ಹೊಟ್ಟೆ ನೋವೆಂದು ಡಾಕ್ಟರ್ ಬಳಿ ಹೋದ ರೋಗಿಯ ಎಕ್ಸರೆ ನೋಡಿ ಶಾಕ್ ಆದ ಡಾಕ್ಟರ್!

ರೋಗಿಯೊಬ್ಬನ ಮೇಲೆ ಶಸ್ತ್ರಚಿಕಿತ್ಸೆ ನಡೆಯುತ್ತಿರುವಾಗ, ಅಲ್ಲಿದ್ದ ವೈದ್ಯರೆಲ್ಲರೂ ದಿಗ್ಭ್ರಮೆಗೊಂಡರು, ಕಾರಣ ಶಸ್ತ್ರಕ್ರಿಯೆಯ ಸಂದರ್ಭದಲ್ಲಿ ರೋಗಿಯ ದೇಹದೊಳಗಿನ ಆ ವಸ್ತು ಚಿಂತೆಗೀಡು ಮಾಡುವ ಹಾಗಿತ್ತು.

ಆ ವಸ್ತು ಏನು? ಮತ್ತು ಅದು ಹೇಗೆ ಬಂತು?

ವಾಸ್ತವವಾಗಿ ರೋಗಿಯು ಕೆಲವು ವಾರಗಳ ಹಿಂದೆ ಹೊಟ್ಟೆ ನೋವು ಆಗುತ್ತಿರುವುದರಿಂದ ಆಸ್ಪತ್ರೆಗೆ ಬಂದು ಪ್ರಾಥಮಿಕ ತಪಾಸಣೆ ಮಾಡಿಕೊಂಡು, ಅದಕ್ಕೆ ಬೇಕಾದ ಔಷಧಿಯನ್ನು ತಗೆದುಕೊಂಡು ಹೋದನು. ತದನಂತರ ಕೆಲವು ದಿವಸಗಳ ನಂತರ ಮತ್ತೆ ಹೊಟ್ಟೆಯಲ್ಲಿ ನೋವು ಸ್ವಲ್ಪ ಹೆಚ್ಚೆ ಮರುಕಳಿಸಿದಾಗ ಮತ್ತೆ ಡಾಕ್ಟರ್ ಕಡೆಗೆ ಬಂದನು. ಆಗ ಆತನು ನಡೆದ ಘಟನೆಯನ್ನು ತಿಳಿಸಿದನು.

ಆಕಸ್ಮಿಕವಾಗಿ ತನ್ನ ಹೆಡ್‌ಫೋನ್‌ಗಳ ತಂತಿಯನ್ನು ನುಂಗಿದ್ದೇನೆ ಎಂದು ವೈದ್ಯರಿಗೆ ತಿಳಿಸಿದನು. ಅದನ್ನು ತೆಗೆದುಹಾಕಲು ವೈದ್ಯರು ನಿರ್ಧರಿಸಿದರು. ಮೊದಲು ಆತನ ಮಲದ ಪರೀಕ್ಷಣೆ ಮಾಡಿ ಎಂಡೋಸ್ಕೋಪಿ ಮಾಡಿದರು. ಆ ರಿಪೋರ್ಟ್ ನಲ್ಲಿ ಕೇಬಲ್ ಕಂಡು ಬರಲಿಲ್ಲ. ನಂತರ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಲು ನಿರ್ಧರಿಸಿದರು. ಶಸ್ತ್ರ ಚಿಕಿತ್ಸೆ ಮಾಡುವಾಗ ಆತನು ತಮಗೆ ಸುಳ್ಳು ಹೇಳಿದ್ದಾನೆ ಎಂಬುದು ಡಾಕ್ಟರ್ ಗೆ ತಿಳಿದು ಬಂದಿತು. ಕಾರಣ ಆ ಕೇಬಲ್ ಆತನ ಹೊಟ್ಟೆಯಲ್ಲಿ ಇದ್ದಿರಲಿಲ್ಲ ಹೊರತಾಗಿ ಆತನ ಮೂತ್ರಪಿಂಡದಲ್ಲಿತ್ತು. ಇದನ್ನು ನೋಡಿ ಡಾಕ್ಟರ್ ಸಹ ಆಶ್ಚರ್ಯ ಗೊಂಡಿದ್ದಾರೆ.

ಡಾಕ್ಟರ್ ವಾಲಿಯುಲ್ ಇಸಲ್ಮಾ ಅವರ ಹೇಳಿಕೆಯ ಪ್ರಕಾರ, ‘ನಾನು ಸುಮಾರು 25 ವರ್ಷ ಶಸ್ತ್ರ ಚಿಕಿತ್ಸೆ ಮಾಡಿದ್ದೇನೆ, ಆದರೆ ನನ್ನ ಜೀವನದಲ್ಲಿ ಮೊದಲ ಬಾರಿಗೆ ಈ ಪ್ರಕಾರದ ವಿಚಿತ್ರ ಕೇಸ್ ನೋಡಿದ್ದೇನೆ. ಈ ವ್ಯಕ್ತಿಯು ಚಾರ್ಜರ್ ಕೇಬಲನ್ನು ತನ್ನ ಬಾಯಿಯ ಮುಖಾಂತರ ಹೊಟ್ಟೆಯಲ್ಲಿ ಹಾಕಿಕೊಂಡಿಲ್ಲ ಹೊರತಾಗಿ ಆತನ ಗುಪ್ತಾಂಗದ ಮುಖಾಂತರ ಶರೀರದ ಒಳಗಡೆ ಹಾಕಿಕೊಂಡಿದ್ದಾನೆ” ಎಂದು ಡಾಕ್ಟರ್ ತಿಳಿಸಿದ್ದಾರೆ.