ಹೆಂಡತಿಯ ಅಡುಗೆ ಮಾಡುವ ಪದ್ಧತಿ ನೋಡಿ ಗಂಡ ಗಾಬರಿಯಾಗಿ ಮಾಡಿದ ಮೊದಲ ಕೆಲಸ ನೋಡಿ…

ಗಂಡ ಹೆಂಡಿರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾದ ನೆಟ್ಟಿಗರಿಗೆ ತುಂಬಾ ಮಜಾ ನೀಡುತ್ತವೆ. ಇಲ್ಲಿ ಪುಟ್ಟ ಹಾಗೂ ಒಳ್ಳೆಯ ಕಾನ್ಸೆಪ್ಟ್ ಗಳ ಮೇಲೆ ರೀಲ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ನಂತರ ಇವು ಸಾಕಷ್ಟು ವೈರಲ್ ಆಗುತ್ತವೆ. ಸದ್ಯ ಇಲ್ಲಿ ನೋಡಲಿರುವ ಇದೇ ರೀತಿಯ ಒಂದು ರೀಲ್ ತುಂಬಾ ಕಾಮಿಡಿ ಆಗಿದೆ.

ಈ ವಿಡಿಯೋದಲ್ಲಿ ಅಡುಗೆ ಮನೆಯ ಸೀನ್ ಇದೆ. ಮನೆಯೊಡತಿ ಅಡುಗೆ ಮಾಡುವಾಗ ಗಂಡ ಮತ್ತು ಮಗಳು ಸಹ ಅಲ್ಲಿಯೇ ಇರುತ್ತಾರೆ. ಈ ಸಂದರ್ಭದಲ್ಲಿ ಗೃಹಿಣಿ ಮಾಡುತ್ತಿರುವ ಅಡುಗೆಗೆ ವಗ್ಗರಣೆ ನೀಡಿದಾಗ ಪ್ಯಾನ್ ಎಲ್ಲ ಉರಿ ಹತ್ತಿಕೊಳ್ಳುತ್ತದೆ. ಇದನ್ನು ನೋಡಿದ ಗಂಡ ಅಲ್ಲಿ ಕ್ಷಣವೂ ನಿಲ್ಲದೆ ತನ್ನ ಮಗಳನ್ನು ಜೊತೆಯಲ್ಲಿ ತೆಗೆದುಕೊಂಡು ಅಡುಗೆಮನೆಯಿಂದ ಮೊದಲು ಪರಾರಿಯಾಗುತ್ತಾನೆ. ಈ ರೀತಿ ಪರಾರಿಯಾಗುವ ಹೊತ್ತಿನಲ್ಲಿ ಅಡುಗೆ ಮನೆಯ ಬಾಗಿಲು ಮುಚ್ಚಿಕೊಂಡು ಹೋಗುತ್ತಾನೆ. ನೀನೆನಾದರೂ ಮಾಡಿಕೊ ನಾವಷ್ಟು ಚೆನ್ನಾಗಿದ್ದರೆ ಸಾಕು ಎನ್ನುವಂತಿತ್ತು ಗಂಡನ ವರಸೆ.

ನೋಡಿ ಈ ವಿಡಿಯೋ…

 

View this post on Instagram

 

A post shared by gulusu.guzel (@gulusumm1)

ಪ್ರಸ್ತುತ ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ gulusumm1 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಜನರು ನೋಡಿದ್ದಲ್ಲದೆ ಸಾಕಷ್ಟು ಜನರು ಲೈಕ್ ಸಹ ಮಾಡಿದ್ದಾರೆ.