ಹೋಟೆಲ್ ನಲ್ಲಿ ಊಟ ಮಾಡುವಾಗ ಗಂಟಲಲ್ಲಿ ಸಿಕ್ಕಿತು ತುತ್ತು; ಲೇಡಿ ವೇಟರ್ ಈ ಟ್ರಿಕ್ ನ್ನು ಯೂಸ್ ಮಾಡಿ ಉಳಿಸಿದಳು ಜೀವ!
ಊಟ ಮಾಡುವಾಗ ಅನೇಕ ಸಲ ಗಂಟಲಲ್ಲಿ ಅನ್ನದ ಅಗಳು ಅಥವಾ ತುತ್ತು ಸಿಕ್ಕು ದೊಡ್ಡ ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ. ಬರೀ ಅನ್ನವಷ್ಟೇ ಅಲ್ಲ, ಕೆಲವೊಮ್ಮೆ ನೀರು ಕುಡಿಯುವಾಗಲೂ ಉಸಿರುಗಟ್ಟಿಸಿ ಕೆಮ್ಮಲು ಶುರುವಾಗುತ್ತದೆ. ಈ ಸಂದರ್ಭದಲ್ಲಿ ವ್ಯಕ್ತಿಗೆ ಉಸಿರಾಡಲು ಸಹ ಬರದಂತೆ ತೊಂದರೆ ನಿರ್ಮಾಣವಾಗುತ್ತದೆ. ಇಂಥ ಕಠಿಣ ಪರಿಸ್ಥಿತಿಯಲ್ಲಿ ಕೆಲವೊಂದು ಉಪಾಯಗಳನ್ನು ತಕ್ಷಣ ಅನುಸರಿಸುವುದರಿಂದ ವ್ಯಕ್ತಿಗೆ ಆದಷ್ಟು ಬೇಗ ತೊಂದರೆಯಿಂದ ರಿಲೀಫ್ ಸಿಗುವುದು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇದೇ ರೀತಿಯ ಒಂದು ವಿಡಿಯೋ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಕುಟುಂಬದ ಜೊತೆಗೆ ಹೋಟೆಲ್ ನಲ್ಲಿ ಕುಳಿತು ಊಟ ಮಾಡುತ್ತಿದ್ದಾನೆ. ಈ ಸಂದರ್ಭದಲ್ಲಿ ವ್ಯಕ್ತಿಯ ಗಂಟಲಲ್ಲಿ ಹಠಾತ್ ತುತ್ತೊಂದು ಸಿಕ್ಕಿ ಬೀಳುತ್ತದೆ. ವ್ಯಕ್ತಿಯ ಬದಿಯಲ್ಲಿ ಕುಳಿತ ಮಗ ತಂದೆಯ ಬೆನ್ನನ್ನು ಬಡಿಯಲು ಶುರು ಮಾಡುತ್ತಾನೆ. ಆದರೆ ಗಂಟಲಲ್ಲಿ ಸಿಕ್ಕಿಬಿದ್ದ ತುತ್ತಿನಿಂದ ಪರಿಹಾರ ದೊರೆಯುವುದಿಲ್ಲ. ಇದೇ ಸಮಯದಲ್ಲಿ ಲೇಡಿ ವೇಟರ್ ಒಬ್ಬಳು ಅಲ್ಲಿ ಬರುತ್ತಾಳೆ. ಆಕೆ ಗಂಟಲಲ್ಲಿ ಸಿಲುಕಿದ ತುತ್ತಿನಿಂದ ಮುಕ್ತ ನೀಡಲು ಪ್ರಯತ್ನ ಮಾಡುತ್ತಾಳೆ. ಈ ಪ್ರಯತ್ನದಲ್ಲಿ ಆಕೆ ಯಶಸ್ವಿಯೂ ಆಗುತ್ತಾಳೆ. ಒಟ್ಟಿನಲ್ಲಿ ಆಕೆ ಯಾವ ರೀತಿ ಪ್ರಯತ್ನ ಮಾಡಿದ್ದಾಳೆ ನೋಡಿ ಈ ವಿಡಿಯೋದಲ್ಲಿ..
View this post on Instagram
ಈ ಲೇಡಿ ವೇಟರ್ ಳ ಹೆಸರು ಲೇಸಿ ಗಪ್ಟಿಲ್ ಎಂದು ಹೇಳಲಾಗುತ್ತಿದೆ. ಆಕೆ ಕೆಲವೇ ವರ್ಷಗಳ ಹಿಂದೆ ಈ ಟ್ರಿಕ್ ಅನ್ನು ಕಲಿತಿದ್ದಾಳೆ. ಅದೇ ಇಂದು ಒಬ್ಬನ ಜೀವ ಉಳಿಸಲು ಉಪಯೋಗವಾಯಿತು. ಇವಳೇ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಆದ instagram ನಲ್ಲಿ goodnews_movement ಈ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 1.8 ಮಿಲಿಯನ್ ಗಿಂತಲೂ ಹೆಚ್ಚಿಗೆ ವೀಕ್ಷಣೆಯನ್ನು ಪಡೆದಿದೆ.