ಹೆಂಡತಿ ಇದ್ದರೆ ಹೀಗಿರಬೇಕು, ತನ್ನನ್ನೇ ಕೊಲೆ ಮಾಡಲು ಬಂದ ಗಂಡನಿಗೆ ಉಳಿಸಿದಳು. ನಿಜಕ್ಕೂ ಅಲ್ಲಿ ನಡೆದದ್ದಾದರೂ ಏನು?

ದೇಶದ ರಾಜಧಾನಿಯ ತ್ರಿಲೋಕಪುರಿಯ ಪರಿಸರದಲ್ಲಿಯ CCTV ಕ್ಯಾಮೆರಾದಲ್ಲಿ ಒಂದು ವಿಚಿತ್ರ ಘಟನೆ ಸೆರೆಯಾಗಿದೆ. ಕೋಪದ ಭರದಲ್ಲಿ ಗಂಡ ತನ್ನ ಹೆಂಡತಿಯನ್ನು ಜೀವ ಸಹಿತ ಹೊಡೆಯಲು ಪೆಟ್ರೋಲ್ ತೆಗೆದುಕೊಂಡು ಬಂದಿದ್ದಾನೆ. ನಂತರ ತನ್ನ ಮತ್ತು ಪತ್ನಿಯ ಮೈ ಮೇಲೆ ಪೆಟ್ರೋಲನ್ನು ಸಿಂಪಡಿಸಿ ಹೆಂಡತಿಯನ್ನು ಸುಡಬೇಕೆಂದು ಯತ್ನಿಸುತ್ತಿರುವಾಗ ಉರಿ ತನಗೆ (ಗಂಡನಿಗೆ) ಹತ್ತಿದೆ. ಇದನ್ನು ಕಂಡು ಹೆಂಡತಿ ಅಂಥ ಪರಿಸ್ಥಿಯಲ್ಲಿಯೂ ದೃತಿಗೆಡದೆ ತನ್ನ ಗಂಡನ ಜೀವವನ್ನು ಕಾಪಾಡಿದ್ದಾಳೆ. ಗಂಡ ಅಲ್ಪಸ್ವಲ್ಪ ಗಾಯವಾಗಿದ್ದರಿಂದ ಪತಿಯನ್ನು ಉಪಚಾರಕ್ಕಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹಿಂದಿ ನ್ಯೂಜ್ ಚಾನೆಲ್ ಆಜ್ ತಕ್ ನೀಡಿದ ಮಾಹಿತಿ ಪ್ರಕಾರ, ಗಾಯವಾದ ವ್ಯಕ್ತಿಯ ಹೆಸರು ಆರಿಫ್ (35) ಇದ್ದು ಲಾಕ್ ಡೌನ್ ಕಾರಣದಿಂದ ಮೆರಟ್ ನಲ್ಲಿ ಸಿಕ್ಕಿ ಬಿದ್ದಿದ್ದ. ಲಾಕ್ ಡೌನ್ ಶಿಥಿಲವಾದ ನಂತರ ಆರಿಫ್ ದಿಲ್ಲಿಯ ತನ್ನ ಮನೆಗೆ ಮರಳಿದ್ದನು. ಆರಿಫ್ ಮತ್ತು ಆತನ ಹೆಂಡಟಿ ಇರ್ವರಲ್ಲಿ ಸತತ ಜಗಳವಾಗುತ್ತಿತ್ತು.

ಮೆರಟ್ ನಿಂದ ಮರಳಿದ ನಂತರ ಆರಿಫ್ ಈ ಜಗಳಕ್ಕೆ ಕೊನೆ ಹಾಡುವ ಉದ್ದೇಶದಿಂದ ತನ್ನ ಜೊತೆಗೆ ಹೆಂಡತಿಯನ್ನು ಮುಗಿಸಿ ಬಿಡಬೇಕೆಂದು ನಿರ್ಣಯಿಸಿದನು.

ಆರಿಫ್ ಹೆಂಡತಿ ಮತ್ತು ಸ್ವತಃ ಸಾಯುವ ಉದ್ದೇಶದಿಂದ ಪೆಟ್ರೋಲ್ ತಂದನು. ಸ್ವತಃ ಮತ್ತು ಪತ್ನಿಯ ಮೈಮೇಲೆ ಪೆಟ್ರೋಲ್ ಸಿಂಪಡಿಸಿದ ನಂತರ ಗಂಡನ ಉದ್ದೇಶವನ್ನು ಅರಿತ ಹೆಂಡತಿ ಜಾಗ್ರತಳಾಗಿ ತನ್ನನ್ನು ತಾನು ರಕ್ಷಿಸಿಕೊಂಡಿದ್ದಾಳೆ. ಆದರೆ ಅದೇ ಸಮಯಕ್ಕೆ ಆರಿಫ್ ತೊಟ್ಟ ಬಟ್ಟೆಗಳಿಗೆ ಬೆಂಕಿ ಹೊತ್ತಿಕೊಂಡಿತು. ಇದನ್ನು ನೋಡಿದ ಆರಿಫ್ ನ ಹೆಂಡತಿ ಚಾಕಚಕ್ಯತೆಯಿಂದ ಸಮಯ ಇರುತ್ತಲೇ ಆತನ ಮೇಲೆ ಬ್ಲ್ಯಾಂಕೇಟ್ ಹೊದ್ದು ತಕ್ಷಣ ಉರಿಯನ್ನು ಆರಿಸಲಾಯಿತು. ಅದಾದ ನಂತರ ಅಲ್ಪಸ್ವಲ್ಪ ಸುಟ್ಟ ಗಂಡನಿಗೆ ಉಪಚಾರದ ಸಲುವಾಗಿ ಸಮೀಪದ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದಾರೆ.