ಹೆಂಡತಿ ಮಾಡಿದಳು ಮೋಸ ; MS ಧೋನಿಯಿಂದಾಗಿ ತಂಡದಲ್ಲಿ ಸ್ಥಾನ ಸಿಗಲಿಲ್ಲ ! ಆದರೂ ಸೋಲದ DK ಅವರ ಸ್ಪೂರ್ತಿದಾಯಕ ಸ್ಟೋರಿ…

ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮ್ಯಾನ್ ದಿನೇಶ್ ಕಾರ್ತಿಕ್ ಅವರು 2007 ರಲ್ಲಿ ಪತ್ನಿ ನಿಕಿತಾ ಜೊತೆಗೆ ಮದುವೆಯಾದರು. ಇಬ್ಬರ ತಂದೆಯಂದಿರು ಒಳ್ಳೆಯ ಆಪ್ತಮಿತ್ರರಾಗಿದ್ದರಿಂದ ಹಾಗೂ ಇಬ್ಬರ ಸಮ್ಮತಿಯಿಂದ ಈ ಮದುವೆ ನೆರವೇರಿತು. ಮುಂದೆ 2012 ರಲ್ಲಿ ದಿನೇಶ್ ಕಾರ್ತಿಕ್ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುತ್ತಿರುವಾಗ ಕ್ರಿಕೆಟರ್ ಮುರಳಿ ವಿಜಯ್ ಮತ್ತು ತಮ್ಮ ಹೆಂಡತಿ ನಿಖಿತಾ ಇವರಿಬ್ಬರಲ್ಲೂ ಅಫೇರ್ ಇರುವುದರ ಬಗ್ಗೆ ಗೊತ್ತಾಯಿತು.

ವೈವಾಹಿಕ ಜೀವನದಲ್ಲಿ ದಿನೇಶ್ ಕಾರ್ತಿಕ್ ಅವರಿಗೆ ಬಡಿದ ಈ ಬರಸಿಡಿಲು ಅವರ ಮನಸ್ಸಿಗೆ ತುಂಬಾ ನೋವನ್ನುಂಟು ಮಾಡಿತು. ಕಾರಣ ಇಲ್ಲಿ ಪತ್ನಿ ಹಾಗೂ ಮಿತ್ರ ಇಬ್ಬರಿಂದಲೂ ವಿಶ್ವಾಸಘಾತವಾಗಿತ್ತು. ನಂತರ ದಿನೇಶ್ ಅವರು ಪತ್ನಿ ನಿಖಿತಾಗೆ ವಿಚ್ಛೇದನೆಯನ್ನು ನೀಡಿದರು. ಕೆಲವೇ ದಿವಸಗಳ ನಂತರ ನಿಕಿತಾ ಪ್ರೆಗ್ನೆಂಟ್ ಇರುವ ಬಗ್ಗೆ ತಿಳಿಯಿತು. ತದನಂತರ ನಿಕಿತಾ ಮುರಳಿ ವಿಜಯ್ ಅವರ ಜೊತೆಗೆ ಮದುವೆಯಾಗಿ ಹೊಸ ಜೀವನ ಶುರು ಮಾಡಿದರು.

ದಿನೇಶ್ ಕಾರ್ತಿಕ್ ಅವರ ಜೀವನದಲ್ಲಿ ಎದ್ದ ಆ ಬಿರುಗಾಳಿಯನ್ನು ಯಾರು ತಮ್ಮ ಜೀವನದಲ್ಲಿ ನಡೆಯಲು ಇಷ್ಟಪಡುವುದಿಲ್ಲ. ಆದರೆ ದಿನೇಶ್ ಕಾರ್ತಿಕ್ ಆ ಸಮಯದಲ್ಲಿ ಸ್ವಲ್ಪವೂ ಕುಗ್ಗದೆ ಈ ಎಲ್ಲ ಸಮಸ್ಯೆಗಳನ್ನು ಒಂದೊಂದಾಗಿ ಹ್ಯಾಂಡಲ್ ಮಾಡುವಲ್ಲಿ ಯಶಸ್ಸು ಸಾಧಿಸಿದರು. ಇಷ್ಟಾದ ಮೇಲೆ ದಿನೇಶ್ ಕಾರ್ತಿಕ್ ಅವರು ತಮ್ಮ ಪತ್ನಿಯ ಹೆಸರನ್ನು ಎಂದಿಗೂ ಯಾರ ಮುಂದೆಯೂ ಸಾರ್ವಜನಿಕ ಸ್ಥಳದಲ್ಲಿ ತೆಗೆದುಕೊಂಡಿಲ್ಲ ಹಾಗೂ ಅವರ ಅವಮಾನವನ್ನು ಮಾಡಿಲ್ಲ. ತುಂಬಾ ಶಾಂತವಾಗಿಯೇ ನಿಕಿತಾಳಿಂದ ದಿನೇಶ್ ಅವರು ಬೇರೆಯಾದರು.

ತನ್ನ ವೈವಾಹಿಕ ಜೀವನದಲ್ಲಿ ಪತ್ನಿಯಿಂದಾಗಿ ಇಷ್ಟೊಂದು ಬಿರುಗಾಳಿ ಎದ್ದರೂ ಯಾರ ಮುಂದೆಯೂ ಎಲ್ಲಿಯೂ ಹೆಂಡತಿಯ ಬಗ್ಗೆ ಕೆಟ್ಟ ನುಡಿಗಳನ್ನು ಮಾತನಾಡದ ದಿನೇಶ್ ಕಾರ್ತಿಕ್ ಅವರು ಎಂತಹ ಸಜ್ಜನ ವ್ಯಕ್ತಿ ಇರಬಹುದು ಎಂಬುದನ್ನು ತಿಳಿದುಕೊಳ್ಳಬಹುದು. ದಿನೇಶ್ ಕಾರ್ತಿಕ್ ಅವರ ಜೊತೆಗೆ ನಡೆದ ಘಟನೆ ಬೇರೆ ಯಾರ ಜೊತೆಯಲ್ಲಿಯೇ ನಡೆದರೂ ಸಹಜವಾಗಿಯೇ ಅವರು ನ್ಯೂಸ್ ಚಾನೆಲ್, ಸೋಶಿಯಲ್ ಮೀಡಿಯಾ ಅಂತ ಎಲ್ಲ ಕಡೆಗೆ ಬೊಬ್ಬೆ ಹೊಡೆಯುತ್ತಿದ್ದರು. ಆದರೆ ಈ ಸಂಪೂರ್ಣ ಪ್ರಕರಣದಲ್ಲಿ ದಿನೇಶ್ ಕಾರ್ತಿಕ್ ಅವರು ತುಂಬಾ ಸಂಯಮವನ್ನು ತೋರಿದರು. ಈ ಪ್ರಕರಣದಿಂದ ಕಪಲ್ಸ್ ಗಳು ತಮ್ಮ ಜೀವನದ ಬಗ್ಗೆ ಇರುವ ಯಾವುದೇ ಚಿಕ್ಕ ಪುಟ್ಟ ಘಟನೆಗಳನ್ನು ಸಾರ್ವಜನಿಕವಾಗಿ ಬಹಿರಂಗ ಮಾಡಬಾರದೆಂಬ ಪಾಠವನ್ನು ದಿನೇಶ್ ಕಾರ್ತಿಕ್ ಅವರು ಹೇಳಿಕೊಟ್ಟಿದ್ದಾರೆ.

ದಿನೇಶ್ ಕಾರ್ತಿಕ್ ಅವರ ಕರಿಯರ್ ನಲ್ಲಿ ಒಂದು ಸಮಯ ಹೀಗೂ ಬಂದಿತ್ತು. ಅವರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗುತ್ತಿರಲಿಲ್ಲ. 2004 ರಲ್ಲಿ ದಿನೇಶ್ ಅವರು ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದರು. ಮೊದಮೊದಲು ದಿನೇಶ್ ಕಾರ್ತಿಕ್ ಅವರು ತಮ್ಮ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ನಿಂದ ಎಲ್ಲರನ್ನೂ ಪ್ರಭಾವಿತಗೊಳಿಸಿದರು. ಆದರೆ ಮುಂದೆ ಅವರ ಕರಿಯರ್ ಗೆ ಬ್ರೇಕ್ ಹತ್ತಲು ಶುರುವಾಯಿತು. ಕಾರಣ ಆ ಸಮಯದಲ್ಲಿ ಟೀಮ್ ಇಂಡಿಯಾದಲ್ಲಿ ಎಂಎಸ್ ಧೋನಿ ಅವರ ಉದಯವಾಯಿತು. ಧೋನಿ ಅವರು ತುಂಬಾ ಒಳ್ಳೆಯ ಫಾರಂನಲ್ಲಿ ಇರುವುದರಿಂದ ಕಾರ್ತಿಕ್ ಅವರ ಟೀಮ್ ಇಂಡಿಯಾದಲ್ಲಿ ಸ್ಥಾನ ಅಲುಗಾಡಲು ಶುರುವಾಯಿತು.

ಈಗ ಇಲ್ಲಿಯವರೆಗೆ ವಿಚಾರ ಮಾಡಿದರೆ ಕಳೆದ 18 ವರ್ಷಗಳಿಂದ ದಿನೇಶ್ ಕಾರ್ತಿಕ್ ಅವರಿಗೆ ಟೀಮ್ ಇಂಡಿಯಾದಲ್ಲಿ ಭದ್ರವಾದ ಸ್ಥಾನ ಸಿಕ್ಕಿಲ್ಲ. ದಿನೇಶ್ ಕಾರ್ತಿಕ್ ಅವರು ಈ 18 ವರ್ಷಗಳಲ್ಲಿ ಭಾರತದ ಪರ 26 ಟೆಸ್ಟ್, 94 ಏಕದಿನ ಮತ್ತು 32 t-20 ಇಂಟರ್ನ್ಯಾಷನಲ್ ಪಂದ್ಯಗಳನ್ನು ಆಡಿದ್ದಾರೆ. ಮಹೇಂದ್ರ ಸಿಂಗ್ ಧೋನಿಯವರಂತಹ ದಿಗ್ಗಜ ಆಟಗಾರ ತಂಡದಲ್ಲಿ ಇರುವ ಕಾರಣದಿಂದ ದಿನೇಶ್ ಕಾರ್ತಿಕ್ ಅವರಿಗೆ ಸತತವಾಗಿ ಸ್ಟ್ರಗಲ್ ಮಾಡಬೇಕಾಯಿತು. ಸದ್ಯ ದಿನೇಶ್ ಅವರು RCB ಸಲುವಾಗಿ ದೊಡ್ಡ ಮ್ಯಾಚ್ ವಿನ್ನರ್ ಪ್ಲೇಯರ್ ಆಗುತ್ತಿದ್ದಾರೆ. ನಮ್ಮ ಆರ್ಸಿಬಿ ತಂಡಕ್ಕೆ ಈ ಬಾರಿಯಾದರೂ ಟ್ರೋಫಿ ಗೆಲ್ಲಬೇಕಾದರೆ ದಿನೇಶ್ ಕಾರ್ತಿಕ್ ಅವರು ತಮ್ಮ ಈ ಫಾರ್ಮ್ ನ್ನು ಕಂಟಿನ್ಯೂ ಆಗಿ ಇಟ್ಟುಕೊಳ್ಳುವುದು ಮಹತ್ವದಾಗಿದೆ.