕಾರ, ಎಲ್ಲರೂ ಹದಿಹರೆಯದವರೇ ಆಗಿದ್ದಾರೆ. ಉತ್ಸಾಹದ ಭರದಲ್ಲಿ ಎಲ್ಲರೂ ಕೂಡಿ ನೃತ್ಯ ಮಾಡುತ್ತಿರುವಾಗಲೇ ಆಕಸ್ಮಿಕ ಘಟನೆಯೊಂದು ನಡೆದು ಹೋಗುತ್ತದೆ. ಸಹಜವಾಗಿ ನೋಡುತ್ತಿರುವ ದೃಶ್ಯವೂ ಒಮ್ಮೆಲೆ ಬೆಚ್ಚಿಬಿಳಿಸುತ್ತದೆ. ಕಾರಣ ಕ್ಷಣದಲ್ಲಿಯೇ ಎಲ್ಲರೂ ಒಮ್ಮೆಲೇ ಪಾತಾಳಕ್ಕೆ ಇಳಿದಂತೆ ಅಥವಾ ಹಠಾತ್ ಕಣ್ಮರೆಯಾದಂತೆ ಕಂಡುಬರುತ್ತದೆ. ಇಲ್ಲಿ ಡಾನ್ಸ್ ಮಾಡುತ್ತಿರುವ ನೆಲ ಒಮ್ಮೆಲೆ ಭೂಮಿಯೊಳಗೆ ಕುಸಿದು ಬಿಡುತ್ತದೆ. ಇದು ಹೇಗೆ ಮತ್ತು ಯಾವ ರೀತಿ ಘಟಿಸಿತು ಎಂದು ತಿಳಿದುಕೊಳ್ಳಲು ಯೂಸರ್ ನಿಶ್ಚಿತವಾಗಿಯೂ ಮತ್ತೊಮ್ಮೆ ಮಗದೊಮ್ಮೆ ಈ ವಿಡಿಯೋ ನೋಡಲು ಮುಂದಾಗುತ್ತಾನೆ.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ವಿಡಿಯೋ ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಹಾದಸಾ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ.