ಹೆಬ್ಬಾವಿಗೆ ಅಡ್ಡಲಾಗಿ ನಿಂತು ಈ ಮಗು ಮಾಡುವ ಕೆಲಸ ನೋಡಿದಾಗ ನೋಡುಗರಿಗೂ ಹರಿಯುತ್ತೆ ಬೆವರು! ವೈರಲ್ ವೀಡಿಯೋ…
ಸೋಶಿಯಲ್ ಮೀಡಿಯಾದಲ್ಲಿ ಅನೇಕ ಚಿತ್ರ-ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇಂಥ ವಿಡಿಯೋಗಳನ್ನು ನೋಡಿದಾಗ ನಿಜಕ್ಕೂ ಕೆಲವೊಂದು ಸಲ ಮೈ ಜುಮ್ ಎನ್ನುವುದರ ಜೊತೆಗೆ ಬೆವರಿ ಹೋಗುವುದು. ಇದೇ ರೀತಿಯ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ಚಿಕ್ಕಮಗು ಒಂದು ಹೆಬ್ಬಾವಿನ ಜೊತೆಗೆ ಆಟ ಆಡುವುದು ಕಂಡುಬರುತ್ತದೆ. ಇದನ್ನು ನೋಡಿದಾಗ ಮನುಷ್ಯ ದಂಗಾಗುತ್ತಾನೆ.
ಸಾಮಾನ್ಯವಾಗಿ ಮನುಷ್ಯನು ಹಾವು ಈ ಶಬ್ದ ಕೇಳಿದಾಗಲೇ ಹೆದರುತ್ತಾನೆ. ಅಥವಾ ಆತನ ಮೈ ಜುಮ್ಮೆನ್ನುತ್ತದೆ. ಆದರೆ ಈ ವಿಡಿಯೋದಲ್ಲಿ ಕಂಡುಬರುವ ಮಗುವಿನ ಧೈರ್ಯ ನೋಡಿದಾಗ ಆಶ್ಚರ್ಯವಾಗುತ್ತದೆ. ಈ ಹುಡುಗಿಯ ಎದುರಿನಿಂದ ದೊಡ್ಡದಾದ ಹೆಬ್ಬಾವು ಬಂದನಂತರ ಆಕೆ ನಿಶ್ಚಿಂತೆಯಿಂದ ಇರುತ್ತಾಳೆ. ಅದನ್ನು ನೋಡಿ ಆಕೆ ಸ್ವಲ್ಪವೂ ಗಾಬರಿ ಅಥವಾ ಹೆದರುವುದಿಲ್ಲ. ಅಷ್ಟೇ ಏಕೆ ಅದು ಹೋಗುವ ದಾರಿಗೆ ಅಡ್ಡಲಾಗಿ ನಿಲ್ಲುತ್ತಾಳೆ.
ವಿಡಿಯೋ ನೋಡಿ
ಈ ರೀತಿಯ ದೃಶ್ಯವು ಬಹುಶಃ ನೀವು ನೋಡಲಿಕ್ಕಿಲ್ಲ. ಇಬ್ಬರ ಟ್ಯೂನಿಂಗ್ ನೋಡಿ ನೋಡಿಗರು ಬೆರಗಾಗಿದ್ದಾರೆ. ಈ ವಿಡಿಯೋವನ್ನು ‘snake._.world’ ಇನ್ಸ್ಟಾಗ್ರಾಂ ಅಕೌಂಟ್ ಮೂಲಕ ಶೇರ್ ಮಾಡಿದ್ದಾರೆ. ವಿಡಿಯೋ ಇಲ್ಲಿತನಕ 90000 ವರೆಗೆ ವೀಕ್ಷಣೆಯಾಗಿದೆ. ಜೊತೆಗೆ ನೇಟಿಜನ್ಸ್ ಗಳು ತುಂಬಾ ತಮಾಷೆಯ ಕಮೆಂಟ್ಸ್ ಗಳನ್ನು ಸಹ ಮಾಡುತ್ತಿದ್ದಾರೆ.