ಹೊಸ ಇಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿದ ಹೀರೋ; ಒಮ್ಮೆ ಚಾರ್ಜ್ ಮಾಡಿದರೆ 210 ಕಿಮೀ ಚಲಿಸುತ್ತೆ! ಬೆಲೆ ಬರೀ..

ಇಂಧನದ ಸಮಸ್ಯೆಯಿಂದಾಗಿ ವಾಹನಗಳಲ್ಲಿ ಅನೇಕ ಹೊಸ ಹೊಸ ಶೋಧಗಳು ಮತ್ತು ಪರ್ಯಾಯಗಳು ಆಟೋಮೊಬೈಲ್ ಕಂಪನಿಯವರು ಶೋಧಿಸುತ್ತಲೇ ಇದ್ದಾರೆ.

ಸದ್ಯ ಎಲೆಕ್ಟ್ರಿಕ್ ವಾಹನಗಳ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸದ್ಯಕ್ಕೆ ಉಪಯೋಗಿಸುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬದಲಾಗಿ ಎಲೆಕ್ಟ್ರಿಕ್ ವಾಹನಗಳ ಉಪಯೋಗ ದ ಬಗ್ಗೆ ಆಟೋಮೊಬೈಲ್ ಕಂಪನಿಗಳು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿವೆ. ಎಲೆಕ್ಟ್ರಿಕ್ ವಾಹನಗಳ ಬೆಲೆಯು ನಮ್ಮ ಬಜೆಟ್ಟಿಗೆ ಸರಿ ಹೋಗುವಂತ ಬಜೆಟ್ ಆಗಿದೆ. ಹೀಗಾಗಿ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಈಗ ಆಟೋಮೊಬೈಲ್ಸ್ ಕಂಪನಿಯಾದ ಹೀರೋ ಸಹಿತ ಎಲೆಕ್ಟ್ರಿಕ್ ಸ್ಕೂಟರನ್ನು ರಸ್ತೆಗೆ ಇಳಿಸಿದೆ.

ಹೀರೋ ಕಂಪನಿಯು ಹೊಸ ಎಲೆಕ್ಟ್ರಿಕ್
Optima Nyx-hx ಲಾಂಚ್ ಮಾಡಿದೆ. ಹೀರೋ ಕಂಪನಿಯು ಸ್ಕೂಟರ್ new city speed ಸೆಗ್ಮೆಂಟ್ ನಲ್ಲಿ ಪ್ರಸ್ತುತಪಡಿಸಿದ್ದಾರೆ. ಇವುಗಳಲ್ಲಿ Optima-hx, Nyx-hx ಮತ್ತು Photon-hx ಈ ಮಾಡೆಲ್ ಗಳನ್ನು ಶಾಮೀಲು ಮಾಡಿದ್ದಾರೆ.

ನೂತನ Nyx-hx ಈ ಸ್ಕೂಟರ್ ಒಂದು ಸಲ ಚಾರ್ಜ್ ಮಾಡಿದ ನಂತರ 210 ಕಿಲೋಮೀಟರ್ ಓಡುತ್ತದೆ ಎಂದು ಕಂಪನಿಯು ತನ್ನ ಮಾಹಿತಿಯಲ್ಲಿ ಸ್ಪಷ್ಟಪಡಿಸಿದೆ. ಇದರಲ್ಲಿ 1.34 ಕಿಲೋವ್ಯಾಟ್ ಬ್ಯಾಟರಿಯನ್ನು ಕೂಡಿಸಲಾಗಿದೆ. ಅಷ್ಟೇ ಅಲ್ಲದೆ ಕಂಪನಿಯು ಸ್ಕೂಟರ್ ನ ಎಲೆಕ್ಟ್ರಿಕ್ ಬ್ಯಾಟರಿ ಚಾರ್ಜ್ ಮಾಡುವ ಸಲುವಾಗಿ ದೇಶಾಂತರ್ಗತ ಒಟ್ಟು 500 ಚಾರ್ಜಿಂಗ್ ಸ್ಟೇಷನ್ ಗಳನ್ನು ಶುರು ಮಾಡಿದೆ. ಹೀಗಾಗಿ ಚಾರ್ಜಿಂಗ್ ಸಂಬಂಧ ಯಾವುದೇ ಸಮಸ್ಯೆಯು ಭವಿಷ್ಯದಲ್ಲಿ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ಕಂಪನಿಯದ್ದಾಗಿದೆ. ಕಂಪನಿಯ ಎಕ್ಸ್ ಶೋರೂಮ್ ಸ್ಕೂಟರ್ ಪ್ರೈಸ್ 63,999 ₹ ಗಳಷ್ಟಿದೆ.

ಇನ್ನು ಈ ಸ್ಕೂಟರ್ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಭಾರ ಹೊತ್ತುಕೊಂಡು ಹೋಗಲು ಮತ್ತು ಇನ್ನಿತರ ಸಾಮಾನುಗಳನ್ನು ತೆಗೆದುಕೊಂಡು ಹೋಗಲು ತುಂಬಾ ಉಪಯುಕ್ತವಾಗಿದೆ. ಕುಳಿತುಕೊಳ್ಳುವ ಸೀಟ್ ಸಹಿತ ಅಡ್ಜಸ್ಟ್ ಮಾಡಬಹುದಾಗಿದೆ.