ಹೊಟ್ಟೆಗೆ ತುತ್ತು ಅನ್ನಕ್ಕೂ ಗತಿ ಇಲ್ಲವೆಂದು ಭಿಕ್ಷೆ ಬೇಡುತ್ತಿದ್ದ ‘ಈ’ ವ್ಯಕ್ತಿ ಇಂದು ಸಂಪಾದಿಸುತ್ತಿರುವುದು ಕೋಟಿ ಕೋಟಿ ರೂಪಾಯಿ!

ಪ್ರಯತ್ನದ ಮೂಲಕ ಸುಂದರ ಭವಿಷ್ಯವನ್ನು ರೂಪಿಸಿಕೊಳ್ಳುವುದು ನಮ್ಮ ಕೈಯಿಂದಲೇ ಸಾಧ್ಯ ಎನ್ನುವ ಉದಾಹರಣೆ ಈ ವ್ಯಕ್ತಿಯು ಸಮರ್ಪಕವಾಗಿ ನೀಡಿದ್ದಾರೆ ಎಂದರೆ ತಪ್ಪಲ್ಲ. ಮೇಧಾವಿಗಳು ಹೇಳುವ ಹಾಗೆ ಬಡತನದಲ್ಲಿ ಹುಟ್ಟುವುದು ತಪ್ಪಲ್ಲ, ಆದರೆ ಬಡತನದಲ್ಲಿಯೇ ಸಾಯುವುದು ತಪ್ಪು. ಇದರ ಅರ್ಥ ನಾವೇನು ಪ್ರಯತ್ನವೇ ಪಡದಿದ್ದರೆ ನಾವು ನಿಷ್ಪ್ರಯೋಜಕವೆಂದು ತಿಳಿದುಬರುತ್ತದೆ.

ಇಂದಿನ ಈ ಲೇಖನದಲ್ಲಿ ಎಂಥ ವ್ಯಕ್ತಿಯ ಮಾಹಿತಿಯನ್ನು ನೀಡಲಾಗಿದೆ ಎಂದರೆ ಆ ವ್ಯಕ್ತಿಯು ಒಂದು ಸಮಯದಲ್ಲಿ ಭಿಕ್ಷೆ ಬೇಡಿ ತನ್ನ ಹೊಟ್ಟೆಯನ್ನು ತುಂಬಿಕೊಳ್ಳುತ್ತಿದ್ದ. ಇಂದು ಅವರು ಸುಮಾರು 50 ಕೋಟಿ ರೂಪಾಯಿಗಳ ಕಂಪನಿಯ ಒಡೆಯರಾಗಿದ್ದಾರೆ. ಅವರ ಹೆಸರು ರೇಣುಕಾ ಆರಾಧ್ಯ.

ರೇಣುಕಾ ಅವರ ಜನ್ಮ ಬೆಂಗಳೂರು ಹತ್ತಿರದ ಗೋಪಸಂದ್ರದಲ್ಲಿ ಆಯಿತು. ತಂದೆ ಒಂದು ಮಂದಿರದ ಪೂಜಾರಿ ಯಾಗಿದ್ದರು. ಇದಕ್ಕಾಗಿ ಅವರಿಗೆ ಬೇರೆ ಯಾವದೇ ರೀತಿಯ ಗೌರವಧನ ದೊರೆಯುತ್ತಿರಲಿಲ್ಲವಾದ್ದರಿಂದ ಮನೆಮನೆಗೆ ಭಿಕ್ಷೆ ಬೇಡಿ ತಮ್ಮ ಮತ್ತು ತಮ್ಮ ಕುಟುಂಬದ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿದ್ದರು. ಆಗ ರೇಣುಕಾ ಅವರು ತಂದೆಯ ಜೊತೆಗೆ ಭಿಕ್ಷೆ ಬೇಡಲು ಮನೆ ಮನೆಗೆ ಹೋಗುತ್ತಿದ್ದರು. ಇವರ ಮನೆಯ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿ ಇರದ ಕಾರಣ ತಂದೆಯವರು ರೇಣುಕಾ ಅವರಿಗೆ ಬೇರೊಬ್ಬರ ಮನೆಯಲ್ಲಿ ಕೆಲಸಕ್ಕಾಗಿ ಕಳುಹಿಸುತ್ತಿದ್ದರು. ಹಾಗೆ ಒಂದೆರಡು ವರ್ಷಗಳವರೆಗೆ ಒಬ್ಬರ ಮನೆಯಲ್ಲಿ ವೃದ್ದರ ಸೇವೆಯನ್ನು ಮಾಡಲು ತಂದೆ ಕಳುಹಿಸಿದರು. ಇದಾದ ನಂತರ ಮುಂದೆ ಇವರನ್ನು ಕೆಲಸಕ್ಕಾಗಿ ಒಂದು ಆಶ್ರಮದಲ್ಲಿ ನೇಮಿಸಲಾಯಿತು. ಇವೆಲ್ಲವನ್ನು ಮಾಡುತ್ತಿರುವಾಗ ಮಧ್ಯದಲ್ಲಿ ತಂದೆಯು ತೀರಿಹೋದರು. ಹೀಗಾಗಿ ಕುಟುಂಬದ ಜವಾಬ್ದಾರಿಯಲ್ಲವು ರೇಣುಕಾ ಅವರ ಮೇಲೆ ಬಿದ್ದಿತು.

ಆರ್ಥಿಕ ಪರಿಸ್ಥಿತಿ ಚೆನ್ನಾಗಿರದ ಕಾರಣ ಅಲ್ಲಿ ಇಲ್ಲಿ ಕೆಲಸ ಮಾಡುವುದರಿಂದ ಶಾಲೆಯ ಕಡೆಗೆ ಗಮನ ನೀಡದ್ದಕ್ಕಾಗಿ ಶಿಕ್ಷಣವು ಸಹ ಚೆನ್ನಾಗಿ ಆಗಲಿಲ್ಲ. ಅಲ್ಲಿ ಇಲ್ಲಿ ಕೆಲಸ ಮಾಡುತ್ತಿರುವಾಗ ರೇಣುಕಾ ಅವರು ತಮ್ಮ ಉಜ್ವಲ ಭವಿಷ್ಯಕ್ಕಾಗಿ ಪ್ರಯತ್ನ ಮಾಡುತ್ತಲೇ ಇದ್ದರು. ಜೀವನದಲ್ಲಿ ಏನಾದರೂ ಮಾಡಿ ಸಫಲವಾಗಬೇಕು ಮತ್ತು ಈ ಬಡತನದಿಂದ ಮೇಲೆ ಎಳಬೇಕೆಂದು ಸದಾ ಯೋಚಿಸುತ್ತಿದ್ದರು. ಮುಂದೆ ಆಶ್ರಮದಲ್ಲಿಯ ಕೆಲಸ ಬಿಟ್ಟು ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡತೊಡಗಿದರು. ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡುವ ಅನುಭವವನ್ನು ತೆಗೆದುಕೊಳ್ಳುತ್ತಿರುವಾಗಲೇ ಸೂಟ್ಕೇಸ್, ವ್ಯಾನಿಟಿ ಬ್ಯಾಗ್ ತಯಾರಿಸುವ ಕೆಲಸಕ್ಕೆ ಕೈಹಾಕಿದರು. ಆದರೆ ಕೆಲವೇ ದಿನಗಳಲ್ಲಿ ಈ ವ್ಯವಸಾಯವು ನಿಂತುಬಿಟ್ಟಿತು. ರೇಣುಕಾ ಅವರು ಅಲ್ಲಿಯೇ ಸೋತು ನಿಲ್ಲದೆ ಮದುವೆಯಲ್ಲಿ ಬಂದ ಬಂಗಾರದ ಉಂಗುರವನ್ನು ಹಾಕಿ ಡ್ರೈವಿಂಗ್ ಕಲಿತರು. ಡ್ರೈವಿಂಗ್ ಮುಖಾಂತರ ಬಂದ ಹಣವನ್ನು ಒಗ್ಗೂಡಿಸಿ 2001 ರಲ್ಲಿ ಸಿಟಿ ಸಫಾರಿ ಹೆಸರಿನ ಒಂದು ಕಂಪನಿಯನ್ನು ತೆಗೆದರು.

ಇಲ್ಲಿಂದ ಅವರ ಏಳಿಗೆಯ ಪ್ರವಾಸವು ಎಲ್ಲಿಯೂ ನಿಲ್ಲದೆ ಭರದಿಂದ ಸಾಗಲು ಪ್ರಾರಂಭವಾಯಿತು. ಒಂದು ಬ್ಯಾಂಕಿನಿಂದ ಸಾಲ ಮಾಡಿ ಇಂಡಿಕಾ ಕಾರನ್ನು ಖರೀದಿಸಿದರು. ಇದಾದ ನಂತರ ಒಂದೂವರೆ ವರ್ಷದಲ್ಲಿಯೇ ಮತ್ತೊಂದು ಕಾರನ್ನು ಖರೀದಿಸಿದರು. ಹೀಗೆ ಮಾಡುತ್ತಾ ಮಾಡುತ್ತಾ ಕಾರು ಗಳ ಸಂಖ್ಯೆಯನ್ನು ಹೆಚ್ಚು ಮಾಡಿ ಇಂಡಿಯನ್ ಸಿಟಿ ಟ್ಯಾಕ್ಸಿ ಎಂಬ ಹೆಸರಿನ ಕಂಪನಿಯೊಂದನ್ನು ಪ್ರಾರಂಭಿಸಿದರು. ಇದೇ ಕಂಪನಿ ಈಗ ಪ್ರವಾಸಿ ಕ್ಯಾಬ್ ಟ್ರಾವೆಲ್ ಕಂಪನಿ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು.

ರೇಣುಕಾ ಅವರು 4 ಕಾರುಗಳ ಮುಖಾಂತರ ಪ್ರಾರಂಭಿಸಿದ ಕಂಪನಿಯಲ್ಲಿ ಸದ್ಯ 300 ವಾಹನಗಳಿವೆ. ಇವರ ಕಂಪನಿಯಲ್ಲಿ ಈಗ ಸಾವಿರಕ್ಕೂ ಹೆಚ್ಚು ಕೆಲಸಗಾರರು ಕೆಲಸ ಮಾಡುತ್ತಾರೆ. ಇವರ ಕಂಪನಿಯ ವಾರ್ಷಿಕ ವಹಿವಾಟು 50 ಕೋಟಿ ರೂಪಾಯಿಗಳಷ್ಟು ಇದೆ.

ಬೆಂಗಳೂರಿನಲ್ಲಿ ವಾಸಿಸುವ ರೇಣುಕಾ ಅವರು ಇಂದು 50 ಕೋಟಿ ರೂಪಾಯಿಗಳನ್ನು ಹೊಂದಿರುವ ಕಂಪನಿಯ ಮಾಲೀಕರಾಗಿದ್ದಾರೆ. ಒಂದು ಸಮಯದಲ್ಲಿ ತಿನ್ನಲು ಅನ್ನವು ಸರಿಯಾಗಿ ದೊರೆಯುತ್ತಿರಲಿಲ್ಲ, ಆದರೆ ಇಂದು ಅವರ ಜೀವನ ಶೈಲಿ ತುಂಬಾ ಮೇಲ್ಮಟ್ಟದ ಜೀವನಶೈಲಿಯಾಗಿದೆ.