ಹೆಂಡತಿಯ ಹವ್ಯಾಸವನ್ನೇ ‘ಉದ್ಯೋಗ’ ಮಾಡಿಕೊಂಡ; ಇಂದು ಕೋಟಿಗಟ್ಟಲೆ ಸಂಪಾದನೆ!

ಯುವಪೀಳಿಗೆ ತಮ್ಮ ಹವ್ಯಾಸಗಳಲ್ಲಿಯೇ ಹೊಸ ದಾರಿ ಹುಡುಕಿ ಅದರಲ್ಲಿಯೇ ಬಿಜಿನೆಸ್ ಐಡಿಯಾವನ್ನು ಕಂಡು ಕೊಳ್ಳುತ್ತಾರೆ. ನಾವು ಹೀಗೆ ಎಷ್ಟೋ ಸ್ಟಾರ್ಟ್ ಅಪ್ ಗಳ ಬಗ್ಗೆ ಕೇಳಿದ್ದೇವೆ, ನೋಡಿದ್ದೇವೆ. ಅವುಗಳ ಪ್ರಾರಂಭ ಹವ್ಯಾಸಕ್ಕಾಗಿ ಮಾಡಿದ್ದು ನಂತರ ಜನರ ಮೆಚ್ಚುಗೆ ಗಳಿಸಿದ ಮೇಲೆ ಅದು ಬಿಜಿನೆಸ್ ಸ್ವರೂಪದಲ್ಲಿ ಬದಲಾದದ್ದು. ಇಂದು ಇಂಥದ್ದೇ ಒಂದು ಸ್ಟಾರ್ಟ್ ಅಪ್ ಬಿಜಿನೆಸ್ ಬಗ್ಗೆ ನಾವು ಹೇಳುವವರಿದ್ದೇವೆ. ಇಲ್ಲಿ ಪತ್ನಿಯ ಹವ್ಯಾಸ ಗಂಡನಿಗೆ ಕೋಟ್ಯಾಧಿಪತಿಯನ್ನು ಮಾಡಿದೆ.

ಗಗನ್ ಜೈನ್ ತನ್ನ ಪತ್ನಿ ತಯಾರಿಸಿದ ಪೆಂಟೆಡ್ ಶರ್ಟ್ ಧರಿಸಿ ಹೊರಗೆ ಹೋದಾಗ ಮಿತ್ರರು ಹಾಗೂ ಬಂಧುಗಳು ತುಂಬಾ ಹೊಗಳುತ್ತಿದ್ದರು. ಅವರ ಪತ್ನಿ ಶರ್ಟಿನ ಮೇಲೆ ತನ್ನ ಹವ್ಯಾಸದಿಂದ ಪೇಂಟಿಂಗ್ ಮಾಡುತ್ತಿದ್ದಳು. ಜನರ ಮೆಚ್ಚಿಗೆಯನ್ನು ಅರಿತ ಗಗನ್ ನನ್ನ ಶರ್ಟ್ ಇವರಿಗೆ ಮೆಚ್ಚುಗೆಯಾಗುತ್ತಿದ್ದರೆ ಅವರು ಇದನ್ನು ಖರೀದಿಯೂ ಸಹ ಮಾಡೇ ಮಾಡುತ್ತಾರೆಂದು ಸ್ಕೆಚ್ ಹಾಕಿದನು. ಇದರಲ್ಲಿ ಒಂದು ಬಿಜಿನೆಸ್ ಐಡಿಯಾ ಕಂಡು ಬಂದು ತನ್ನ ಸ್ಟಾರ್ಟ್ ಅಪ್ ಪ್ರಾರಂಭಿಸುವ ನಿರ್ಣಯ ಮಾಡಿದನು.

ಸುಮಾರು ನಾಲ್ಕು ವರ್ಷಗಳ ಮೊದಲು ಗಗನ್ ತನ್ನ ಪತ್ನಿ ನೀತಿ ಜೈನ್ ಜೊತೆಗೆ ಈ ಐಡಿಯಾ ಬಗ್ಗೆ ತಲೆಕೆಡಿಕೊಂಡು ಇಂದೂರಿಗೆ ಬಂದು 15 ಲಕ್ಷ ರೂಪಾಯಿಗಳ ಸ್ವಂತದ ‘ರಂಗರೇಜ್’ ಹೆಸರಿನ ಕಂಪನಿಯ ಪ್ರಾರಂಭ ಮಾಡಿದರು.

ಕಂಪನಿ ಪ್ರಾರಂಭ ಮಾಡುವ ಮೊದಲು ಕೆಲವು ವರ್ಷಗಳ ವರೆಗೆ ಮಸ್ಕತ್ ನಲ್ಲಿ ವರ್ಕಿಂಗ್ ವೀಸಾದ ಮೇಲೆ ಒಂದು ಫ್ಯಾಷನ್ ಬ್ರಾಂಡ್ ಸಲುವಾಗಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿಗೆ ಪೇಂಟಿಂಗ್ ದ ತುಂಬಾ ಹುಚ್ಚಿತ್ತು. ಆದರೆ ಅಲ್ಲಿ ಅವಳು ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ. ತನ್ನ ಹವ್ಯಾಸವನ್ನು ಪೂರ್ಣಗೊಳಿಸಲು ತನ್ನ ಗಂಡನ ಶರ್ಟಿನ ಮೇಲೆ ಪೇಂಟಿಂಗ್ ತೆಗೆಯಲು ಶುರು ಮಾಡಿದಳು. ಆಗ ಕೆಲವರು ಈ ತರದ ಶರ್ಟ್ ಗಳನ್ನು ಖರೀದಿಸಲು ಮುಂದಾದಾಗ ಇದನ್ನೇ ಬಿಜಿನೆಸ್ ನಲ್ಲಿ ರೂಪಾಂತರ ಮಾಡುವ ವಿಚಾರ ಮಾಡಿದನು. ಅವತ್ತೇ ದೆಹಲಿಯಿಂದ ಕೆಲಸ ಬಿಟ್ಟು ಇಂದೂರಿಗೆ ಬಂದು ರಂಗರೇಜ್ ಅಂಗಡಿಯ ಬುನಾದಿಯನ್ನು ಹಾಕಿದರು.

ಕಂಪನಿ ಮೊದಲು ಬರೀ ಔಟ್ ಫಿಟ್ಸ್ ಗಳ ಡಿಸೈನ್ ಮಾಡುತ್ತಿತ್ತು. ಮುಂದೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಹ್ಯಾಂಡಿ ಕ್ರಾಫ್ಟ್ಸ್, ಪಿಲ್ಲೋ, ಬೆಡ್ ಶೀಟ್ ಕವರ್, ಮತ್ತು ಹೀಗೆಯೇ ಬೇರೆ ಬೇರೆ ಐಟಮ್ ಗಳ ಮೇಲೂ ಡಿಸೈನ್ ಮಾಡಲು ಶುರು ಮಾಡಿದರು. ಇಂದು ಕಂಪನಿಯ ವರ್ಷದ ಟರ್ನ್ ಓವರ್ 2 ಕೋಟಿಗಳವರೆಗೆ ಮುಟ್ಟಿದೆ. ಇಷ್ಟೇ ಅಲ್ಲ ಸುಮಾರು 200 ಕೆಲಸಗಾರರು ಇವರ ಕಂಪನಿಯ ಜೊತೆಗೆ ಸಂಲಗ್ನರಾಗಿದ್ದಾರಲ್ಲದೆ, ಜೊತೆಗೆ ದೇಶವಷ್ಟೇ ಅಲ್ಲ ಜಗತ್ತಿನ ತುಂಬಾ ಗ್ರಾಹಕರಿಗೆ ಅವರ ಡಿಮಾಂಡ್ ಪೂರ್ಣ ಗೊಳಿಸುತ್ತಿದ್ದಾರೆ.

ಗಗನ್ ಮತ್ತು ನೀತಿ ಇವರ ಸಫಲತೆಯಿಂದ ನಮಗೆ ತಿಳಿಯುವ ಪಾಠ ವೇನೆಂದರೆ, ನಮ್ಮ ಸುತ್ತ ಮುತ್ತ ಸಾವಿರಾರು ಬಿಜಿನೆಸ್ ಐಡಿಯಾಗಳು ಇರುತ್ತವೆ. ಅವುಗಳನ್ನು ಓರೆಗೆ ಹಚ್ಚಿ ನೋಡುವ ದೃಷ್ಟಿ ನಮ್ಮಲ್ಲಿರಬೇಕು. ಒಂದು ವೇಳೆ ನಾವು ಇಂಥ ಐಡಿಯಾಗಳನ್ನು ತಿಳಿದುಕೊಳ್ಳಲು ಯಶಸ್ವಿಯಾಗಿ ಗ್ರಾಹಕರ ಮುಂದೆ ಸರಿಯಾದ ಪದ್ಧತಿಯಲ್ಲಿ ಪ್ರಸ್ತುತ ಮಾಡಿದರೆ ಈ ಜಗತ್ತಿನಲ್ಲಿ ಯಾವ ಕೆಲಸವು ಸಫಲವಾಗದೆ ಇರುವದಿಲ್ಲ, ಏನಂತೀರಾ?